ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಸರಕಾರ ಕಣ್ತೇರೆದು ನೋಡುವುದು ಯಾವಾಗ?

0
16
loading...

ಕಾರವಾರ : ನಗರದ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಕಾರವಾರ ನಗರಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆಯಿಂದ ‘ರಣಾಂಗಣದಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಹೋರಾಡುವ ಯೋಧ’ನಂತಾಗಿದೆ. ಕಾರವಾರ ನಗರಸಭೆಯಲ್ಲಿ ಒಟ್ಟು 419 ಮಂಜೂರಾದ ಹುದ್ದೆಗಳಿವೆ. ಅದರಲ್ಲಿ ಕೇವಲ 229 ಹುದ್ದೆಗಳು ಖಾಲಿಯಿದ್ದು ಅದರಲ್ಲೂ ಕೇವಲ 87 ಸಿಬ್ಬಂದಿಗಳ ನೇರ ನೇಮಕಾತಿ ಹಾಗೂ 12 ಸಿಬ್ಬಂದಿಗಳು ಬಡ್ದಿ ಪಡೆದ ಖಾಯಂ ಸಿಬ್ಬಂದಿಗಳಾಗಿದ್ದಾರೆ.

ಅನ್ಯ ಇಲಾಖೆಯಿಂದ ಒಂದು, ಗುತ್ತಿಗೆ ಮೇಲೆ ಒಂದು ದಿನಗೂಲಿಯ ಮೇಲೆ 3 ಸೇರಿ ಹೊರಗುತ್ತಿಗೆಯ ಆಧಾರದ ಮೇಲೆ 85 ಸಿಬ್ಬಂದಿಗಳ ಸಹಾಯದಿಂದ ನಗರಸಭೆಯ ನಗರದ ನೈರ್ಮಲ್ಯದ ಹೊಣೆಯನ್ನು ನಿಭಾಯಿಸಲು ಪರದಾಡುತ್ತಿದೆ. ನಗರಸಭೆಯ ಪ್ರಮುಖ ಆಧಾರ ಸ್ತಂಬ ಎನಿಸಿಕೋಳ್ಳವ 225 ಪೌರಕಾರ್ಮಿಕ ಹುದ್ದೆಗಳಲ್ಲಿ 99 ಹುದ್ದೆಗಳು ಖಾಲಿ ಇದೆ.
ಅದರಲ್ಲೂ ಕೇವಲ 45 ಖಾಯಂ ಪೌರಕಾರ್ಮಿಕರಿದ್ದು 81 ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಹೆಲ್ಪರ್/ವಾಟರ್ ಸಪ್ಲಾಯ ವಾಲಮನ್‍ಗಳ 50 ಹುದ್ದೆಗಳಲ್ಲಿ ಕೇವಲ ಇಬ್ಬರೇ ಕಾರ್ಯ ನಿರ್ವಹಿಸುತ್ತಿದ್ದು 48 ಹುದ್ದೆಗಳು ಖಾಲಿ ಇದೆ. ಲೊಡರ್ಸ್ 24 ಹುದ್ದೆಗಳಲ್ಲಿ 23 ಖಾಲಿ ಇದ್ದು ಒಬ್ಬರೇ ಮಾತ್ತ ಕಾರ್ಯನಿರ್ವಹಿಸುವಂತಾಗಿದೆ. ವಾಟರ್ ಸಪ್ಲಾಯರ ಆಪರೇಟರ್ 8 ಹುದ್ದೆಗಳಲ್ಲಿ 8 ಹುದ್ದೆಗಳು ಖಾಲಿ ಇದೆ. ಅಸಿಸ್ಟೆಂಟ್ ವಾಟರ್ ಸಪ್ಲಾಯ ಆಪರೇಟರ್ 8 ಹುದ್ದೆಗಳಲ್ಲಿ 7 ಹುದ್ದೆಗಳು ಖಾಲಿಯಿವೆ.
ಅಲ್ಲದೆ ನಗರಸಭೆಯಲ್ಲಿ ಸಹಾಯಕ ಅಭಿಯಂತರರೇ ಇಲ್ಲ, ಹಿರಿಯ ಕಂದಾಯ ನಿರೀಕ್ಷಕರ 2 ಹುದ್ದೆಗಳು ಖಾಲಿ ಇದ್ದು ಒಬ್ಬರಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ. 10 ವಾಹನ ಚಾಲಕ ಸಿಬ್ಬಂದಿಗಳ ಬದಲು ಕೇವಲ 5 ಚಾಲಕರು ಕಾರ್ಯನಿರ್ವಹಿಸುತ್ತಾರೆ. ಲ್ಯಾಬ್ ಟೆಕ್ನಿಷಿಯನ್ ಪ್ಲಬರ್, ಸಿನಿಯರ್ ವಾಲಮನ್, ಕ್ಲಿನರ್, ಗಾರ್ಡನರ್ ಹುದ್ದೆಗೆ ಸಿಬ್ಬಂದಿಗಳೇ ಇಲ್ಲ. 9 ಸೆನೆಟರಿ ಮುಕಾದಮ್ ಹುದ್ದೆಗಳಲ್ಲಿ 6 ಖಾಲಿ ಇz.É
ಒಟ್ಟಾರೆ ನಗರದ ನೈರ್ಮಲ್ಯದ ಹೊಣೆ ಹೊತ್ತಿರುವ ನಗರಸಭೆ ಸಿಬ್ಬಂದಿಗಳ ತೀವ್ರ ಕೊರೆತೆಯಿಂದಾಗಿ ನರಳುವಂತಾಗಿದೆ. ನಗರದಲ್ಲಿ ಎಲ್ಲೆ ಕೊಳಕು, ತ್ಯಾಜ್ಯ ಕಂಡರೆ ನಾಗರಿಕರು ನಗರಸಭೆಯ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಾರೆ. ಆದರೆ ಅತ್ಯಲ್ಪ ಸಿಬ್ಬಂದಿಗಳ ಸಹಾಯದಿಂದ ನಗರದ 31 ವಾರ್ಡ್‍ಗಳ ನೈರ್ಮಲ್ಯ ಕಾಪಾಡುವುದು ವiಹಾದಿವ್ಯವೇ ಸರಿ. ಆದರೆ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ನಗರದ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಅಸಮರ್ಥರಾಗಿದ್ದಾರೆ.
ಇರುವ ಅತ್ಯಲ್ಪ ಸಿಬ್ಬಂದಿಗಳ ಸಹಾಯದಿಂದ ನಗರದ ನೈರ್ಮಲ್ಯ ಕಾಪಾಡಲು ನಗರಸಭೆಯವರು ಹೆಣಗಾಡದ ಪರಿಸ್ಥಿತಿ ನಿರ್ಮಾಣವಾಗದಿದ್ದು ಸ್ವಚ್ಛ ನಗರದ ಎಷ್ಟೆ ಕನಸೂ ಕಂಡರೂ ಅಗತ್ಯ ಸಿಬ್ಬಂದಿಗಳ ನೇಮಕಾತಿ, ಹಾಗೂ ಅವಶ್ಯಕತೆ ಇರುವ ಪರಿಕರಗಳ ಪೂರೈಕೆ ಇಲ್ಲದೇ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವೇ ಎನ್ನುವ ಪ್ರಶ್ನೆ ಇಲ್ಲಿನ ಪ್ರಜ್ಞಾವಂತ ನಾಗರಿಕರದ್ದಾಗಿದೆ.

loading...

LEAVE A REPLY

Please enter your comment!
Please enter your name here