ಹುಕ್ಕೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ

0
18
loading...

ಹುಕ್ಕೇರಿ 26 : ಪಟ್ಟಣದ ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆದಿತ್ಯ ಬಿರ್ಲಾ ಕಂಪನಿಯವರು ಪದವಿ ಅಂತಮ ವರ್ಷದ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಇಂಟರ್ ವ್ಯೂ ಹಮ್ಮಿಕೊಂಡಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಮತ್ತು ಪ್ರಾಚಾರ್ಯ ಡಾ.ಸತೀಶ ಗವತಿ ತಿಳಿಸಿದ್ದಾರೆ.
ಶನಿವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ ಸಂಸ್ಥೆಯ ಬಿ.ಎ ಹಾಗೂ ಬಿ.ಕಾಮ್ ತರಗತಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸೋಮವಾರ ದಿನಾಂಕ 28/12/2015 ರಂದು ಮುಂಜಾನೆ 9:30 ಗಂಟೆಗೆ ಆದಿತ್ಯ ಬಿರ್ಲಾ ಕಂಪನಿಯ ಮಿನಾಕ್ಸ್ ಘಟಕವು ತನ್ನ ಕಂಪನಿಗಳಿಗಾಗಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು ಅದಕ್ಕಾಗಿ ನೇಮಕಾತಿ ಪ್ರಕ್ರಿಯೆ ಮತ್ತು ಸಂದರ್ಶನವನ್ನು (ಬೃಹತ್ ನೇಮಕಾತಿ ಮೇಳವನ್ನು) ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.
ಸಂಸ್ಥೆಯ ಇತಹಾಸದಲ್ಲಿ ಪ್ರಥಮ ಬಾರಿಗೆ ಸ್ಥಳೀಯ ಶಿವಬಸವ ಸ್ವಾಮೀಜಿ ನಾಗನೂರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ. ಕಾರಣ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here