ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಗಾಟನೆ

0
45
loading...


ಜೊಯಿಡಾ : ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜೊಯಿಡಾ ಪ್ರಗತಿಭಂದು ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ
ಜೊಯಿಡಾ; ಪದಗ್ರಹಣ ಸಮಾರಂಭ ಉದ್ಗಾಟಿಸಿದ ಸಂಜೀವಿನಿ ಸೇವಾ ಟ್ರಸ್ಟ ಸಂಸ್ಥಾಪಕ ಅದ್ಯಕ್ಷ ರವಿ ರೆಡ್ಕರ್ ಮಾತನಾಡಿ ನಾವು ಬೆರೆಯವರ ಬದುಕಿನ ಬಗ್ಗೆ ಯೋಚಿಸೊಣ ಅವರು ಸಹ ನಮ್ಮ ಬಗ್ಗೆ ಯೋಚಿಸುತ್ತಾರೆ, ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಪ್ರಗತಿಭಂದು ಸ್ವಸಹಾಯ ಸಂಘಗಳ ಸದಸ್ಯರಿಗೆ ಕೇವಲ ಆರ್ಥಿಕ ಸಹಕಾರ ದೊರೆಯುವದಲ್ಲದೆ ಜೊತೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯ ನಡೆಯುತ್ತಿದೆ. ಇದರ ಪ್ರಯೋಜನ ಸಾವಿರಾರು ಜನ ಪಡೆಯುತ್ತಿದ್ದಾರೆ. ಎದು ಸಚಿಜೀವಿನಿ ಸೇವಾ ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷ ರವಿ ರೆಡ್ಕರ ಹೇಳಿದರು.
ಅವರು ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜೊಯಿಡಾ-ಹಳಿಯಾಳ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಜೊಯಿಡಾ ಇವರ ಒಕ್ಕೂಟ ಪದಗ್ರಹಣ ಸಮಾರಂಭ ಉದ್ಗಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಜನಾಧಿಕಾರಿ ಜಯಂತ ಕೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಗ್ರಾಮಾಭಿವೃದ್ದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ,ಗ್ರಾಮಾಭಿವೃದ್ದಿ ಯೋಜನೆಯ ಸಹಕಾರ ಪಡೆದು ಜನರು ಸ್ವಾವಲಂಬಿಗಳಾಗುತ್ತಿದ್ದಾರೆ, ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದ ಎಲ್ಲ ಕಡೆ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ 3.17 ಲಕ್ಷ ಸ್ವಸಹಾಯ ಸಂಘಗಳ ರಚನೆಯಾಗಿದೆ,35 ಲಕ್ಷ ಸದಸ್ಯರು ಯೋಜನೆಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ,1726ಕೋಟೆ ರೂ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆ ನಡೆಯುತ್ತಿದೆ, ಸಾಮಾಜೀಕ ಅಭಿವೃದ್ದಿ, ಕೃಷಿಗೆ ಉತ್ತೆಜನ, ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ನೀಡಲಾಗಿತ್ತಿದೆ ಎಚಿದರು.
ಜೊಯಿಡಾ ಗ್ರಾಮ ಪಂಚಾಯತ ಉಪಾದ್ಯಕ್ಷ ಶಾಮ ಪೋಕಳೆ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯ ಸಹಕಾರ ಪಡೆದು ಜನರು ಸ್ವ ಉದ್ಯೊಗ ನಡೆಸಲು ಮುಂದಾಗುತ್ತಿದ್ದಾರೆ. ಆ ಮೂಲಕ ತಮ್ಮ ಆರ್ಥಿಕ ಸ್ಥಿತಿ ಸುದಾರಣೆಗೆ ಅನೂಕೂಲವಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೊಯಿಡಾ U್ಫ್ರಮ ಪಂಚಾಯತ ಅಧ್ಯಕ್ಷೆ ದಿಕ್ಷಾ ದೇಸಾಯಿ ವಹಿಸಿದ್ದರು.
ವೇಧಿಕೆಯಲ್ಲಿ ಪತ್ರಕರ್ತ ಅನಂತ ದೇಸಾಯಿ, ಒಕ್ಕುಟದ ನೂತನ ಅದ್ಯಕ್ಷರಾದ ಉದಯ ದೇಸಾಯಿ, ಗೋಪಿನಾಥ ಮಹಾಲೆ,ಒಕ್ಕುಟದ ಮಾಜಿ ಅದ್ಯಕ್ಷ ನಿವೃತ್ತಿ ಘೋಡಕೆ ಪದಾಧಿಕಾರಿಗಳಾದ ಸುಭ್ರಾಯ ಹೆಗಡೆ ಪ್ರಮೀಳಾ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೆಲ್ವಿಚಾರಕ ವಿನೋದ ನಾಯ್ಕ ಸ್ವಾಗತಿಸಿದರೆ ಸೇವಾ ಪ್ರತಿನಿಧಿ ಸೊನಿಯಾ ಘೊಡ್ಕೆ ಕಾರ್ಯಕ್ರಮ ನಿರೂಪಿಸಿದರು, ವೀಣಾ ಫಟೆ ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here