ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಸಾರ; “ ಬದುಕಿಗೆ ಸ್ಥೀರ ನಿರ್ಧಾರ ಅಗತ್ಯ”

0
48
loading...

ಅಥಣಿ 8 : ಮನುಷ್ಯನ ಬದುಕಿಗೆ ಬೆಲೆ ಬರುವುದು ಪ್ರಸನ್ನತೆಯಿಂದ. ಪ್ರಸನ್ನತೆ ದೊರೆಯಬೇಕಾದರೆ ಸಂತೋಷದ ಅಗತ್ಯತೆ ಇದೆ. ಸಂತೋಷವಾಗಿರಲು “ಜೀವನಕ್ಕೊಂದು ಸ್ಥಿರವಾದ ನಿರ್ಣಯವಿರಬೇಕು”. ಛಲದ ಗುರಿ ಇದ್ದಾಗ ಮಾತ್ರ ಬದುಕನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಇದನ್ನೆಲ್ಲ ಸಿದ್ದಿಸಿಕೊಳ್ಳಲು ಆಧ್ಯಾತ್ಮದ ಚಿಂತನೆ ಅವಶ್ಯ.
ಅಥಣಿಯ ಗಚ್ಚಿನಮಠದ ವೀರಶೈವ ವಿದ್ಯಾಪೀಠ ಶಾಲಾ ಆವರಣದಲ್ಲಿ ನಡೆಯುತ್ತಿರುವ ಆದ್ಯಾತ್ಮ ಪ್ರವಚನದ 6 ದಿನದಂದು ಪೂಜ್ಯ ಸಿದ್ಧೇಶ್ವರ ಸಾಮೀಜಿಯವರು ಮೇಲಿನಂತೆ ಹೇಳಿದರು. ಚಲನೆ ಜಗತ್ತಿನ ಸ್ವರೂಪ ಆಗಿರುವುದರಿಂದ ಜೀವನ ಅಂದರೆ ಚಲನೆ ಎಂದು ತಿಳಿಯಬೇಕು. ಎರಡು ಚಲನೆಗಳನ್ನು ನಾವು ನೋಡುತ್ತೇವೆ. ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋದರೆ ಅದು “ದೇಶ ಚಲನೆ”, ಒಂದು ಕ್ಷಣದಿಂದ ಇನ್ನೊಂದು ಕ್ಷಣಕ್ಕೆ ಚಲಿಸುವುದನ್ನು “ಕಾಲಚಲನೆ” ಎನ್ನುತ್ತೇವೆ. ಈ ಚಲನೆಗಳಿಂದ ಮುಕ್ತನಾಗಲೂ ಯಾರಿಗೂ ಸಾಧ್ಯವಿಲ್ಲ.
“ಹೂವು” ಅರಳಿ ಕೊನೆಗೆ ಬಾಡುವಂತೆ, ಇಲ್ಲಿ ಯಾವುದೂ ಸ್ಥಿರವಲ್ಲ. ವಿಜಾÐನಿಗಳು ಹೇಳುವಂತೆ 1,400 ಕೋಟಿ ವುರುಷಗಳ ಹಿಂದೆ ಈ ವಿಶ್ವ ನಿರ್ಮಾಣವಾಗಿದೆ. ಒಂದು ದಿನ ಈ ವಿಶ್ವವೂ ಕೂಡ ಮರೆಯಾಗುತ್ತದೆ. ಇದನ್ನು ಅರಿತಿದ್ದರೂ ಕೂಡ ಮನುಷ್ಯ “ಕಾಲವನ್ನು” ಸ್ಥಿರಗೊಳಿಸುವ ಭ್ರಮೆಯಲ್ಲಿ ತೇಲುತಿದ್ದಾನೆ. ಆದರೆ ಹೂವು ಅರಳಿ ಬಾಡುವ ಮಧ್ಯದಲ್ಲಿ ಸುತ್ತಲೂ ಸುವಾಸನೆ ನೀಡುವ ಸಾರ್ಥಕತೆ ಏನಿದೆಯಲ್ಲ ಅದು ಶ್ರೇಷ್ಠ. ಆ ರೀತಿಯಲ್ಲಿ ನಾವು ಕೂಡ ಹುಟ್ಟು-ಸಾವಿನ ಮಧ್ಯದ ಕಾಲವನ್ನು, ಸುಂದರ ಬದುಕನ್ನು ಬದುಕುವ ಸ್ಥಿರ ನಿಶ್ಚಯ ಹೊಂದಬೇಕು.
ಸಾಧನೆ ಇಲ್ಲದೆ ಸಿದ್ಧಿ ಪಡೆಯಲಾಗುವುದಿಲ್ಲ. ಅದಕ್ಕಾಗಿ ನಮಗೇನು ಸಾಧಿಸಲು ಸಾಧ್ಯ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಂಡು ಆ ದಿಶೆಯಲ್ಲಿ
