ಈ ದೇಶಕ್ಕೆ ಕೊಡುಗೆ ನೀಡುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು: ಎಲ್.ಸಿ.ಲಿಂಬಯ್ಯಸ್ವಾಮಿಮಠ

0
31
loading...

ಶಿರಹಟ್ಟಿ: ತಾಯಿಯೇ ಮಗುವಿನ ಮೊದಲ ಗುರುವಾಗಿದ್ದು, ತಾಯಿ ನೀಡುವ ಉತ್ತಮ ಶಿಕ್ಷಣ ಆ ಮಗುವಿನ ಜೀವನಕ್ಕೆ ದಾರಿಯಾಗುವಂತಿರುತ್ತದೆ. ಉತ್ತಮ ಮಕ್ಕಳನ್ನು ಈ ದೇಶಕ್ಕೆ ಕೊಡುಗೆ ನೀಡುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು ಮಕ್ಕಳನ್ನು ಈ ದೇಶದ ಸಂಪತ್ತು ಆಗುವಂತೆ ಬೆಳೆಸುವದು ಇಂದಿನ ದಿನಗಳಲ್ಲಿ ಅತಿ ಅಗತ್ಯವಾಗಿದೆ ಎಂದು ಲಿಂಬಯ್ಯಸ್ವಾಮಿ ಪ್ರತಿಭಾಪ್ರತಿಷ್ಠಾನದ ಸಂಸ್ಥಾಪಕ ಎಲ್.ಸಿ.ಲಿಂಬಯ್ಯಸ್ವಾಮಿಮಠ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಲಕ್ಷ್ಮೇಶ್ವರ ನಗರದ ಹಿರೇಬಣದ ರಾಘವೇಂದ್ರಸ್ವಾಮಿಗಳ ಮಠದ ಎದುರಿಗೆ ಇರುವ ವಾಗ್ದೇವಿ ಟ್ರಸ್ಟ್‍ನ ಲಿಟ್ಲ್ ಚಾಂಪ್ಸ್ ಗುರುಕುಲಂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಯಾವುದೇ ಮಗು ಇಂದು ಶ್ರೇಷ್ಠನಾಗಬೇಕಾದಲ್ಲಿ ತಾಯಿ ನೀಡುವ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು. ಶಾಲೆಯಲ್ಲಿ ಏರ್ಪಡಿಸಲಾಗಿರುವ ಹಳೆಯ ವಸ್ತುಗಳು ಮತ್ತು ಇತ್ತಿಚೀನ ವಸ್ತುಗಳು ಮತ್ತು ಚಿತ್ರಕಲಾ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು ಪುರಾತನ ವಸ್ತುಗಳು ನಮ್ಮಿಂದ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಇಂದಿನ ಮಕ್ಕಳು ನೋಡುವದು ಸಹ ದುಸ್ತರವಾಗಿದೆ, ಅವು ನೋಡಲು ದೊರಕುವದು ಸಹ ಅಪರೂಪವಾಗಿದ್ದು, ಅನೇಕರು ಅವುಗಳು ಹಳೆಯದಾಗಿರುವದರಿಂದ ಅವುಗಳ ಬಗ್ಗೆ ನಿರ್ಲಕ್ಷ್ಯ ತೋರಿ ಮೂಲೆಯಲ್ಲಿ ಬಿಸಾಕಿರುವದನ್ನು ನಾವು ಕಾಣಬಹುದಾಗಿದೆ. ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿರುವ ವಸ್ತುಗಳು ನಮಗೆ ಇಂದಿಗೂ ಮಾದರಿಯಾಗಿವೆ. ಕೆಲವು ಜನರು ಅವುಗಳನ್ನು ಜತನದಿಂದ ಕಾಪಾಡಿಕೊಂಡು ಹೋಗುತ್ತಿರುವದರಿಂದ ಸ್ವಲ್ಪಮಟ್ಟಿಗಾದರೂ ಅವುಗಳು ಉಳಿಯುವಂತಾಗಿವೆ. ಹಳೆಯ ವಸ್ತುಗಳ ಬಗ್ಗೆ ತಿಳಿಸಿ ಹೇಳುವ ನಿಟ್ಟಿನಲ್ಲಿ ಲಿಟ್ಲ್ ಚಾಂಪ್ಸ್ ಗುರುಕುಲಂ ಶಾಲೆಯವರು ಮಾಡಿರುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿರುವದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಎಲ್.ಪೂಜಾರ ಮಾತನಾಡಿ ಮಕ್ಕಳಲ್ಲಿ ನಾವು ಹೇಗೆ ಶಿಕ್ಷಣವನ್ನು ಕೊಡುತ್ತೇವೆಯೋ ಹಾಗೆ ಆ ಮಕ್ಕಳು ಸಿದ್ದವಾಗುತ್ತಾರೆ. ಅನೇಕ ಸಂಪತ್ತುಗಳು ನಮಗೆ ಸಿಗಬಹುದು ಆದರೆ ವಿದ್ಯೆ ಎನ್ನುವ ಸಂಪತ್ತು ಎಂದಿಗೂ ಸರಳವಾಗಿ ದೊರೆಯಲು ಸಾಧ್ಯವಿಲ್ಲ, ಮನುಷ್ಯನಲ್ಲಿ ಕಲಿಯಬೇಕೆಂಬ ಛಲ, ನಿಷ್ಠೆ, ಕಠಿಣ ಪರಿಶ್ರಮ ಇದ್ದರೆ ಉತ್ತಮ ಸಾಧನೆ ಮಾಡುವ ಮೂಲಕ ಉನ್ನತ ಸ್ಥಾನವನ್ನು ಗಳಿಸಬಹುದಾಗಿದೆ. ಆದರೆ ಕೆಲವು ಮಕ್ಕಳು ವಿದ್ಯೆಯ ಬಗ್ಗೆ ಅಲಕ್ಷ್ಯ ಹೊಂದಿ ಸರಿಯಾಗಿ ಶಿಕ್ಷಣ ಪಡೆಯದೆ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂತಹ ಮಕ್ಕಳು ನಮ್ಮ ಸಮಾಜಕ್ಕೆ ಬೇಡ, ಹಿರಿಯರಿಗೆ ಗೌರವ ನೀಡುವ, ನಮ್ಮ ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಶಿಕ್ಷಣ ನಮಗೆ ಬೇಕಾಗಿದೆ. ಶಾಲೆಗಳು ಮಕ್ಕಳಿಗೆ ಇವುಗಳನ್ನು ನೀಡುವದು ಅಗತ್ಯವಾಗಿದ್ದು, ಶಿಕ್ಷಕ ವೃತ್ತಿಯ ಗೌರವಕ್ಕೆ ತಕ್ಕಂತೆ ನಡೆದುಕೊಂಡು ಶಿಕ್ಷಣ ನೀಡುವ ಕಾರ್ಯವನ್ನು ಮಾಡುವದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಲಿಟ್ಲ್ ಚಾಂಪ್ಸ್ ಗುರುಕುಲಂ ಶಾಲೆ ಒಂದು ಮಾದರಿ ಶಿಕ್ಷಣ ಕೇಂದ್ರವಾಗಿ ಹೆಸರು ಮಾಡುತ್ತಿರುವದು ಸಂತಸದ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಗತಿ ಹೆಚ್ಚುವಂತಾಗಲಿ ಎಂದು ಹಾರೈಸಿದರು.

