ಆಹಾರ ಮೇಳ 2016 ರ ಸಮಾರೋಪ ಸಮಾರಂಭ

0
29
loading...


ಧಾರವಾಡ,19: ಬರದ ಹಿನ್ನಲೆಯಲ್ಲಿ ಈ ಭಾರಿ ಜಿಲ್ಲಾ ಉತ್ಸವ ಆಚರಿಸಲು ಆಗಲಿಲ್ಲ ಈ ಕಾರಣಕ್ಕೆ ಪರ್ಯಾಯವಾಗಿ ಆಹಾರ ಮೇಳ ಆಯೋಜಿಸಿ ಸಾಂಸ್ಕøತಿಕ ಕಾರ್ಯಕ್ರಮ ಒದಗಿಸಿಕೊಟ್ಟ ಹೊಟೇಲ್ ಒಡೆಯರ ಸಂಘ ಹಾಗಾ ಕಲಾನಿಧಿ ಎಜುಕೇಶ್‍ನ ಹಾಗೂ ಕಲ್ಚರಲ್ ಟ್ರಸ್ಟನ ಕಾರ್ಯ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಕರ್ನಾಟಕ ಕಾಲೇಜು ಮೈದಾನದಲ್ಲಿ ಹೊಟೇಲ್ ಒಡೆಯರ ಸಂಘ ಹಾಗಾ ಕಲಾನಿಧಿ ಎಜುಕೇಶ್‍ನ ಹಾಗೂ ಕಲ್ಚರಲ್ ಟ್ರಸ್ ಏರ್ಪಡಿಸಿದ ಆಹಾರ ಮೇಳ 2016 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಐದು ದಿನಗಳ ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300 ಕಲಾವಿದರು ತಮ್ಮ ಕಲೆಯನ್ನು ಅದ್ಭತವಾಗಿ ಪ್ರದರ್ಶನ ನೀಡುವ ಮೂಲಕ ಧಾರವಾಡ ಜನತೆಯನ್ನು ರಂಜಿಸಿದ್ದಾರೆ. ವಿವಿಧ ಪ್ರದೇಶದಿಂದ ಆಗಮಿಸಿದ ಆಹಾರ ತಯಾರಿಕರು ರುಚಿಯಾದ ಆಹಾರವನ್ನು ಒದಗಿಸಿದರು. ಮೊದಲ ದಿನದ ಆಹಾರ ಮೇಳದಲ್ಲಿನ ಕೆಲ ತೊಂದರೆಗಳನ್ನು ಹೊರತುಪಡಿಸಿದರೆ ಒಟ್ಟಾರೆ ಆಹಾರ ಮೇಳ ಯಶಸ್ವಿಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಏಪ್ರೀಲ್ ತಿಂಗಳಲ್ಲಿ ಧಾರವಾಡ ಉತ್ಸವ ಆಚರಿಸಲು ಚಿಂತನೆ ನಡೆಸಲಾಗುವುದು ಎಂದರು.
ಹೊಟೇಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮೇಯರ್ ಅಶ್ವಿನಿ ಮಜ್ಜಿಗಿ, ಉಪಮೇಯರ್ ಸ್ಮೀತಾ ಜಾದವ್, ಪಾಲಿಕೆ ಸದಸ್ಯರಾದ ನಿರ್ಮಲಾ ಜವಳಿ, ಮೀನಾಕ್ಷಿ ಸಂತಬಾ, ರಘನಾಥ ಲಕ್ಕಣ್ಣವರ, ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ, ಆಯೋಜಕರಾದ ಸಂತೋಷ ಶೆಟ್ಟಿ, ಶ್ರೀನಿವಾಸ ಇಂಚೂರ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.
ನಂತರ ಆಹಾರ ಮೇಳದ ಪ್ರಯುಕ್ತ ಆಯೋಜಿಸಿದ ರಂಗೋಲಿ, ಅಡುಗೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರಿನ ಕಲಾವಿದರು ಅದ್ಭತವಾಗಿ ಚಂಡೇ ವಾದನ ಪ್ರದರ್ಶಿಸಿದರು. ಪಂಚಾಬ್, ಹರಿಯಾಣ, ಉತ್ತರಖಂಡಾ, ಮಧ್ಯಪ್ರದೇಶ ಹಾಗೂ ಜಮ್ಮು-ಕಾಶ್ಮೀರ ರಾಜ್ಯಗಳ ಕಲಾವಿದರು ಹೆಜ್ಜೆ ಹಾಕುವ ಮೂಲಕ ನೆರೆದ್ದ ಜನರನ್ನು ರಂಜಿಸಿದರು. ಯುವ ಡ್ಯಾನ್ಸ್ ಅಕ್ಯಾಡೆಮಿ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರಿಂದ ಜಾನಪದ ನೃತ್ಯಗಳು ಪ್ರದರ್ಶಿಸಿ ಆಹಾರ ಮೇಳಕ್ಕೆ ತೆರೆಯೆಳೆದವು.

loading...

LEAVE A REPLY

Please enter your comment!
Please enter your name here