ದಕ್ಷಿಣ ಭಾರತದ ವಲಯ ಮಟ್ಟಕ್ಕೆ ಆಯ್ಕೆ

0
15
loading...

ಗುಳೇದಗುಡ್ಡ: ನವದೆಹಲಿಯ ಎನ್.ಸಿ.ಇ.ಆರ್.ಟಿ, ಬೆಂಗಳೂರಿನ ಡಿ.ಎಸ್.ಇ.ಆರ್.ಟಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಡಯಟ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರದಲ್ಲಿ ನೆಡೆದ ರಾಜ್ಯಮಟ್ಟದ ಪ್ರೌಢ ಶಾಲೆಯ ವಿದ್ಯಾರ್ಥಿಗಳ ವಿಜಾÐನ ಮತ್ತು ಗಣಿತ ವಸ್ತು ಪ್ರದರ್ಶನದಲ್ಲಿ ಸ್ಥಳೀಯ ಪಿ.ಇ.ಟಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿರೇಶ ಪೂಜೇರ ಹಾಗೂ ಸಂಗಮೇಶ ವಾಳದಉಂಕಿ ಇವರು ತಯಾರಿಸಿದ ವಿಪತ್ತು ನಿರ್ವಹಣೆ ವಿಜಾÐನ ಮಾದರಿಯು ದಕ್ಷಿಣ ಭಾರತದ ವಲಯ ಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಶಿಕ್ಷಕಿ ಜಿ.ಎಸ್. ನಾಯಕ್ ಅವರನ್ನು ಟ್ರಸ್ಟ್‍ನ ಚೇರಮನ್ ಕಮಲಕಿಶೋರ ಭಂಡಾರಿ, ಕಾರ್ಯದರ್ಶಿ ಜುಗಲಕಿಶೋರ ಭಟ್ಟಡ, ಶಾಲೆಯ ಚೇರಮನ್ನ ಅಶೋಕ ಹೆಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎಮ್. ವಡಗೇರಿ, ಮುಖ್ಯೋಪಾಧ್ಯಾಯ ಬಿ. ವಿ. ಚಿಂದಿ, ವಿ.ಬಿ ಹಳ್ಳೂರ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here