ಲಿಟ್ಲ್ ಚಾಂಪ್ಸ್ ಗುರುಕುಲಂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹಳೆಯ ಮತ್ತು ಹೊಸ ವಸ್ತುಗಳು ಮತ್ತು ಚಿತ್ರ ಪ್ರದರ್ಶನ ನೂರಾರು ಜನರನ್ನು ಆಕರ್ಷಿಸುವಂತಿದ್ದವು. ವಸ್ತುಪ್ರದರ್ಶನದಲ್ಲಿ ಮುಖ್ಯವಾಗಿ ನಾಗಪ್ಪ ಕುಂಬಾರ ಅವರ ತಂದೆಯವರಿಂದ ಬಳುವಳಿಯಾಗಿ ಪಡೆದ ಸಂಪೂರ್ಣ ಮಣ್ಣಿನಿಂದಲೆ ತಯಾರಿಸಿದ ಅಪರೂಪದ ವಸ್ತುಗಳು ಈ ವಸ್ತು ಪ್ರದರ್ಶನ ಕೇಂದ್ರ ಬಿಂದುವಾಗಿತ್ತು. ಸುಮಾರು 150 ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಈ ಮಣ್ಣಿನ ವಸ್ತುಗಳಲ್ಲಿ ಗಂಟೆ, ದೀಪ, ಚಿಲುಮೆ, ಟ್ರೇ, ಮಣ್ಣಿನ ಸರಪಳಿಗಳು, ಕುಂಕುಮ ಭರಣಿ, ತತ್ರಾಣಿ, ಇತ್ಯಾದಿಗಳು ಬಹುಷಃ ಯಾವುದೇ ವಸ್ತು ಸಂಗ್ರಹಾಲಯದಲ್ಲಿಯೂ ಸಿಗಲಾರದಂತಹ ಮಹತ್ವವನ್ನು ಪಡೆದಿವೆ. ಅಲ್ಲದೆ ಸುಮಾರು 150 ವರ್ಷಗಳ ನೀರು ತುಂಬುವ ಮಣ್ಣಿನ ಗಡಿಗೆ ಹಾಗೂ 160 ವರ್ಷಗಳ ಹಳೆಯದಾದ ಮೈಲಾರಪ್ಪ ಅಗಡಿ ಅವರ ಮನೆಯಲ್ಲಿರುವ ಪೂಜೆಯ ಮಂಟಪ, ಮುಸ್ಲಿಂ ಬಾಂಧವರು ಉಪಯೋಗಿಸುವ ಮಹತ್ವದ ಸಾಮಗ್ರಿಗಳು, ಹಳೆ ನಾಣ್ಯಗಳು, ಅಡುಗೆ ಮನೆಯಲ್ಲಿ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಅಡುಗೆ ಸಾಮಗ್ರಿಗಳನ್ನು ಅಡುಗೆ ಮನೆಯಂತೆ ಹೊಂದಿಸಿಟ್ಟಿರುವ ರೀತಿ ಎಲ್ಲರನ್ನು ಆಕರ್ಷಿಸುವಂತಿತ್ತು. ಪಟ್ಟಣದ ವಿವಿಧ ಕಡೆಗಳಿಂದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸಿ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಆಶ್ಚರ್ಯದ ಜೊತೆಗೆ ಸಂತಸ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೂಜಾರ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆಯ ಸದಸ್ಯರಾದ ಮಹೇಶ ಹೊಗೆಸೊಪ್ಪಿನ, ಕಿರಣ ನವಲೆ, ಸಂಸ್ಥೆಯ ಆಡಳಿತಮಂಡಳಿಯ ಸದಸ್ಯರಾದ ದೇವರಾಜ ತೋಟದ, ರಂಗನಾಥ ಬದಿ, ಶಿವಕುಮಾರ ಮಾನ್ವಿ, ಗಂಗಾಧರ ಮ್ಯಾಗೇರಿ, ಉಮೇಶ ಯರ್ಲಗಟ್ಟಿ, ಸುರೇಶ ವೇರ್ಣೆಕರ, ರಾಜು ಬಿಂಕದಕಟ್ಟಿ, ಎಂ.ಎಂ.ಗದಗ ಮುಂತಾದವರು ಆಗಮಿಸಿದ್ದರು. ಮುಖ್ಯೋಪಾದ್ಯಾಯನಿ ಸುನೀತಾ ಯರ್ಲಗಟ್ಟಿ ಸ್ವಾಗತಿಸಿದರು, ಶಿಕ್ಷಕಿಯರಾದ ಪ್ರಿಯಾ ಬಳ್ಳಾರಿ, ನಿರ್ಮಲಾ ಚವ್ಹಾಣ, ಮಲ್ಲಮ್ಮ ತಡಸದ ಹಾಜರಿದ್ದು ಕಾರ್ಯಕ್ರಮ ನಿರ್ವಹಣೆ ಮಾಡಿದರು.

loading...

LEAVE A REPLY

Please enter your comment!
Please enter your name here