ಜಿ.ಪಂ-ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಸುಣಗಾರ ಕರೆ

0
25
loading...


ವಿಜಯಪುರ, : ಜಿಲ್ಲ್ಲೆಯಲ್ಲಿ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿದಂತೆ ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆಯಲ್ಲಿಯೂ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣಪ್ಪ ಸುಣಗಾರ ಕಾರ್ಯಕರ್ತರಿಗೆ ಕರೆ ನೀಡಿದರು.
ರವಿವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆಗಾಗಿ ಪಕ್ಷದ ತಯಾರಿ ಕುರಿತು ವಿವರಿಸುತ್ತಾ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಸಾಮಾಜಿಕ ಹಿನ್ನೆಲೆ ಹಾಗೂ ಗೆಲ್ಲುವ ಸಾಮಥ್ರ್ಯಗಳನ್ನು ಪರಿಗಣಿಸಲಾಗುವುದು. ಆಯಾ ಬ್ಲಾಕ್ ಮಟ್ಟದ ಅಧ್ಯಕ್ಷರುಗಳು ಅಭ್ಯರ್ಥಿಗಳ ಹೆಸರುಗಳನ್ನು ಡಿ.ಸಿ.ಸಿ. ಗೆ ಸಲ್ಲಿಸಬೇಕು. ಡಿ.ಸಿ.ಸಿ.ಯು ಜಿಲ್ಲಾ ಉಸ್ತುವಾರಿ ಸಚಿವರ, ಆಯಾ ಭಾಗದ ಶಾಸಕರ ಹಾಗೂ ಹಿಂದಿನ ಚುನಾವಣಾ ಅಭ್ಯರ್ಥಿಗಳೊಂದಿಗೆ ಚರ್ಚಿಸಿ 3 ಅಭ್ಯರ್ಥಿಗಳ ಹೆಸರುಗಳನ್ನು ಕೆಪಿಸಿಸಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಖಜಾಂಚಿ ವಿಜಯಕುಮಾರ ಘಾಟಗೆ, ಅಂಘ ಘಟಕದ ಅಧ್ಯಕ್ಷರುಗಳಾದ ಮಹಾದೇವಿ ಗೋಕಾಕ, ಜ್ಯೋತಿರಾಮ ಪವಾರ, ಬ್ಲಾಕ್ ಅಧ್ಯಕ್ಷರುಗಳಾದ ಅಬ್ದುಲಗಫೂರ ಮಕಾನದಾರ, ಇಲಿಯಾಸ ಬೋರಾಮಣಿ, ಪ್ರಧಾನ ಕಾರ್ಯದರ್ಶಿಗಳಾದ ಸೈಯ್ಯದ ಅಫ್ತಾಬ ಖಾದ್ರಿ, ಐ.ಎಂ. ಇಂಡೀಕರ, ಪರ್ವೆಜ ಚಟ್ಟರಕಿ, ಎಂ.ಎಸ್. ನಾಯಕ, ಸುಭಾಸ ತಳಕೇರಿ ರವರು ಮಾತನಾಡಿ, ಮುಂಬರುವ ಜಿ.ಪಂ. & ತಾ.ಪಂ. ಚುನಾವಣೆಯಲ್ಲಿ ಪಕ್ಷದ ನಿಜವಾದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ವಿಶ್ವನಾಥ ಮಠ, ದಾನಮ್ಮಗೌಡತಿ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ರಮೇಶ ಬಂಟನೂರ, ಕಾರ್ಯದರ್ಶಿಗಳಾದ ಈರಪ್ಪ ಜಕ್ಕಣ್ಣವರ, ಸೋಮನಾಥ ಕಳ್ಳಿಮನಿ, ಚನಬಸಪ್ಪ ನಂದರಗಿ, ಮೋಹನ ಎಸ್. ಬಡಿಗೇರ, ಆರ್.ಆರ್. ಹಂಚಿನಾಳ, ಬಿ.ಎಸ್. ಬ್ಯಾಳಿ, ಸಾಹೇಬಗೌಡ ಬಿರಾದಾರ, ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಬ್ಲಾಕ್ ಅಧ್ಯಕ್ಷರುಗಳಾದ ತಮ್ಮಣ್ಣ ಹಂಗರಗಿ, ದೇಸು ಚವ್ಹಾಣ, ಎಂ.ಬಿ. ಹಯ್ಯಾಳ, ಕಲ್ಲನಗೌಡ ಬಿರಾದಾರ, ಭಾರತಿ ನಾವಿ, ರವಿಗೌಡ ಪಾಟೀಲ, ಸಂದೀಪ ಪಾಟೀಲ, ಗುರಪ್ಪ ಯಂಕಂಚಿ, ಸಿದ್ದನಗೌಡ ಪಾಟೀಲ, ಅಂಗಘಟಕಗಳ ಅಧ್ಯಕ್ಷರಾದ ಅಬ್ದುಲಖಾದಿರ ಖಾದಿಮ, ಲಾಲಅಹ್ಮದ ಶೇಖ, ಸುರೇಶಗೌಡ ಪಾಟೀಲ, ಶಕೀಲ ಬಾಗಮಾರೆ, ಮಂಜುಳಾ ಗಾಯಕವಾಡ, ಭೀಮವ್ವ ಬಿಸನಾಳ, ಆಯೇಶಾ ಬೇಪಾರಿ, ಅಕಬರ ನಾಯಕ, ದಾವಲಸಾಬ ಬಾಗವಾನ, ಪೀರಪ್ಪ ನಡುವಿನಮನಿ, ಎ.ಎಸ್. ಇನಾಮದಾರ, ರಾಜೇಶ್ವರಿ ಚೋಳಕೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here