ಡಾ. ಆರ್. ಸಿ. ಹಿರೇಮಠ ದತ್ತಿ ಕಾರ್ಯಕ್ರಮ

0
49
loading...


ಧಾರವಾಡ,: ವಚನ ಸಾಹಿತ್ಯ ಸಂಶೋಧನ ಕ್ಷೇತ್ರವು ಅವರ ಬಹುದೊಡ್ಡ ಸೃಷ್ಠಿಯಾಗಿದ್ದು, ಅವರು ಬರೆದ ‘ಪ್ರಸ್ತಾವನೆ’ ಬಹಳ ಮಹತ್ವದ್ದಾಗಿದೆ. ಆಗಾಧ ನೆನಪಿನ ಶಕ್ತಿಯಿಂದ ಅಮೆರಿಕೆಯಲ್ಲಿ ಅವರು ಬರೆದ ‘ಆತ್ಮ ಚರಿತ್ರೆ’ ‘ಉರಿ ಬರಲಿ ಸಿರಿ ಬರಲಿ’ ‘ಮಹಾಯಾತ್ರೆಗಳು’ ಒಂದು ದಾಖಲೆಯಾಗಿವೆ ಎಂದು ಸಾಹಿತಿ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ ಡಾ. ಆರ್. ಸಿ. ಹಿರೇಮಠ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಆರ್.ಸಿ. ಹಿರೇಮಠರ ವಿದ್ವತ್ತು, ವ್ಯಕ್ತಿತ್ವ, ಪಾಂಡಿತ್ಯ, ಜ್ಞಾಪಕ ಶಕ್ತಿ, ತಾಳ್ಮೆ, ಗ್ರಂಥ ಸಂಪಾದಕರಾಗಿ ಮಾಡಿದ ಅವರು ಕಾರ್ಯಗಳು ಬಲು ದೊಡ್ಡವಾಗಿವೆ. ಭಾಷಾ ವಿಜ್ಞಾನದ ಮೇರು ವ್ಯಕ್ತಿಯಾಗಿದ್ದ ಅವರನ್ನು ನಾವೀಗ ಮರೆತ್ತಿದ್ದುದು ವಿಷಾದನೀಯ. ವಿದ್ಯೆಯ ಪರ್ವತವಾಗಿದ್ದ ಡಾ. ಆರ್.ಸಿ. ಹಿರೇಮಠರವರ ಸ್ಮಾರಕ ಟ್ರಸ್ಟ್ ರಚನೆಯಾಗಬೇಕು. ಆ ಮೂಲಕ ಸಮಗ್ರ ಸಾಹಿತ್ಯ ಸಂಪುಟ ಹೊರಬರಬೇಕು. ಅವರ ಸಾಹಿತ್ಯದ ಚರ್ಚೆ ನಿರಂತರವಾಗಿ ಸಾಗಬೇಕು ಕೇವಲ ದತ್ತಿ ಕಾರ್ಯಕ್ರಮಗಳಲ್ಲಿ ಮಾತ್ರ ಅವರ ಅಪಾರ ಕಾರ್ಯಗಳನ್ನು ಸ್ಮರಿಸದೇ ಅವರ ಸಾಹಿತ್ಯದ ಚರ್ಚೆ ನಿರಂತರವಾಗಿ ಸಾಗಬೇಕು ಎಂದರು.
ಪ್ರೊ. ಎಚ್. ಎಂ. ಬೀಳಗಿ ಮಾತನಾಡಿ, ಬದುಕು-ಬರಹ’ ಶ್ರೇಷ್ಠ ಪ್ರಾಧ್ಯಾಪಕ, ದಕ್ಷ ಆಡಳಿತಗಾರ, ಖ್ಯಾತ ಸಾಹಿತಿ, ವಿಮರ್ಶಕರಾಗಿದ್ದ ಡಾ. ಆರ್.ಸಿ. ಹಿರೇಮಠರು ಗಂಭೀರ ವ್ಯಕ್ತಿತ್ವದ ವಿದ್ಯೆಯ ಖಣಿಯಾಗಿದ್ದರು. ಕನ್ನಡ, ಇಂಗ್ಲೀಷ, ಸಂಸ್ಕøತ ಭಾಷೆಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಸಾಮಾನ್ಯರಲ್ಲಿ ಅಸಾಮಾನ್ಯರಾಗಿದ್ದರು. ಕ.ವಿ.ವಿ. ಕನ್ನಡ ವಿಭಾಗಕ್ಕೆ ಹೊಸ ಶಕ್ತಿಯಾಗಿ ಬಂದು, ಕನ್ನಡ ಅಧ್ಯಯನ ಪೀಠಕ್ಕೆ ಹೊಸ ಆಯಾಮ ನೀಡಿದರು. ಒಳ್ಳೆಯ ಪ್ರಾಧ್ಯಾಪಕರನ್ನು ತಯಾರು ಮಾಡಿದರು. ಅವರ ಸ್ಮರಣೆ ಸದಾಕಾಲವೂ ಆಗಬೇಕು ಎಂದರು.
ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಕೃಷ್ಣ ಜೋಶಿ ಸ್ವಾಗತಿಸಿದರು. ಡಾ. ಡಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಮೋಹನ ನಾಗಮ್ಮನವರ ವಂದಿಸಿದರು. ಸತೀಶ ತುರಮರಿ ನಿರೂಪಿಸಿದರು

loading...

LEAVE A REPLY

Please enter your comment!
Please enter your name here