ಕೀಲಿ ಮುರಿದು ಮನೆ ಕಳ್ಳತನ

0
21
loading...

ಹುಬ್ಬಳ್ಳಿ- ಸಿಮ್ಲಾನಗರದಲ್ಲಿ ಮನೆ ಕೀಲಿ ಮುರಿದು ಕಳ್ಳತನ ಮಾಡಿದ ಘಟನೆ ನಡೆದಿದೆ. ಸಿಮ್ಲಾನಗರದ ಮೋಸಿನ್ ರಫೀಕ ಅಹ್ಮದ ಮಕಾನದಾರ ಎಂಬುವವರ ಮನೆಯಲ್ಲಿ ಕಳುವಾಗಿದೆ. ಜ. 16ರಂದು ಮಧ್ಯಾಹ್ನ ಮೋಸಿನ್ ಅವರ ತಾಯಿ ಮನೆ ಕೀಲಿ ಹಾಕಿ ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮನೆಯಲ್ಲಿದ್ದ 57 ಗ್ರಾಂ ಬಂಗಾರದ ಆಭರಣ ಹಾಗೂ 440 ಗ್ರಾಂ ಬೆಳ್ಳಿಯ ಸಾಮಗ್ರಿ ಕಳುವಾಗಿವೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

loading...

LEAVE A REPLY

Please enter your comment!
Please enter your name here