ಆಹಾರ ಮೇಳದ ಸಂಜೆ ಕಾರ್ಯಕ್ರಮದಲ್ಲಿ ಗಾಯಕ ಗುರುಕಿರಣ ಪ್ರೇಕ್ಷಕರನ್ನು ರಂಜಿಸಿದರು

0
28
loading...


ಧಾರವಾಡ,: ಶಹರದ ಕೆಸಿಡಿ ಆವರಣದಲ್ಲಿ ಹೋಟೆಲ್ ಒಡೆಯರ ಸಂಘ ಹಾಗೂ ಕಲಾನಿಧಿ ಎಜ್ಯುಕೇಶನ್ ಮತ್ತು ಕಲ್ಚರಲ್ ಟ್ರಸ್ಟ್ ಏರ್ಪಡಿಸಿದ ಆಹಾರ ಮೇಳದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ಹಿನ್ನಲೆ ಗಾಯಕ ಗುರುಕಿರಣ ಅವರು ಮಾರಿಕಣ್ಣು ಹೋರಿ ಮ್ಯಾಲೆ…ಬಿನ್ ಲಾಡನ್ನು ನನ್ನ ಮಾವ….ಅವ್ವ ಕಣೋ, ನಮ್ಮವ ಜೀವ ಕಣೋ,, ಸಿದ್ಧ ಕಣೋ ಪ್ರಾಣ ಕೋಡಕೆ.. ಈ ನೆಲೆ-ಜಲ ನಾಡು-ನುಡಿಗೆ ಸೇರಿದಂತೆ ನೂತನ ಹಾಗೂ ಹಳೆಯ ಚಲನಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪ್ರೇಕ್ಷಕರು ಅದಕ್ಕೆ ಪ್ರತಿಯಾಗಿ ಸಿಳ್ಳೆ, ಕೇಕೇ ಹಾಗೂ ಚಪ್ಪಾಳೆಗಳ ಮೂಲಕ ಕಲಾವಿದರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು.
ಮೇಳವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಕಾರ್ಯಕ್ರಮದ ನಾಲ್ಕನೇ ದಿನ ಹೊಸದೊಂದು ಲೋಕವನ್ನೇ ಸೃಷ್ಠಿಸಿತ್ತು. ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿನ್ನಲೆಗಾಯಕ ಗುರುಕಿರಣ ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಯುವಜನರು ಹುಚ್ಚೆದು ಕುಣಿದು ಕುಪ್ಪಳಿಸಿದರು.
ಪಿಲ್ಮಫೇರ ಪ್ರಶಸ್ತಿ ಪುರಸ್ಕøತರಾದ ಶರ್ಮಿಳಾ ಮಲ್ನಾಡ್ ಹಾಗೂ ಚೈತ್ರಾ ಅವರ ಹುಡುಗಾ..ಹುಡುಗಾ ಎಂಬ ಹಾಡಿಗೆ ಮೈದಾನದಲ್ಲಿದ್ದ ಇಡೀ ಯುವಸಮೂಹ ಹೆಜ್ಜೆ ಹಾಕಿತು. ಅದಕ್ಕೆ ಪೂರಕವೆಂಬಂತೆ ಪ್ರೇಕ್ಷಕರ ಸಿಳ್ಳೇ ಮತ್ತು ಚಪ್ಪಾಳೆಗಳು ಕೇಳಿಬಂದವು

loading...

LEAVE A REPLY

Please enter your comment!
Please enter your name here