ಅಕ್ರಮ ಕಟ್ಟಡ ಹಾಗೂ ಫುಟಪಾತ್ ತೆರೆವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ

0
23
loading...


ಕಾರವಾರ : ನಗರದಲ್ಲಿರುವ ಅಕ್ರಮ ಕಟ್ಟಡ ಹಾಗೂ ಅಕ್ರಮ ಫುಟಪಾತ್‍ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸದರು.
ನಗರದಲ್ಲಿ ಸುಮಾರು 30ಕ್ಕೂ ಹೆಚ್ಚು ಅಕ್ರಮ ಬಹುಮಹಡಿ ಕಟ್ಟಡಳಿವೆ. ಇವು ಕಾರವಾರ ನಗರಸಭೆ ಕಾನೂನಿನ ನಿಯಮಬಾಹೀರವಾಗಿದೆ. ಹಿಂದಿನ ಜಿಲ್ಲಾಧಿಕಾರಿಗಳು ಅಕ್ರಮ ಕಟ್ಟಡಗಳ ಬಗ್ಗೆ ಸಮಿತಿ ರಚಿಸಿ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದರು. ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಮಸ್ಯೆಗಳಿಗೆ ನಗರಸಭೆಯ ಪೌರಾಯುಕ್ತರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಬೇಜವಾಬ್ದಾರಿತನದಿಂದ ಕಟ್ಟಡಗಳ ಸೂಕ್ತ ಪರಿಶೀಲನೆ ನಡೆಸದೆ ಪರವಾನಿಗಿ ನೀಡಿದ್ದಾರೆ. ನಗರದ ಮುಲ್ಲಾಸ್ಟಾಪ್ ಎದುರಿನ ಮತ್ತು ಸಾಯಿ ಮಂದಿರಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿನ ಬಹುಮಹಡಿ ಕಟ್ಟಡಕ್ಕೆ ಪರವಾನಿಗಿ ನೀಡಿದ್ದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ಕಟ್ಟಡಗಳು ನಕ್ಷೆಗೆ ವಿರೋಧವಾಗಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದಲ್ಲದೆ ಯಾವುದೇ ರೀತಿಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಿಲ್ಲ. ನಗರದಲ್ಲಿರುವ ಅಂಗಡಿ ಫುಟ್‍ಪಾತ್ ಜಾಗವನ್ನು ಅಕ್ರಮಿಸಿಕೊಳ್ಳಲಾಗಿದ್ದು ಅವುಗಳನ್ನು ತೆರವುಗೊಳಿಸಬೇಕು. ಅಲ್ಲದೆ ಪ್ರತಿಯೊಂದು ಅಂಗಡಿಯ ಮಾಲೀಕರು ಕಸದ ಡಬ್ಬಿಯನ್ನು ಉಪಯೋಗಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಹುಮಹಡಿ ಕಟ್ಟಡಗಳಲ್ಲಿ ಶೌಚಾಲಯದ ಸೂಕ್ತವಾದ ವ್ಯವಸ್ಥೆ ಮಾಡದೇ ನೇರವಾಗಿ ಯುಜಿಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಯುಜಿಡಿ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಇಲ್ಲದ ಕಾರಣ ಎಲ್ಲಡೆ ಗಬ್ಬುವಾಸನೆ ಹರಡಿಕೊಂಡಿದೆ ಈ ವ್ಯವಸ್ಥೆಯನ್ನು ನಗರಸಭೆ ಸರಿಪಡಿಸಬೇಕಾಗಿದೆ. ಅಲ್ಲದೆ ಬಡ ವ್ಯಾಪಾರಿಗಳಿಗೆ ದಿನದ ತರಕಾರಿ ವ್ಯಾಪಾರಕ್ಕಾಗಿ ಸೂಕ್ತ ಸ್ಥಳದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅಕ್ರಮಕಟ್ಟಡದ ಪರವಾನಿಗಿ ನೀಡಿದ ನಗರಸಭೆ ಪೌರಾಯುಕ್ತರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು. ಈ ಬಗ್ಗೆ 15 ದಿನದಲ್ಲಿ ತಕ್ಕ ಕ್ರಮಕೈಗೊಳ್ಳದಿದ್ದರೇ ನಗರಸಭೆ ಎದುರು ಧರಣಿ ನಡೆಸಿ ಪ್ರತಿಭಟಿಸಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್, ದಿವ್ಯಾ ನಾಯ್ಕ, ಸುಭಾಷ ಗುನಗಿ, ನಿಲೇಶ್ ಧಾಮಸಾಡೇಕರ್, ರೋಷನ್ ತಾಂಡೇಲ್, ರೋಷನ್ ಹರಿಕಂತ್ರ ಹಾಗೂ ಇನ್ನಿತರರು ಇದ್ದರು.

loading...

LEAVE A REPLY

Please enter your comment!
Please enter your name here