ಸಾರಿಗೆ ಅಸ್ಥವ್ಯಸ್ತ ,ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಪರದಾಟ

0
28
loading...

news-1aಮುಂಡರಗಿ,11: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ನಿಗದಿತ ಮಾರ್ಗದಲ್ಲಿ ಓಡಾಡದೆ ಇದ್ದುದ್ದರಿಂದ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಗುರುವಾರ ಸಂಜೆ ಮನೆಗೆ ತೆರಳಲು ಪರದಾಡುವಂತಾಯಿತು.
ಸಂಜೆ 4.30ಗಂಟೆಗೆ ಈರಣ್ಣನ ಗುಡ್ಡದ ಮಾರ್ಗವಾಗಿ ಮುಂಡರಗಿ ಹಾಗೂ ಹಮ್ಮಿಗಿ ಗ್ರಾಮಗಳಿಗೆ ಎರಡು ಬಸ್ಸುಗಳು ತೆರಳಬೇಕಾಗಿತ್ತು. ಆದರೆ ಲಾರಿ, ಟಿಪ್ಪರ ಹಾಗೂ ಮತ್ತಿತರ ಸರಕು ಸಾಗಾಣಿಕೆಯ ವಾಹನಗಳ ದಟ್ಟಣೆಯಿಂದಾಗಿ ಬಸ್ಸುಗಳು ದಿಢೀರನೆ ಮಾರ್ಗ ಬದಲಿಸಿದ್ದರಿಂದ ವಿದ್ಯಾರ್ಥಿಗಳು ತಡ ರಾತ್ರಿ ಮನೆ ಸೇರುವಂತಾಯಿತು.

ತಾಲ್ಲೂಕಿನ ಶಿಂಗಟಾಲೂರ ಸರಕಾರಿ ಪ್ರೌಢ ಶಾಲೆಗೆ ತಾಲ್ಲೂಕಿನ ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, ಬೆಣ್ಣಿಹಳ್ಳಿ ಮೊದಲಾದ ಗ್ರಾಮಗಳಿಂದ ಸುಮಜಾರು 300ವಿದ್ಯಾರ್ಥಿಗಳು ಬರುತ್ತಾರೆ. ಪ್ರೌಢ ಶಾಲೆಯ ಮುಂದೆ ಸರಕಾರವು ಮರಳು (ಉಸುಕು) ಸಂಗ್ರಹ ಹಾಗೂ ಸಾಗಾಣಿಕೆಗೆ ಅವಕಾಶ ನೀಡಿದೆ. ಇದರಿಂದಾಗಿ ಪ್ರತಿನಿತ್ಯ ನೂರಾರು ಭಾರಿ ವಾಹನಗಳು ಮರಳನ್ನು ಹೇರಿಕೊಂಡು ಹೋಗಲು ಶಿಂಗಟಾಲೂರಿನಿಂದ ಈರಣ್ಣನ ಗುಡ್ಡದವರೆಗೂ ಸಾಲುಗಟ್ಟಿ ನಿಂತುರುತ್ತವೆ.

ರಸ್ತೆಯು ತುಂಬಾ ಕಿರಿದಾಗಿರುವುದರಿಂದ ಹಾಗೂ ಸದಾ ಸರಕು ಸಾಗಣಿಕೆಯ ವಾಹನಗಳು ಸರದಿಯಲ್ಲಿ ನಿಂತಿರುವುದರಿಂದ ಟ್ರಾಪಿಕ್ ಜಾಮ್ ಸಾಮಾನ್ಯವಾಗತೊಡಗಿದೆ.
ಸಂಜೆ ಬಸ್ ಹಾಗೂ ಮತ್ತಿತರ ಖಾಸಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಕೆಲವು ಸಂದರ್ಭಗಳಲ್ಲಿ ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳು ಈರಣ್ಣನ ಗುಡ್ಡಕ್ಕೆ ಬಾರದೆ ಗುಡ್ಡದ ಹಿಂದಿನ ಮಾರ್ಗವಾಗಿ ಮುಂಡರಗಿ ಹಾಗೂ ಹಮ್ಮಿಗಿ ಗ್ರಾಮಗಳಿಗೆ ತೆರಳುತ್ತವೆ.

ಇದರಿಂದಾಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಂಜೆ ವೇಳೆ ಬಸ್ಸುಗಳಿಲ್ಲದೆ ಪರದಾಡುವಂತಾಗಿದೆ. ಟಿಪ್ಪರ ಹಾಗೂ ಲಾರಿ ಚಾಲಕರು ಬಸ್ಸನ್ನು ಗುಡ್ಡಕ್ಕೆ ತಗೆದುಕೊಂಡು ಹೋಗಲು ಅವಕಾಶ ನೀಡದೆ ಇದ್ದುದ್ದರಿಂದ ಬೇರೆ ದಾರಿ ಕಾಣದೆ ಈರಣ್ಣನ ಗುಡ್ಡಕ್ಕೆ ತೆರಳುವ ಬದಲಾಗಿ ಗುಡ್ಡದ ಹಿಂಭಾಗದ ಮಾರ್ಗವಾಗಿ ಬರಬೇಕಾಯಿತು ಎಂದು ಬಸ್ ಚಾಲಕ ತನ್ನ ಅಸಹಾಯಕತೆಯನ್ನು ತೋಡಿಕೊಂಡರು.

ಬಸ್ಸುಗಳು ಬಾರೆದೆ ಇದ್ದ ಸಂದರ್ಭದಲ್ಲಿ ಅನ್ಯದಾರಿ ಕಾಣದೆ ವಿದ್ಯಾರ್ಥಿಗಳು ಕಾಲ್ನಡಿಗೆಯಿಂದ ತಮ್ಮ ಗ್ರಾಮಗಳಿಗೆ ತೆರಳಬೇಕಾಗುತ್ತದೆ. ಮಾರ್ಗ ಮಧ್ಯದಲ್ಲಿ ವಾಹನ ದಟ್ಟಣೆಯ ಕಾರಣದಿಂದ ಮಕ್ಕಳಿಗೆ ಏನಾದರೂ ಅಪಘಾತವಾದರೆ ಯಾರು ಜವಾಬ್ದಾರರು?. ಒಂಟಿಯಾಗಿ ತಮ್ಮ ಗ್ರಾಮಗಳಿಗೆ ತೆರಳುವ ಬಾಲಕಿಯರು ದೈಹಿಕ ಹಲ್ಲೆಗೆ ಒಳಗಾಲಾದರೆ ಯಾರು ಹೊಣೆ? ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ.
ಬಸ್ಸುಗಳು ನಿಯಮಿತವಾಗಿ ಓಡಾಡುತ್ತಿದ್ದು, ರಸ್ತೆಯ ತುಂಬಾ ಲಾರಿ ಹಾಗೂ ಮತ್ತಿತರ ವಾಹನಗಳು ಜಮಾಯಿಸುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಸಂಜೆ ಪೊಲೀಸರು ಕುದ್ದಾಗಿ ಸ್ಥಳದಲ್ಲಿದ್ದು, ವಾಹನ ಸಂಚಾರವನ್ನು ನಿಯಂತ್ರಿಸಬೇಕು ಎಂದು ಪಾಲಕರಾದ ದೇವೇಂದ್ರಪ್ಪ ಭಜಂತ್ರಿ, ಮಂಜಪ್ಪ ಬಾರಕೇರ, ಶಿವಲಿಂಗಪ್ಪ ಅಂಜಿ, ಡಿಗ್ಗೆಪ್ಪ ಲಮಾಣಿ, ನಾಗಯ್ಯ ಹಿರೇಮಠ, ಈರಣ್ಣ ಅರ್ಚಕ, ರುದ್ರಣ್ಣ ಮಲ್ಲಿಕೇರಿ, ಜಗದೀಶಪ್ಪ ಬಿಳಿಮಗ್ಗದ, ಈರಣ್ಣ ಗುಂಡ್ಲೂರ ಮೊದಲಾದವರು ಮನವಿ ಮಾಡಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here