ಕೃಷಿ ಮಿತ್ರ ಮಾರಾಟ ಮಳಿಗೆ ಪ್ರಾರಂಭ

0
61
loading...

ಹುಕ್ಕೇರಿ 20: ತಾಲೂಕಿನ ಬೆಲ್ಲದ ಬಾಗೇವಾಡಿಯ ಕೃಷಿ ಸೇವಾ ಸಹಕಾರಿ ಸಂಘದವರು ರೈತರಿಗಾಗಿ ಪ್ರತ್ಯೇಕ ಕೃಷಿ ಮಿತ್ರ ಮಾರಾಟ ಮಳಿಗೆಯನ್ನು ಬುಧವಾರ ದಿ.20 ರಂದು ಬೆಲ್ಲದ ಬಾಗೇವಾಡಿಯಲ್ಲಿ ಪ್ರಾರಂಭಿಸಿದರು.
ಗ್ರಾಮದ ಯುವ ಧುರೀಣ ಪೃಥ್ವಿ ರಮೇಶ ಕತ್ತಿ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡುತ್ತಾ ಸಹಕಾರಿ ಕ್ಷೇತ್ರದಲ್ಲಿ 110 ವರ್ಷ ಪೂರೈಸಿದ ಸಂಸ್ಥೆ ಸದಸ್ಯರಿಗಾಗಿ ಕಡಿಮೆ ದರದಲ್ಲಿ ಗುಣಮಟ್ಟದ ರಸಗೊಬ್ಬರ, ಕೀಟನಾಶಕ, ಬೀಜಗಳು ಹಾಗೂ ಕೃಷಿ ಪರಿಕರಗಳನ್ನು ಒದಗಿಸಲು ಕೃಷಿ ಮಿತ್ರವೆಂಬ ಪ್ರತ್ಯೇಕ ಮಾರಾಟ ಮಳಿಗೆ ಪ್ರಾರಂಭಿಸಿದ್ದು ಶ್ಲಾಘನೀಯ ಕಾರ್ಯವೆಂದರು. ಸಂಘದಲ್ಲಿ 2600 ಸದಸ್ಯರಿದ್ದು ಅವರಿಗೆ ಕಾಲ ಕಾಲಕ್ಕೆ ಬೇಕಾದ ರಸಗೊಬ್ಬರಗಳನ್ನು ಮನೆ ಬಾಗಿಲಿಗೆ ತಲುಪಿಸುವಂತಹ ಕಾರ್ಯದ ಮೂಲಕ ಮೆಚ್ಚುಗೆ ಪಡೆದಿದೆ.ಅದರ ಜೊತೆಗೆ ಇದೀಗ ಈ ಮಾರಾಟ ಮಳಿಗೆ ಪ್ರಾರಂಭಿಸಿ ಶ್ರೇಷ್ಠ ಕಂಪನಿಯ ಪರಿಕರಗಳನ್ನು ರೈತರಿಗೆ ಯೋಗ್ಯದರದಲ್ಲಿ ಪೂರೈಸಲು ಆಡಳಿತ ಮಂಡಳಿ ನಿರ್ಧರಿಸಿರುವುದು ಸಂತಸಕರ, ಆದ್ದರಿಂದ ರೈತ ಸದಸ್ಯರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕೆಲವೊಂದು ರೈತರಿಗೆ ಸಾಮಗ್ರಿಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಹಿರಿಯ ಧುರೀಣರಾದ ಅಪ್ಪಾಸಾಹೇಬ ಖೇಮಲಾಪೂರೆ, ಆರ್.ಟಿ.ಶಿರಾಳಕರ, ಮರೆಪ್ಪಾ ಮುನ್ನೋಳಿ, ಈಶ್ವರ ಇಸ್ಲಾಂಪೂರೆ, ಮಲ್ಲಿಕಾರ್ಜುನ ಬೆಲ್ಲದ, ಗ್ರಾಪಂ ಅಧ್ಯಕ್ಷ ದೀಪಕ ಮುರಗಾಲಿ, ಸಂಘದ ಅಧ್ಯಕ್ಷ ಅಶೋಕ ಬೆಲ್ಲದ, ಉಪಾಧ್ಯಕ್ಷ ಲಗಮಣ್ಣಾ ಮುನ್ನೋಳಿ, ಶ್ರೀಕಾಂತ ಖೇಮಲಾಪೂರೆ,ರಮೇಶ ಮುನ್ನೋಳಿ, ಕಾರ್ಯದರ್ಶಿ ರಾಜಕುಮಾರ ಪರೀಟ ಮೊದಲಾದವರು ಸೇರಿದಂತೆ ಸಂಘದ ನಿರ್ದೇಶಕರು, ಗಣ್ಯರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here