ಕಲಾವಿದರು ಬೆಳೆಯಲು ಅಭಿಮಾನಿಗಳ ಪಾತ್ರ ಮುಖ್ಯ : ನಟ ಶ್ರೀನಾಥ

0
20
loading...

ಗೋಕಾಕ 24: ಕಲೆ ಹಾಗೂ ಕಲಾವಿದರನ್ನು ಬೆಳೆಸುವುದರಲ್ಲಿ ಅಭಿಮಾನಿಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಚಲನಚಿತ್ರ ಹಿರಿಯ ನಟ ಶ್ರೀನಾಥ ಹೇಳಿದರು.
ಅವರು ಶನಿವಾರ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗುತ್ತಿರುವ 15ನೇ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಅಂತಿಮ ಹಂತದ 3ನೇ ದಿನದ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದರು.
ಚಲನಚಿತ್ರ ನಟಿ ಪ್ರಜ್ಞಾ ಮಾತನಾಡುತ್ತಾ ಕನ್ನಡ ಚಲನಚಿತ್ರ ರಂಗದ ಬೆಳವಣಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನತೆಯ ಸಹಕಾರ ಅಗತ್ಯವಿದ್ದು ಅಭಿಮಾನಿಗಳು ನಮ್ಮನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಚಲನ ಚಿತ್ರ ನಿರ್ದೇಶಕ ರಾಧಾಕೃಷ್ಣ ಫಲ್ಲಕ್ಕಿ, ನಟ ಡಾ.ಸೋಹನ್ ಕುಮಾರ ಈ ಸಂದರ್ಭದಲ್ಲಿ ಇದ್ದರು.

loading...

LEAVE A REPLY

Please enter your comment!
Please enter your name here