ಅಂಗವಿಕಲರಿಗೆ ಉಚಿತ ತರಬೇತಿ

0
24
loading...

ಇಳಕಲ್ಲ 04: ಇಲ್ಲಿಗೆ ಸಮೀಪದ ಕರಡಿ ಗ್ರಾಮದಲ್ಲಿ ಜರುಗಿದ ಬಾಗಲಕೋಟ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಹಾಗೂ ಇಳಕಲ್ಲ ಆಶಾದೀಪ ಅಂಗವಿಕಲರ ಸಂಸ್ಥೆಯ ಆಶ್ರಯದಲ್ಲಿ ನಡೆದ ಅಂಗವಿಕಲರ ತರಬೇತಿ ಹಾಗೂ ಉದ್ಯೋಗ ಆಯ್ಕೆ ಶಿಬಿರದಲ್ಲಿ ಕರಡಿ ಮತ್ತು ಬೂದಿಹಾಳ ಎಸ್‍ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಅಂಗವಿಕಲರು ಭಾಗವಹಿಸಿದ್ದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ನಿರಂಜನ ಮಾತನಾಡಿ ಗ್ರಾಮೀಣ ಭಾಗದ ಎಲ್ಲ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮತ್ತು ಅವರು ಸ್ವಾವಲಂಬನೆಯಾಗಿ ಜೀವನ ನಡೆಸಲು ಸಾಧ್ಯವಿದೆಯಂದು ನಿರೂಪಿಸುವುದಕ್ಕೊಸ್ಕರ 1959ರಲ್ಲಿ ಕೆಲವು ಅಂಗವಿಕಲರು ಹಾಗೂ ಎಮ್ ಎಸ್ ಹೇಮಾ ರವರು ಸ್ಥಾಪಿಸಿದ ” ದಿ ಅಸೋಸಿಯೇಷನ ಆಫ್ ವಿತ್ ಡಿಸೆಬಿಲಿಟಿ ಸೇವಾ ಸಂಸ್ಥೆ (ಎಪಿಡಿ) ಉಚಿತವಾಗಿ ಕೈಗಾರಿಕಾ ಮತ್ತುತೋಟಗಾರಿಕಾ ತರಬೇತಿ,ಪುನರ್ವಸತಿ,ಕೌಶಲ್ಯ ತರಬೇತಿಯನ್ನು ನೀಡುತ್ತಿದೆ 17 ವರ್ಷ ಮೇಲ್ಪಟ್ಟು 30 ವರ್ಷದೊಳಗಿನ ಎಲ್ಲ ಅಂಗವಿಕಲರು ನಾಲ್ಕು ತಿಂಗಳ ಕಾಲ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲು ಅರ್ಹರು. ಅಂತವರು ತಮ್ಮ ಪಾಲಕರ ಒಪ್ಪಿಗೆಯ ಮೇರೆಗೆ ಅವರನ್ನು ತರಬೇತಿಯಲ್ಲಿ ಸೇರಿಸಿಕೊಳ್ಳುವುದು ನಂತರ ಉದ್ಯೋಗವನ್ನು ನೀಡುವುದು ಈ ಸೇವಾ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶವಾಗಿದೆ ಎಂದರು.
ಅತಿಥಿಗಳಾಗಿ. ಮಲ್ಲಪ್ಪ ಗೌಡರ ಶಿವು ಹೂಗಾರ ರಮೇಶ ಗೌಂಡಿ ಸಿದ್ದಪ್ಪ ಗಂಗೂರ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾದೀಪ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ ವಹಿಸಿ ಮಾತನಾಡಿ ಇದೇ ಜ. 8 ರವರೆಗೆ ಬೆಂಗಳೂರಿನಲ್ಲಿ ಅಂಗವಿಕಲರಿಗೆ ಉಚಿತವಾಗಿ ಕೃತಕ ದೇಹದ ಬಾಹ್ಯ ಅಂಗಗಳ ಉಪಕರಣಗಳನ್ನು ಜೋಡಿಸಲಾಗುವದು. ಎಲ್ಲಾ ಅರ್ಹ ಅಂಗವಿಕಲರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ಶರಣಯ್ಯ ಗೌಡರ ರಾಮಣ್ಣ ಗುರಿಕಾರ ಬಾಲಪ್ಪ ಬಳುಟಗಿ ಯಮನೂ ನಿಡಸನೂರ ಶಾಂತಮ್ಮ ಗಾಣೀಗೇರ ಬಸಮ್ಮ ಗಾಣಿಗೇರ ಗಂಗಮ್ಮ ಪೂಜಾರಿ ಶಿವಭಾಯಿ ಅಂಗಡಿ ಪಾರ್ವತಿ ಕಪ್ಪರ ಮಠ ಇತರರು ಇದ್ದರು.ಆನಂದ ಜಾಲಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ರೇವಣಸಿದ್ದಪ್ಪ ಮಾದರ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here