ಜ. 18 ರಿಂದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ

0
26
loading...


ಧಾರವಾಡ,17: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೈಶುದೀಪ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪೂರ್ವಸಿದ್ಧತಾ ಪರೀಕ್ಷೆ-2016 ರ ಪರೀಕ್ಷೆಯು ಜನೇವರಿ 18 ರಿಂದ 23 ರ ವರೆಗೆ ಜರುಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ವೈಶುದೀಪ ಫೌಂಡೇಶನ್ ವತಿಯಿಂದ ನಡೆಸುವ ಎಸ್‍ಎಸ್‍ಎಲ್‍ಸಿ ಪ್ರೇರಣಾ ಪೂರ್ವ ಸಿದ್ಧತಾ ಪರೀಕ್ಷೆ -2016 ವೇಳಾ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಪದ್ಧತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಹಾಗೂ ಪೂರ್ವಸಿದ್ಧತೆ ಮಾಡಿಕೊಳ್ಳಲು ಈ ಪದ್ದತಿ ಅನುಕೂಲಕರವಾಗಿದೆ. ಜನೇವರಿ 18 ರಂದು ಪ್ರಥಮ ಭಾಷೆ, 19 ರಂದು ವಿಜ್ಞಾನ, 20 ರಂದು ಗಣಿತ, 21 ರಂದು ದ್ವಿತೀಯ ಭಾಷೆ, 22 ರಂದು ಸಮಾಜ ವಿಜ್ಞಾನ, 23 ರಂದು ತೃತೀಯ ಭಾಷೆ ಪರೀಕ್ಷೆಗಳು ಪ್ರತಿದಿನ ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 12-30 ಗಂಟೆವರೆಗೆ ನಡೆಯಲಿವೆ ಎಂದರು.
ತಾಲೂಕಿನಲ್ಲಿ ವೈಯಕ್ತಿಕವಾಗಿ ಇದುವರೆಗೆ 10 ಲಕ್ಷ ರೂ.ಗಳನ್ನು ವೆಚ್ಚ ಮಾಡಿದೆ. ಅದರಂತೆ ನವಲಗುಂದ ತಾಲೂಕಿನಲ್ಲಿ ಶಿಕ್ಷಕರು ಮತ್ತು ಕುಂದಗೋಳ ತಾಲೂಕಿನಲ್ಲಿ ಶಾಸಕರಾದ ಸಿ.ಎಸ್. ಶಿವಳ್ಳಿ ಮತ್ತು ಹುಬ್ಬಳ್ಳಿಯಲ್ಲಿ ರೋಟರಿ ಕ್ಲಬ್‍ನವರು ಹಾಗೂ ಕಲಘಟಗಿಯಲ್ಲಿ ಸಚಿವರಿಂದ ಮಾದರಿ ಪ್ರಶ್ನೆಪತ್ರಿಕೆಗಳ ಮುದ್ರಣ ಮಾಡಿ ಪೂರೈಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಫೌಂಡೇಶನ್‍ದ ವಿನಾಯಕ ಜೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶ ಎಸ್.ಬಿ. ಕೊಡ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here