ಜ: 23 ರಂದು ಕುಣಿಯೋಣ ಮತ್ತು ಹಾಡೋಣ ಬಾರ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ

0
37

ದಾಂಡೇಲಿ : ನಗರದ ಸಾಂಸ್ಕøತಿಕ ಸಂಘಟನೆಯಾದ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ಎರಡನೇ ವರ್ಷದ ಜನಮೆಚ್ಚುಗೆಯ ಕಾರ್ಯಕ್ರಮವಾದ ಹಳಿಯಾಳ-ಜೊಯಿಡಾ ತಾಲೂಕು ಮಟ್ಟದ ಕುಣಿಯೋಣ ಬಾರ ಮತ್ತು ಹಾಡೋಣ ಬಾರ ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಜ:23 ರಂದು ಸಂಜೆ 6 ಘಂಟೆಯಿಂದ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಜರಗಲಿದೆ ಎಂದು ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ತಿಳಿಸಿದ್ದಾರೆ.

ಅವರು ತಮ್ಮ ನಿವಾಸದಲ್ಲಿ ಮಂಗಳವಾರÀ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ನಗರದಲ್ಲಿ ಸಾಂಸ್ಕøತಿಕ ವೈಭವವನ್ನು ಸಾರುತ್ತಿರುವ ಸಹೇಲಿ ಸಹೋದರಿಯರ ಸರ್ವ ಕಾರ್ಯಕ್ರಮಕ್ಕೂ ನಗರದ ಹಾಗೂ ತಾಲೂಕಿನ ಗಣ್ಯ ಮಹನೀಯರು ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ ಎಂದ ಮೀನಾಕ್ಷಿ ಕನ್ಯಾಡಿಯವರು ಕುಣಿಯೋಣ ಮತ್ತು ಹಾಡೋಣ ಬಾರ ಸ್ಪರ್ಧೆಯ ಅಂತಿಮ ಸುತ್ತು ಅಂದರೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಗಣ್ಯರಿಂದ ಗ್ರ್ಯಾಂಡ್ ಫಿನಾಲೆಗೆ ಚಾಲನೆ ನೀಡಲಿದ್ದು, ಆ ದಿನದ ಕಾರ್ಯಕ್ರಮದಲ್ಲಿ ಝೀ ಟಿವಿಯ ಲಿಟಲ್ ಚಾಂಪಿಯನ್ ಸ್ಪರ್ಧೆಯಲ್ಲಿ ಅಚಿತಿಮ ಸುತ್ತಿಗೆ ಪ್ರವೇಶ ಮಾಡಿ ಜಿಲ್ಲೆಗೆ ಕೀರ್ತಿ ತಂದ ಹಳಿಯಾಳದ ಗಣೇಶ ಬೆಳಗಾಂವಕರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರುಗಳನ್ನು ಸನ್ಮಾನಿಸಲಾಗುತ್ತದೆ. ಇದೇ ಕಾರ್ಯಕ್ರಮದಲ್ಲಿ ಸಹೇಲಿ ಸಹೋದರಿಯರು ನೃತ್ಯ ಹಾಗೂ ಸುಂದರ ಕರೋಕೆ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಹೇಲಿ ಸಹೋದರಿಯರ ವರ್ಣರಂಜಿತ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರೋತ್ಸಾಹಿಸಬೇಕೆಂದು ಮೀನಾಕ್ಷಿ ಕನ್ಯಾಡಿಯವರು ವಿನಂತಿಸಿದರು.

ಸುದ್ದಿಗೋಷ್ಟಿಯಲ್ಲಿ ಸಹೇಲಿ ಟ್ರಸ್ಟಿನ ಪದಾಧಿಕಾರಿಗಳಾದ ಕವಿತಾ ಪೂಜಾರ, ವೀಣಾ ಕ್ಷೀರಸಾಗರ, ತೃಪ್ತಿ ಕೊಲೆಕರ, ಶೋಭಾ ಮಿರಾಶಿ, ಮೈತ್ರಾ ಜಿಗಲಿ, ನೀಲಾಂಬಿಕಾ ಕಣಿಮೆಹಳ್ಳಿ, ಶಾರದಾ ಗುಂಡುಪ್ಕರ್, ಗಾಯತ್ರಿ ಬಾನಾವಳಿಕರ, ಮಾಲಿನಿ ನಾಯ್ಡು, ಶೀಲಾ ನಾಯ್ಕ, ಅರ್ಚನಾ ಬಿಹಾತಿ, ಚಿನ್ನಮ್ಮ ಕಣಸೋಗಿ, ಜಯ ನಾಯ್ಕ, ಜ್ಯೋತಿ ಪೈ, ರಮ್ಯಾ ಪಾಟನಕರ, ಸುಧಾ ಶೆಟ್ಟಿ ಮತ್ತು ರೂಪಾ ಹೆಗಡೆ ಉಪಸ್ಥಿತರಿದ್ದರು.

loading...