ಒಳ್ಳೆಯ ದೇಶ ಕಟ್ಟುವ ಹೊಣೆ ಮತದಾರ ಮೇಲಿದೆ : ಯ.ರು.ಪಾಟೀಲ

0
29
loading...

ಚನ್ನಮ್ಮ ಕಿತ್ತೂರು 25: ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವಂತಹ ನಮ್ಮ ಬೃಹತ್ ರಾಷ್ಟ್ರದ ಪ್ರಜಾಪ್ರಭುತ್ವ ಸರ್ಕಾರವನ್ನು ರಚಿಸಬೇಕಾದರೆ ಮತದಾರ ಯಾವ ಆಮಿಷಕ್ಕೆ ಒಳಗಾಗಬಾರದು, ಗ್ರಾಮೀಣ ಮಟ್ಟದಿಂದ ಒಳ್ಳೆಯ ದೇಶವನ್ನು ಕಟ್ಟುವಂತಹ ಹೊಣೆ ಮತದಾರನ ಮೇಲಿದೆ ಎಂದು ಇಲ್ಲಿಯ ವಿಶೇಷ ತಹಶೀಲ್ದಾರ ಯ.ರು.ಪಾಟೀಲ ಹೇಳಿದರು.
ಮತದಾರ ದಿನಾಚರಣೆಯ ಅಂಗವಾಗಿ ಪಂಚಾಯತಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತ ಎಣಿಕೆಯಲ್ಲಿ ಮೊದಲು ತುಂಬಾ ವಿಳಂಬವಾಗುತಿತ್ತು ಆದರೆ ಈಗ ತಂತ್ರಜ್ಞಾನದ ಸಹಾಯದಿಂದ ಮತ ಎಣಿಕೆ ತುಂಬಾ ವೇಗವಾಗಿ ನಡೆಯುತ್ತಿದ್ದು ಮತದಾರನಿಗೆ ಮತ ಚಲಾಯಿಸಲು ತುಂಬಾ ಸಹಾಯಕಾರಿಯಾಗಿದೆ, ಚುನಾವಣೆಗಳಿಗೆ ನೀತಿ ಸಂಹಿತೆ ಇದ್ದರು ಕೂಡ ಅಭ್ಯರ್ಥಿಗಳು ಕಳ್ಳ ಮಾರ್ಗವನ್ನು ಅನುಸರಿಸುತ್ತಿದ್ದು ಇದು ತಂಬಾ ವಿಷಾದನೀಯ ಸಂಗತಿ ಮತದಾರ ತನ್ನ ಜಾಣ್ಮೆಯನ್ನು ತೋರಿಸಿ ಆಮೀಷವೂಡ್ಡುವ ಅಭ್ಯರ್ಥಿಗಳಿಗೆ ತಕ್ಕ ಪಾಠವನ್ನು ಕಲಿಸಬೇಕೆಂದರು.
ಉಪ ತಹಶಿಲ್ದಾರ ಆರ್.ಎಸ್.ಮಾನೆ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್. ವಾಯ್, ಶಿಂಧೆ, ಪ್ರೌಢಶಾಲಾ ಮುಖ್ಯೋಧ್ಯಾಪಕ ಸಿ.ಎಂ.ಪಾಗಾದ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here