146 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ

0
17
loading...

8 NRD-5(1)ನರಗುಂದ,8: ಮುಂದುವರೆದ ಮಹದಾಯಿ ನದಿ ಜೋಡಣೆ ಬೇಡಿಕೆ ರೈತರ ಹೋರಾಟ  ಧರಣಿ ಇನ್ನು  ಮುಂದೆ ಪರಿಣಾಮಕಾರಿಯಾಗಿ ಜರುಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನದಿ ನೀರಿನ ವಿಷಯ ಕುರಿತು ತಾತ್ಸಾರ ಭಾವಣೆ ತಾಳಿದ್ದರಿಂದ ರೈತರು ಧರಣಿ ಮುಂದುವರೆಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ
ತಮ್ಮ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವದರಲ್ಲಿಯೇ ಕಾಲಹರಣ ಮಾಡುತ್ತಿವೆ. ರೈತರಿಗೆ ಈ ವಿಷಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ರೈತರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಲು ಸಿದ್ದತೆ ನಡೆಸಿವೆ ಎಂದು ರೈತ ಮುಖಂಡ ಕೃಷ್ಣಗೌಡ ಪಾಟೀಲ ಇಂದಿಲ್ಲಿ ಹೇಳಿದರು.

ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ನಡೆದ ರೈತರ ಧರಣಿ  ಮಂಗಳವಾರ 146 ನೇ ದಿನಕ್ಕೆ ಕಾಲಿರಿಸಿದ್ದು ರೈತರ ಸಭೆಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು,  ಬೆಂಗಳೂರಿನಲ್ಲಿ ರೈತರು ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಈ ಹಿಂದೆ ನಡೆಸಿದ್ದ ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಚಿವರು ಭರವಸೆ ನೀಡಿದಂತೆ ತನ್ನ ಮಾತನ್ನು  ಉಳಿಸಿಕೊಳ್ಳಬೇಕಿದೆ. ರೈತರೆಂದರೆ ಸರ್ಕಾರಗಳಿಗೆ ಕಾಳಜೀ ಇಲ್ಲ. ಹೀಗಾಗಿ ರೈತರು ಸರ್ಕಾರದ ಆಡಳಿತ ಕಾರ್ಯವೈಖರಿ ಟೀಕೆ ಮಾಡುತ್ತಿದ್ದಾರೆಂದು ಅವರು  ತಿಳಿಸಿದರು.

ಬಾಪೂಗೌಡ ಹಟ್ಟಿ ಮಾತನಾಡಿ, ರೈತರ ಹೋರಾಟ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ರೈತರು ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಅವರು ನಾವೆಲ್ಲ ಐಕ್ಯತೆಯಿಂದ ಧರಣಿ ಮುಂದುವರೆಸಿದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವಾಗಲಿದೆ. ನಾವೆಲ್ಲ ಮಹದಾಯಿ ನೀರಿನ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಆದರೆ ರೈತರು ತಮಗೆ ಮಹತ್ವದ ಬೇಡಿಕೆ ನೀರಿನ್ನದ್ದಾಗಿದೆ ಎಂದು ತಿಳಿದು ಕೂಡಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಬೇಕು. ನಾವೆಲ್ಲ ಒಟ್ಟಾಗಿ ಹೋರಾಟ ಮುಂದುವರೆಸಿದಲ್ಲಿ ನಮಗೆ ನ್ಯಾಯ ಒದಗಲು ಸಾಧ್ಯವೆಂದು ಅವರು ಪ್ರತಿಪಾಧಿಸಿದರು.

ಸೋಮರಡ್ಡಿ ಹಾದಿಮನಿ ಮಾತನಾಡಿ, ಸರ್ಕಾರದ ದ್ವಂದ್ವ ನೀತಿಗಳನ್ನು ನಾವೆಲ್ಲ ಪರಿಗಣಿಸಿದಲ್ಲಿ ಈ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರೇ ಉತ್ತಮವೆಂದು ರೈತರು ನಿರ್ಧರಿಸಿದ್ದು ಸರಿಯಾದ ನಿಲುವು. ಎಲ್ಲ ಪ್ರಜೆಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಸರ್ಕಾರ ಮೀನಮೇಷ ಮಾಡುವುದಾದರೆ ಸರ್ಕಾರಗಳಿಂದ ನಮಗೇನು ಲಾಭವಿಲ್ಲ. ಆಯ್ಕೆಗೊಂಡಂತಹ ಶಾಸಕರು, ಸಂಸದರು ಸಚಿವರಾಗಿ ಮುಂದೇ ರೈತರ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲವೆಂದಾದರೆ ಸರ್ಕಾರಳಿದ್ದೇನು ಪ್ರಯೋಜವೆಂದು ಅವರು ಕಿಡಿಕಾರಿದರು. ಕೃಷಿ ಕಾಯಕಕ್ಕೆ ನಾವೆಲ್ಲ ಮುಂದಾಗಲು ನೀರಿನ ಅಗತ್ಯತೆ ಇದೆ. ಇದನ್ನು ಮನಗಂಡಿರುವ  ರೈತರು ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರಲ್ಲದೇ,ರೈತರಿಗೆ ಬೇಕಾದರೆ ಸರ್ಕಾರಗಳು ಗುಂಡು ಹಾಕಲಿ ಆದರೆ  ಮಹದಾಯಿ ನೀರನ್ನು ಉತ್ತರ ಕರ್ನಾಟಕದ ಜನತೆಗೆ ನೀಡುವಂತಾಗಲಿ ಇದೇ ನಮ್ಮ ರೈತರ ಪ್ರಮುಖ ಬೇಡಿಕೆ ಎಂದು ತಿಳಿಸಿದರು.

ಶ್ರೀಶೈಲ ಮೇಟಿ, ವಿಠಲ ಜಾಧವ ಮಾತನಾಡಿದರು. ಧರಣಿಯಲ್ಲಿ ಬಸಮ್ಮ ಐನಾಪೂರ, ಈರಪ್ಪ ದ್ಯಾವನಗೌಡ್ರ, ಹನುಮಂತ ಸರನಾಯ್ಕರ್. ವೀರಣ್ಣ ಸೊಪ್ಪಿನ, ಸಂತೋಷ ಮಾದರ, ವ್ಹಿ.ಎನ್. ಬಡಿಗೇರ, ಸೋಮಲಿಂಗಪ್ಪ ಆಯಟ್ಟಿ, ಅರ್ಜುನ ಮಾನೆ, ಬೀರಪ್ಪ ಸನ್ನಿ, ಗುರನಗೌಡ ಚೆನ್ನಪ್ಪಗೌಡ್ರ, ಮಲ್ಲಪ್ಪ ಐನಾಪೂರ, ನಿಂಗಪ್ಪ ನಾರಾಯನ, ಆರ್.ಐ. ಸೋಮಾಪೂರ, ರಾಜೇಶ್ವರಿ ವೀರನಗೌಡ್ರ, ಲೀಲಕ್ಕ ಹಸಬಿ, ದೇವಕ್ಕ ಕೊಪ್ಪನಗೌಡ್ರ, ಹನುಮಂತ ಭಜಂತ್ರಿ, ವೆಂಕಪ್ಪ ಹುಜರತ್ತಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here