ಸಿವಿಪಿಐ ಸಂಸ್ಥೆಯಿಂದ ಸೌರಚಾಲಿತ ಕುಂಬಾರ ಚಕ್ರದ ಪ್ರಾತ್ಯಕ್ಷತೆ

0
10
loading...

ಖಾನಾಪುರ 21 : ಪಟ್ಟಣದ ಕೇಂದ್ರೀಯ ಗ್ರಾಮೀಣ ಕುಂಬಾರಿಕೆ ಸಂಸ್ಥೆ (ಸಿವಿಪಿಐ) ಆವರಣದಲ್ಲಿ ಕುಂಬಾರಿಕೆ ತಂತ್ರಜ್ಞಾನದ ಹೊಸ ಆವಿಷ್ಕಾರವಾದ ಸೌರಚಾಲಿತ ಕುಂಬಾರ ಚಕ್ರದ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತ್ಯದ ಮುಂಬೈ ಕೇಂದ್ರ ಕಚೇರಿಯ ಹಿರಿಯ ಕಾರ್ಯಪಾಲಕ ಅಧಿಕಾರಿ ವಾಯ್ ಕೆ ಬಾರಾಮತಿಕರ ಉದ್ಘಾಟಿಸಿದರು.

ಸಿವಿಪಿಐ ಸಂಸ್ಥೆಯ ಪ್ರಶಿಕ್ಷಣಾರ್ಥಿ ಮತ್ತು ತಾಲೂಕಿನ ಗರ್ಲಗುಂಜಿ ಗ್ರಾಮಸ್ಥ ನಂದಕುಮಾರ ನಿಟ್ಟೂರಕರ ನಿರ್ಮಿಸಿದ ಸೌರಶಕ್ತಿ ಬಳಸಿ ಕುಂಬಾರಿಕೆಗೆ ಅಗತ್ಯವುಳ್ಳ ಆಕೃತಿಗಳನ್ನು ತಯಾರಿಸಲು 600 ಆರ್.ಪಿ.ಎಂ ಸಾಮಥ್ರ್ಯದ ಚಕ್ರವನ್ನು ಸಿದ್ಧಪಡಿಸಿದ್ದು, ಈ ಚಕ್ರದ ಬಳಕೆಯಿಂದ ವಿದ್ಯುತ್ ಸಮಸ್ಯೆ ಇರುವ ಗ್ರಾಮೀಣ ಭಾಗದ ಕುಂಬಾರರಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶದಲ್ಲಿ ನಿರ್ಮಿತ ವಸ್ತುಗಳನ್ನು ಬಳಸುವಂತೆ ನೀಡಿದ ಕರೆಗೆ ಸ್ಪಂದಿಸಿದ ಕೇಂದ್ರ ಖಾದಿ ಬೋರ್ಡ್ ಅಧ್ಯಕ್ಷ ವಿನಯ ಕುಮಾರ ಸೆಕ್ಸೇನಾ ಖಾದಿ ಬಟ್ಟೆಗಳ ಬಳಕೆಗೆ ಈಗಾಗಲೇ ಅಧೀಕೃತವಾಗಿ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯಲ್ಲಿ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳ ಪೊಲೀಸರು, ಹೋಂ ಗಾರ್ಡ್ ಸಿಬ್ಬಂದಿ ಮತ್ತು ಏರ್ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳಲ್ಲಿ ಸ್ವದೇಶಿ ನಿರ್ಮಿತ ಖಾದಿ ಬಟ್ಟೆಗಳನ್ನು ಬಳಸುವಂತೆ ಆದೇಶಿಸಲಾಗಿದೆ. ಇದೇ ರೀತಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯಿಂದ ನಿರ್ಮಾಣಗೊಳ್ಳುವ ಎಲ್ಲ ವಸ್ತುಗಳನ್ನು ಸರ್ಕಾರದ ಮತ್ತು ಸರ್ಕಾರದ ಅಧೀನಕ್ಕೊಳಪಟ್ಟ ಸಂಸ್ಥೆಗಳಲ್ಲಿ ಬಳಸುವಂತೆ ಆದೇಶಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿವಿಪಿಐ ಸಂಸ್ಥೆಯ ಪ್ರಾಂಶುಪಾಲ ರಾಮರತನ್ ಪ್ರಜಾಪತಿ, ಸಂಪನ್ಮೂಲ ವ್ಯಕ್ತಿ ಸಚ್ಚಿದಾನಂದ ಕಾಶಿಕರ ಸೇರಿದಂತೆ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ಹಾಗೂ ಬೋಧಕರು ಇದ್ದರು.

loading...

LEAVE A REPLY

Please enter your comment!
Please enter your name here