ಹನುಮವ್ವ ಕೊಂಗವಾಡರವರಿಗೆ ಸನ್ಮಾನ

0
21
loading...

7 NRD-3ನರಗುಂದ,7: ಸ್ವಚ್ಚತಾ ಕಾರ್ಯದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೇ ಹಿರೇಕೊಪ್ಪ ಗ್ರಾಮದ ಮಂದಿರಗಳ ಕಸ ಗೂಡಿಸುವ ಕೆಲಸ ಮಾಡುತ್ತ ಬಂದಿರುವ ತಾಲೂಕಿನ ಹಿರೇಕೊಪ್ಪದ ವೃದ್ಧ ಮಹಿಳೆ ಹನುಮವ್ವ ಕೊಂಗವಾಡ (82) ಅವರನ್ನು ವಿಧಾನಪರಿಷತ್ ಸದಸ್ಯ ಬಿ.ಎಸ್. ಹೊರಟ್ಟಿ ಪ್ರತಿಷ್ಟಾನದ ಅವ್ವ ಟ್ರಸ್ಟ ವತಿಯಿಂದ ಬರುವ ಡಿ.13 ರಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಸತ್ಕರಿಸುವ ಕಾರ್ಯಕ್ರಮ ನಡೆಸಲಿರುವುದಾಗಿ ಅವ್ವ ಟ್ರಸ್ಟಿನ ಮುಖ್ಯಸ್ಥರಲ್ಲಿ ಓರ್ವರಾದ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಬಿ. ಪಾಟೀಲ ತಿಳಿಸಿದ್ದಾರೆ.

ಅವ್ವ ಟ್ರಸ್ಟ್ ವತಿಯಿಂದ ಡಿ. 13 ರಂದು ಸಮಾಜ ಸೇವೆ ಗುರುತಿಸಿ ಸತ್ಕರಿಸುವ ಕುರಿತು ಆಯ್ಕೆಮಾಡಿದ ನರಗುಂದ ತಾಲೂಕಿನ ಹಿರೇಕೊಪ್ಪದ ವೃದ್ಧ ಮಹಿಳೆ ಹನುಮವ್ವ ಅವರಿಗೆ ಸಮಾರಂಭದ ಆಮಂತ್ರಣ ಪತ್ರ ಅವ್ವ ಟ್ರಸ್ಟ್ ವತಿಯಿಂದ ರವಿವಾರ ನೀಡಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಮಹನಿಯರನ್ನು ಗೌರವಿಸುವ ಕಾರ್ಯಕ್ರಮ ಅವ್ವ ಟ್ರಸ್ಟ್ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಹಿರೇಕೊಪ್ಪದ ವೃದ್ಧ ಮಹಿಳೆ ಈ ಭಾರಿ ವಿಶಿಷ್ಟ ಸೇವೆ ಸಲ್ಲಿಸಿದ್ದ ಓರ್ವರಲ್ಲಿ ಒಬ್ಬರಾಗಿದ್ದು ಕಳೆದ ಮೂವತ್ತು ವರ್ಷದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಹಿರೇಕೊಪ್ಪ ಗ್ರಾಮದಲ್ಲಿ ಎಲ್ಲ ಮಂದಿರಗಳನ್ನು ಕಸಗೂಡಿಸುವ ಮೂಲಕ ಮಾದರಿಯ ಬದುಕು ಸವೆಸಿದ್ದಾರೆ.
ಅಂತವರ ಆದರ್ಶದ ಶ್ರಮ ಪರಿಗಣಿಸಿ ಅವ್ವ ಟ್ರಸ್ಟ್ ವತಿಯಿಂದ ಅವರನ್ನು ಗೌರವಿಸುವ ಹಾಗೂ ಹಣಕಾಸಿನ ನೆರವು ಮತ್ತು ಪ್ರಶಸ್ತಿ ಪತ್ರ ನೀಡಿ ಸತ್ಕರಿಸುವ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಆರ್. ಸತರಡ್ಡಿ, ಝ.ಎಂ. ಖಾಜಿ, ಎಸ್.ಎಚ್. ದ್ಯವಾನಗೌಡ್ರ, ಎಮ.ಎಚ್. ಹೂಗಾರ, ಪಿ.ವ್ಹಿ. ಜಾಧವ, ಎಂ.ಎಚ್. ಹಂಗನಕಟ್ಟಿ, ವಾಸು ಕುಲಕರ್ಣಿ,ಬಿ.ಆರ್. ಪಾಟೀಲ, ಆರ್.ಲಿಂಗದಾಳ, ವ್ಹಿ.ಎಸ್. ಪಾಟೀಲ, ವ್ಹಿ. ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here