ಅಜಾತ ರೇವಣಸಿದ್ದೇಶ್ವರರ 54 ನೇ ಪುಣ್ಯಾರಾಧನೆ

0
23
loading...


ನರಗುಂದ : ತಾಲೂಕಿನ ಸುಕ್ಷೇತ್ರ ಚಿಕ್ಕನರಗುಂದದಲ್ಲಿ ಮಹಾ ಶಿವಯೋಗಿ ವಾಕ್ಯ ಸಿದ್ದಿಪುರುಷ ಅಜಾತ ರೇವಣಸಿದ್ದೇಶ್ವರರ 54 ನೇ ಪುಣ್ಯಾರಾಧನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ಜ. 15 ರಿಂದ ಆರಂಭಗೊಂಡಿದ್ದು ಜ. 22 ರವರೆಗೆ ಜರುಗಲಿವೆ. ಜ. 22 ರಂದು ಸಂಜೆ 5 ಗಂಟೆಗೆ ರೇವಣಸಿದ್ದೇಶ್ವರರ ಮಹಾರಥೋತ್ಸವ ನಡೆಯಲಿದೆ.
ಈ ನಿಮಿತ್ತ ಸಪ್ತಾಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ. 22 ರವರೆಗೆ ರೇವಣಸಿದ್ದೇಶ್ವರರ ಪುರಾಣ ಪಠನವನ್ನು ವಿಜಯಲಕ್ಷ್ಮೀ ಕಿತ್ತೂರ, ಯಲ್ಲವ್ವ ಚಾವಡಿ, ಶಿಲ್ಪಾ ಕಲಹಾಳ, ಗಂಗಮ್ಮ ಚನ್ನಪ್ಪಗೌಡ್ರ ನೆರವೇರಿಸುತಿದ್ದು ಈಶ್ವರಿ ವಿದ್ಯಾಯಲಯದ ಸಂಚಾಲಕಿ ಪ್ರಭಕ್ಕ ನಿತ್ಯ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.
ಸಪ್ತಾಹದ ಅಂಗವಾಗಿ ಜ. 18 ರಂದು ಮಹದೇವಪ್ಪ ಭೂಮಣ್ಣವರ ಅವರಿಂದ ಹಾಗೂ ಜ. 19 ರಂದು ಡಾ. ಬಿ.ಎಸ್. ಕೋಣನವರ ಮತ್ತು ಜ. 20 ರಂಧು ಐ.ಕೆ. ಮುನವಳ್ಳಿ ಮತ್ತು ಜ. 21 ರಂದು ಮಂಜುನಾಥ ಶಾಸ್ತ್ರಿಗಳಿಂದ ವಿವಿಧ ವಿಷಯ ಕುರಿತು ಉಪನ್ಯಾಸ ಜರುಗಲಿವೆ. ಶಿವಾನಂದ ಪರಮಾನಂದ ಹಚ್ಚಾಳ ಇವರು ನಿತ್ಯ ನಡೆಯುವ ಮಹಾಪ್ರಸಾದ ಸೇವೆಗೆ 1 ಲಕ್ಷರೂ ಕಾಣಿಕೆ ಅರ್ಪಿಸಿದ್ದಾರೆ.
ಜ. 22 ರಂದು ರಾತ್ರಿ 8 ಗಂಟೆಗೆ ಜಾಗರಣೆ ಕಾರ್ಯಕ್ರಮ ಸಮಾರಂಭ ನೆರವೇರಲಿದೆ. ಸಾನಿಧ್ಯವನ್ನು ಚಿಕ್ಕನರಗುಂದ ಕೋರಿಮಠದ ಕಾಡಸಿದ್ದೇಶ್ವರ ಶ್ರೀಗಳು ವಹಿಸುವರು. ಹನುಮಂತ ಮಹರಾಜರು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು, ಮುಳ್ಳೂರ ಚಂದ್ರಶೇಖರ ಸ್ವಾಮಿಗಳು, ಅವರಾದಿ ಫಲಹಾರೇಶ್ವರಮಠದ ಶಿವಮೂರ್ತಿ ಸ್ವಾಮಿಗಳು, ಶಿವಮೂರ್ತಯ್ಯ ಸುರೇಬಾನ, ಎಸ್.ಎಸ್. ಪಟ್ಟಣಶೆಟ್ಟಿ, ವಿರಭದ್ರಯ್ಯ ಶಾಸ್ತ್ರಿಗಳು, ಎಂ.ಎಸ್. ಯಾವಗಲ್, ಈರಣ್ಣ ಹುರಕಡ್ಲಿ, ದೊಡ್ಡಯ್ಯ ಹಿರೇಮಠ, ಜಿ.ಟಿ. ಹೂಲಿ ಗುರುಗಳು, ವೆಂಕರಡ್ಡಿ ಹೂಲಿ, ಕೆ.ಪಿ. ಸಾಲಿಮಠ, ಚಂದ್ರಗೌಡ ಪೊಲೀಸ್ ಪಾಟೀಲ, ಜಿ.ಸಿ. ಮಣ್ಣೂರಮಠ, ಭೀಮಪ್ಪ ಹೂಲಿ ಪಾಲ್ಗೊಳ್ಳುವರೆಂದು ರೇವಣಸಿದ್ದೇಶ್ವರ ಕೋರಿಮಠದ ಸದ್ಬಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here