ಅಕ್ರಮ ಸಾರಾಯಿ ಮಾರಾಟ ಒರ್ವನ ಬಂಧನ

0
12
loading...

ಹಾರೂಗೇರಿ 31: ಪಟ್ಟಣದ ಪೋಲಿಸ ಠಾಣಾ ವ್ಯಾಪ್ತಿಯ ಸವಸುದ್ಧಿ ಗ್ರಾಮದ ಭೂಮಿಕಾ ಧಾಬಾ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಕಂಕಣವಾಡಿಯ ಪ್ರಭು ಹಾಲಪ್ಪ ಗಡಕರಿ ಎಂಬಾತನನ್ನು ಗುರುವಾರ ರಾತ್ರಿ ಹಾರೂಗೇರಿ ಪೋಲಿಸರು ಬಂಧಿಸಿದ್ದಾರೆ,
ಬಂಧಿತನಿಂದ ಎರಡು ಸಾವಿರದ ಆರುನೂರು ರೂಪಾಯಿ ಮೌಲ್ಯದ 52 ಬಾಟಲಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಹಾರೂಗೇರಿ ಪಿಎಸ್‍ಐ ಶ್ರೀಶೈಲ ಬ್ಯಾಕೂಡ, ಸಿಬ್ಬಂದಿಗಳಾದ ಎಮ್,ಎಮ್ ಡವಳೇಶ್ವರ, ಬಿ,ಬಿ ಶಿರಗೂರ, ಎಮ್,ಎ ಜಮಾದರ ಕಾರ್ಯಾಚರಣೆಯಲ್ಲಿದ್ದರು. ಹಾರೂಗೇರಿ ಪೋಲಿಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here