ಸಾಧನೆಯ ಮಾರ್ಗದಲ್ಲಿ ಹೆಜ್ಜೆಯನ್ನು ಹಾಕಬೇಕು. ನಿರ್uಯ ಇಲ್ಲದೆ ಇದ್ದರೆ ಮನಸ್ಸು ಹೊಯ್ದಾಡಲಾರಂಬಿಸುತ್ತದೆ.
ನೆಪೋಲಿಯನ್; ಫ್ರಾನ್ಸ ದೇಶದ ಚಕ್ರಾಧಿಪತಿ. ಇತ ಹುಟ್ಟುತ್ತಲೇ ಬಡವನಾಗಿದ್ದ. ಆಕರ್ಷಕ ವ್ಯಕ್ತಿತ್ವವೂ ಇರಲಿಲ್ಲ. ಕುಳ್ಳನಾಗಿದ್ದ ಈತ ಮಿಲ್ಟ್ರಿ ಸೇರಿದಾಗ , ಒಂದು ದಿನ ಕ್ಯಾಪ್ಟನ್, ಮುಂದೆ ನೀನು ಏನಾಗಬಯಸುವೆ? ಎಂದು ಕೇಳಿದಾಗ. “ನಾನು ಯುರೋಪ ಖಂಡದ ರಾಜನಾಗಬಯಸುತ್ತೇನೆ ” ಎಂದು ದೃಢವಾಗಿ ಉತ್ತರಿಸಿದ. ಅಲ್ಲಿದ್ದವರಿಗೆ ಇದು ಹಾಸ್ಯಾಸ್ಪದವೆನಿಸಿದರೂ, ಆ ಬಾಲಕನ ಸ್ಪಷ್ಟ ನಿರ್ಧಾರ ಆತನನ್ನು ಮುಂದೆ ಚಕ್ರಾಧಿಪತಿಯನ್ನಾಗಿಸಿತು. ಇದು ಸ್ಪಷ್ಟ, ದೃಢ, ಸ್ಥಿರ ನಿರ್ಧಾರಕ್ಕೊಂದು ಉದಾಹರಣೆ.
ಸ್ವಾವಲಂಬಿ ದೇಶ ಕಟ್ಟಬೇಕಾದ ಮನುಷ್ಯ ಕೋಟ್ಯಾಧಿಪತಿಯಾಗಿದ್ದರೂ ಇನ್ನೂ ಗಳಿಸಬೇಕು ಎಂಬುದಕ್ಕೆ ಜೋತು ಬಿದ್ದಿದ್ದಾನೆ ಎನ್ನುತ್ತ, ಲಕ್ಷ ಲಕ್ಷ ಕೊಟ್ಟು ಮನೆ ಕಟ್ಟಿರುತ್ತಾನೆ ಆದರೆ ಅದಕ್ಕೊಂದು ಶೌಚಗೃಹ ಕಟ್ಟಲು ಸರಕಾರದ ಮೋರೆ ಹೋಗುತ್ತಾನೆ ಇದು ವಿಪರ್ಯಾಸ ಎನಿಸುವುದಲ್ಲವೇ?.
ಜೀವನದಲ್ಲಿ ಸಮಾಧಾನ, ಶಾಂತಿ, ನೆಮ್ಮದಿ ಪಡೆಯಲು ಮೊದಲು ನಿರ್ಣಯ ಮಾಡಿಕೊಳ್ಳಬೇಕು. ಬದುಕÀಲ್ಲಿ ಏನೇ ಬರಲಿ ಪ್ರಸನ್ನತೆಯಿಂದ ಇರತಿನಿ ಅನ್ನೋದು ನಿರ್ಣಯಿಸಿ ಆಧ್ಯಾತ್ಮೀಕ ಮಾರ್ಗದಲ್ಲಿ ಸಾಧನೆ ಮಾಡಬೇಕು. ವಿಶ್ವದ ಆರಾಧಕರಾದ ನಾವು ಒಳ್ಳೆಯದನ್ನೆ ನೋಡುತ್ತೇವೆ, ಒಳ್ಳೇಯದನ್ನೆ ಕೇಳುತ್ತೇವೆ. ಹಾಗೂ ಒಳ್ಳೆಯದನ್ನೆ ಮಾಡುತ್ತೇವೆ ಎಂದು ನಿರ್ಣಯಿಸಿಕೊಂಡು, ಆ ರೀತಿ ಇರಲು ಕರುಣಿಸು ಎಂದು ದೇವರಲ್ಲಿ ಬೇಡಿಕೊಳ್ಳಬೇಕು. ಅದಕ್ಕೆ ಕ್ರಿಯಾಯೋಗ ಮಾಡಬೇಕು. ಮನಸ್ಸು, ಕೈ ಶುದ್ಧವಾಗಿಟ್ಟುಕೊಂಡು ಬದುಕು ಸ್ವಚ್ಛಂಧದಿಂದ ಸಾಗಿಸುತ್ತೇನೆಂದುಕೊಂಡಾಗ ಜೀವನ ಸಾರ್ಥಕ.
ಜೀವನದಲ್ಲಿ ಗುರಿ ತಲುಪುವ ಗಟ್ಟಿತನ ಇದ್ದರೆ ಸಾಕು ಯಾರಾದರೊಬ್ಬರು ಸಹಾಯಕ್ಕೆ ಬಂದೇ ಬರುತ್ತಾರೆ. ಬದುಕಿನ ಗುರಿ ಸಂತೋಷ, ಪ್ರಸನ್ನತೆ ಆಗಿರಬೇಕು ಎಂದರು.

loading...

LEAVE A REPLY

Please enter your comment!
Please enter your name here