59 ನೇ ಮಹಾಪರಿನಿರ್ವಾಣ ದಿನಾಚರಣೆ

0
24
loading...

news-3ಮುಂಡರಗಿ,7: ಈ ದೇಶದ ಕೋಟಿ ಕೋಟಿ ತುಳಿತಕ್ಕೋಳಗಾದ ಜನರ ಬದುಕಿನಲ್ಲಿ ಸುಧಾರಣೆ ತರುವಂತಹ ಮಹತ್ಕಾರ್ಯ ಮಾಡುವುದರ ಜೊತೆಗೆ ಈ ದೇಶ ಸದೃಡವಾಗಿ ಮುನ್ನಡೆಯಲು ಬೇಕಾದ ಸಂವಿಧಾನವನ್ನ ಮಹಾನ್ ಮಾನವತಾವಾಧಿ ಡಾ. ಬಿ.ಆರ್. ಅಂಬೇಡ್ಕರ ರಚಿನೆ ಮಾಡಿದರು ಎಂದು ಪತ್ರಕರ್ತ ಲಕ್ಷ್ಮಣ ಎಚ್. ದೊಡ್ಡಮನಿ ಹೇಳಿದರು.
ತಾಲೂಲಿನ ಡಂಬಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಯುವಕ ಮಂಡಳದ ವತಿಯಿಂದ 59 ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತ್ವದಗಳ ತಳಪಾಯದಲ್ಲಿ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರೂ ಪ್ರಗತಿ ಹೊಂದಿದಾಗ ಮಾತ್ರ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು. ಅಲ್ಲದೆ ಅಂಬೇಡ್ಕರ ಅವರು ಬಾಲ್ಯದ ಜೀವನದಲ್ಲಿ ಅತ್ಯಂತ ನರಕಯಾತನೆಯನ್ನು ಅನುಭವಿಸಿದ್ದರು ಅಲ್ಲದೆ ಉನ್ನತಸ್ಥಾನದಲ್ಲಿಯು ಕೂಡ ಹಲವು ಅವಮಾನಗಳನ್ನು ಎದುರಿಸಿದ್ದರು, ಹೀಗಾಗಿ ಅಂಬೇಡ್ಕರ ಆಶೆಯದಂತೆ ದಲಿತ ಜನಾಂಗದವರು ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮರಿಯಪ್ಪ ಸಿದ್ದಣ್ಣವರ ವಹಿಸಿದ್ದರು ಕ್ರಾಂತಿಗೀತೆ ಹಾಡಿದರು. ಗುಡದಪ್ಪ ತಳಗೇರಿ ಹಾಗೂ ಬಸವರಾಜ ಗಂಗಾವತಿ ಪ್ರಸ್ತಾವಿಕ ಮಾತನಾಡಿ 21 ನೇ ಶತಮಾನದ ನಾಗರಿಕ ಸಮಾಜಿದಲ್ಲಿಯು ಸಹ ದಲಿತರ ಮೇಲೆ ಕೆಲವೂಂದು ಭಾಗದಲ್ಲಿ ದೌರ್ಜನ್ಯ ನಡೆಯುತ್ತಿರು.

ಪ್ರಕರಣಗಳು ಕಂಡು ಬರುತ್ತಿರುದನ್ನ ಅವಲೋಕನ ಮಾಡಿದರೆ ಇಡೀ ಮಾನವ ಕುಲವೇ ನಾಚಿಕೆ ಪಡುವಂತಹದ್ದು ಎಂದರು. ಕಾರ್ಯಕ್ರಮದಲ್ಲಿ ದೇವಪ್ಪ ತಳಗೇರಿ ಹನಮಂತಪ್ಪ ಮೇವುಂಡಿ ಲಕ್ಷ್ಮಣ ಬೇಟಗೇರಿ ಮಹಾಂತೇಶ ಗೌಡಣ್ಣವರ ದುರಗಪ್ಪ ಗೋವಿನಕೊಪ್ಪ ಕಾಶಪ್ಪ ಪೂಜಾರ ಮುತ್ತಪ್ಪ ದೊಡ್ಡಮನಿ ಮರಿಯಪ್ಪ ದೊಡ್ಡಮನಿ ಬಸವರಾಜ ವಗ್ಗರಣೆ ಹಾಲಪ್ಪ ಗೋವಿನಕೊಪ್ಪ ಸುರೇಶ ದೊಡ್ಡಮನಿ ನೀಲಪ್ಪ ಹಳ್ಳಿಕೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಲಲಿತಾ ಬಂಗಾರಶೆಟ್ರ ಉಪಸ್ಥಿತರಿದ್ದರು.

ಗಾಯತ್ರೆವ್ವ ತಳಗೇರಿ ಪ್ರಾರ್ಥಿಸಿದರು. ಮಹಾಂತೇಶ ಗೌಡಣ್ಣವರ ನಿರೂಪಿಸಿದರು, ನಿಂಗಮ್ಮ ದೊಡ್ಡಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here