ಜಾತ್ರೆಗಳು ಶ್ರದ್ಧಾ ಭಕ್ತಿಯ ಕೇಂದ್ರವಾಗಬೇಕು; ಶಾಸಕ ಕಾಗೆ

0
19
loading...

ಮೋಳೆ 16: ಅಧುನಿಕತೆ ಹೆಚ್ಚಾದಂತೆ ಜನರಲ್ಲಿ ದೇವರುಗಳ ಮೇಲೆ ಭಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಐನಾಪೂರದಲ್ಲಿ ಯುವಕರೇ ನಿಂತು ಜಾತಿ, ಮತ, ಪಕ್ಷ ಬೇಧ ಮರೆತು 5 ದಿನಗಳವರೆಗೆ ಸಂಸ್ಕಾರ, ಸಂಸ್ಕøತಿಯನ್ನು ಹೊಂದಿದ ಜಾತ್ರೆಯನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಶುಕ್ರವಾರ ದಿ. 15 ರಂದು ಅಥಣಿ ತಾಲೂಕಿನ ಐನಾಪೂರ ಗ್ರಾಮದ ಶ್ರೀ ಸಿದ್ಧೇಶ್ವರ ದೇವರ 46 ನೇ ಜಾತ್ರಾ ಮಹೋತ್ಸವದ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದ ಅವರು ನಮ್ಮ ಪೂರ್ವಜರು ದೇವರು ಮತ್ತು ದೇವಾಲಯಗಳ ಬಗ್ಗೆ ಅಪಾರ ನಂಬಿಕೆ ಇಟ್ಟು ಜಾತ್ರಗಳನ್ನು ಮಾಡುತ್ತಿದ್ದರು. ಆದರೆ ಅದು ಇಂದು ಜಾತ್ರ, ದೇವರುಗಳ ಹೆಸರಿನ ಮೇಲೆ ಬುಟಾಟಿಕೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಸರಕಾರದ ಯಾವುದೇ ಸೌಲಬ್ಯವನ್ನು ಪಡೆಯದೇ 5 ದಿನಗಳವರೆಗೆ ಕರ್ನಾಟಕ ಹಾಗೂ ಗಡಿ ಮಹಾರಾಷ್ಟ್ರದಲ್ಲಿ ಬೃಹತ್ ಪ್ರಮಾನದ ಕೃಷಿ ಪ್ರದರ್ಶನ ನಡೆಸುತ್ತಿರುವು ಶ್ಲಾಘನೀಯವೆಂದರು.
ಸರಕಾರದಿಂದಾಗದ ಕೆಲಸವನ್ನು ರೈತರೇ ಒಂದುಗೂಡಿ ಮಾಡುತ್ತಿರುವ ಕಾರ್ಯ ರಾಜ್ಯಕ್ಕೆ ಮಾದರಿ. ಈ ಜಾತ್ರೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ಕೃಷಿ ಪ್ರದರ್ಶನ ಎರ್ಪಡಿಸಿ ಕೃಷಿ ಉಪಕರಣಗಳು, ವಿವಿಧ ತಳಿಗಳ ಬೆಳೆಗಳು, ಸೇರಿದಂತೆ ಅನೇಕ ರೀತಿಯ ಉಪಯುಕ್ತ ಮಾಹಿತಿಗಳನ್ನು ರೈತರಿಗೆ ನೀಡುತ್ತಿರುವು ಅತ್ಯದ್ಬುತ ಎಂದರು.
ಮಾಜಿ ಜಿಪಂ ಸದಸ್ಯೆ ಪ್ರೇಮಲತಾ ರಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ, ಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಶಿವಗೌಡ ಪಾರಶೆಟ್ಟಿ, ಆದಗೌಡ ಪಾಟೀಲ, ರವೀಂದ್ರ ಗಾಣಿಗೇರ, ಚಿದಾನಂದ ಡೂಗನವರ, ವಿನೋದ ಚಲವಾದಿ, ಜಾತ್ರಾ ಕಮೀಟಿ ಅಧ್ಯಕ್ಷ ಕುಮಾರ ಅಪರಾಜ ಗೋಪಾಲ ಮಾಲಗಾಂವೆ,ಯಶವಂತ ಪಾಟೀಲ, ಜಗದೀಶ ಪಟವರ್ದನ, ಬಾಳು ಮಜ್ಜಗಿ, ಎಂ.ಎಸ್.ಪಾಟೀಲ, ಸುನೀಲ ಪಾಟೀಲ, ಪ್ರಶಾಂತ ಜತ್ತಿ ಆಗಮಿಸಿ ಮಾತನಾಡಿದರು.
ರಾಜೇಂದ್ರ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಜಿ.ಬಾನೆ ಕಾರ್ಯಕ್ರಮ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here