ಆತ್ಮ-ಪರಮಾತ್ಮ ಬೇರೆ ಇಲ್ಲ

0
39
loading...

ಗೋಕಾಕ 20: ಆತ್ಮ-ಪರಮಾತ್ಮ ಬೇರೆ ಇಲ್ಲ. ನಮ್ಮ ಆತ್ಮವನ್ನೇ ಪರಮಾತ್ಮನನ್ನಾಗಿ ಮಾಡಿಕೊಳ್ಳುವ ಧಿವ್ಯ ಶಕ್ತಿ ನಮ್ಮಲ್ಲಿದೆ. ಜೀವನದ ಪರಮಸುಖವಾಗಿರುವ ಬ್ರಹ್ಮಾನಂದವನ್ನು ಅನುಭವಿಸಿಯೇ ಪಡೆಯಬೇಕು ವಿನಹ ಕೇಳಿ ಪಡೆಯುವಂತಹದಲ್ಲವೆಂದು ಶ್ರೀ ಪ್ರಭು ಮಹಾರಾಜರು ಬೆನ್ನಾಳಿ ಹೇಳಿದರು.
ಹಡಗಿನಾಳ ಗ್ರಾಮದ ಕಲ್ಲೋಳ್ಳಿ ಮನೆತನದ ಹಿರಿಯ ಚೇತನಗಳಾಗಿದ್ದ ಕಲ್ಲಪ್ಪ, ದುಂಡಪ್ಪ ಮತ್ತು ಸಿದ್ದಪ್ಪ ಅವರುಗಳ ಪುಣ್ಯಸ್ಮರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಆಧ್ಯಾತ್ಮ ಚಿಂತನ ಗೋಷ್ಠಿಯ ಸಾನಿಧ್ಯವಹಿಸಿ ಮಾತನಾಡಿದ ಅವರು ನಮ್ಮ ಮನಸ್‍ನ್ನು ಪರಿಶುದ್ಧಗೊಳಿಸುವ ಮೂಲಕ ಇನ್ನೋಬ್ಬರಿಗೆ ಒಳಿತನ್ನು ಮಾಡುವದೇ ಈ ಜೀವನದ ಧ್ಯೇಯವಾಗಿರಬೇಕು. ಅದುವೇ ಪರಿಶುದ್ಧ ಜೀವನವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಯವರು ಮಾತನಾಡಿ ತಂತ್ರಜ್ಞಾನದ ಅವಿಸ್ಕಾರಗಳಿಂದ ನಾಗಾಲೋಟದಲ್ಲಿ ಸಾಧನೆಗಳ ಶಿಖರವನ್ನೇರುತ್ತಿರುವ ಇಂದಿನ ವೈಜ್ಞಾನಿಕ ಯುಗದಲ್ಲಿ ಲೌಕಿಕ ಜೀವನಕ್ಕೆ ಬೇಕಾದ ಎನೇಲ್ಲವನ್ನೂ ಸಾಧಿಸಿರುವ ನಾವು ಆತ್ಮ ಸಂತೃಪ್ತಿ ಹಾಗೂ ಮಾನಸಿಕ ನೆಮ್ಮದಿಗಳಿಂದ ದೂರವಾಗಿದ್ದೇವೆ. ಇನ್ನೂ ಬೇಕೆಂಬ ಆಸೆಯನ್ನು ಬಿಟ್ಟಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯ. ಭಗವಂತನ ಸ್ವರೂಪದ ಗುರುವಿನ ಉಪದೇಶ ಮತ್ತು ಮಾರ್ಗದರ್ಶನ ಅತ್ಯವಶ್ಯ ಎಂದು ಹೇಳಿದ ಅವರು ಪ್ರತಿಷ್ಠಿತ ಹಡಗಿನಾಳ ಕುಟುಂಬದ ಸದಸ್ಯರು ತಮ್ಮ ಹಿರಿಯರನ್ನು ಸ್ಮರಿಸುವ ಸಂದರ್ಭವನ್ನು ಜನತೆಗೆ ಆಧ್ಯಾತ್ಮಿಕ ಮೌಲ್ಯಗಳ ತಿರುಳನ್ನು ಪರಿಚಯಿಸುವ ಕಾರ್ಯವನ್ನು ಈ ಆಧ್ಯಾತ್ಮಿಕ ಚಿಂತನಗೋಷ್ಠಿಯಿಂದ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ತುಕಾರಾಮ ಮಹಾರಾಜರು, ಇಂಚಗೇರಿ ಸಂಪ್ರದಾಯದ ಪ್ರವಚಕ ವಿರುಪಾಕ್ಷಿ ತುಬಾಕಿ, ಗಣ್ಯರಾದ ಜಿ. ಪಂ ಸದಸ್ಯ ವಾಸುದೇವ ಸವತಿಕಾಯಿ, ಬಾಳಪ್ಪ ಹಡಗಿನಾಳ, ಮುತ್ತೇಪ್ಪ ಆಡಿನ, ಶಿವಪ್ಪ ಕತ್ತಿ, ಅಪ್ಪಾಲಾಲ್ ನಗರ್ಜಿ, ಪ್ರಕಾಶ ಹರಿಜನ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here