ಸರ್ವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

0
21
loading...

ಖಾನಾಪುರ 17: ಬೆಳಗಾವಿ ತಾಲೂಕು ಸಂತಿ ಬಸ್ತವಾಡ ಗ್ರಾಮದ ಸರ್ಕಾರೇತರ ಹೊಟೆಲ್ ಮ್ಯಾನೆಜಮೆಂಟ್ ಸಂಸ್ಥೆ ಆಯೋಜಿಸಿದ್ದ ರುಚಿಕರ ಮತ್ತು ಆರೋಗ್ಯಕರವಾದ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ಪಟ್ಟಣದ ಸರ್ವೋದಯ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ರೂ.14 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆ ನೀಡಲಾದ ಬೇಯಿಸದ ಮತ್ತು ಬೇಯಿಸಿದ ಆಹಾರ ತಯಾರಿಸುವ ಟಾಸ್ಕ್‍ನಲ್ಲಿ ಬೆಳಗಾವಿ ಜಿಲ್ಲೆಯ 43 ಶಾಲೆಗಳ 214 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು ನಾಲ್ಕು ಗುಂಪುಗಳಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಲಾಗಿತ್ತು. ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ಬಳಸಿ ಸಿದ್ಧಪಡಿಸಿದ ಆಹಾರ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಗೊಂಡು ಪ್ರಥಮ ಬಹುಮಾನ ಮತ್ತು ವೈಯುಕ್ತಿಕ ಸ್ಥಾನ ಗಳಿಸಲು ನೆರವಾಯಿತು. ಶಾಲೆಯ ಪ್ರಾಂಶುಪಾಲ ಫಾದರ್ ಮೈಕಲ್ ಸೋಝ್, ಶಿಕ್ಷಕರಾದ ಫಾದರ್ ಜಾಕ್, ಸಿಸ್ಟರ್ ಆಂಜೆಲಾ, ಸಿಸ್ಟರ್ ಮೇಬಲ್ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

loading...

LEAVE A REPLY

Please enter your comment!
Please enter your name here