ನನಗೆ ಸಲ್ಲೂವ ಸನ್ಮಾನ ಮತದಾರಿಗೆ ಅರ್ಪಣೆ : ಮಾಮನಿ

0
23
loading...

ಸವದತ್ತಿ 20: ನಾಡಿನ ಸಮಸ್ತ ಪೂಜ್ಯರ ಕೃಪಾಶಿರ್ವಾದ, ತಂದೆಯವರ ಪಾರದರ್ಶಕ ರಾಜಕಾರಣ, ಪಕ್ಷದ ಎಲ್ಲ ಮುಖಂಡರ ನಂಬಿಕೆ ಮತ್ತು ಆಶೀರ್ವಾದ, ತಾಯಿಯ ಆಶೀರ್ವಾದ, ಮಡದಿಯ ಹಾರೈಕೆ, ಹಿತೈಷಿಗಳ ಅಭಿಲಾಷೆ, ಕುಟುಂಬದವರ ಸಹಾಯ, ಕಾರ್ಯಕರ್ತರ ಹುಮ್ಮಸ್ಸಿನ ಪ್ರಯತ್ನ, ಮತದಾರ ಪ್ರಭುಗಳ ವಿಶ್ವಸಾರ್ಹ ಆಯ್ಕೆ ಮತಗಳು ಮತ್ತು ಕಳೆದ ಬಾರಿ ಮಾಡಿದ ಅಭಿವೃದ್ಧಿಯ ಕಾರ್ಯಗಳ ಶ್ರೀರಕ್ಷೆ ಎಲ್ಲವೂಗಳು ನನ್ನ ಎರಡನೇ ಬಾರಿ ಐತಿಹಾಸಿಕ ಗೆಲುವಿಗೆ ಕಾರಣವಾಗಿವೆ. ಇಂದು ನನಗೆ ಸಲ್ಲುತ್ತಿರುವ ಎಲ್ಲ ಸನ್ಮಾನಗಳು ಇವರಿಗೆ ಸಲ್ಲಿಕೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಸ್ಥಳೀಯ ತಾಲೂಕ ಕ್ರೀಡಾಂಗಣದಲ್ಲಿ ಸಿ.ಎಮ್. ಮಾಮನಿ ಚಾರಿಟೇಬಲ್ ಟ್ರಸ್ಟ್ ಮತ್ತು ಮಾಮನಿ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ಆನಂದ ಚಂ. ಮಾಮನಿಯವರ 49 ನೇ ಹುಟ್ಟುಹಬ್ಬದ ಪ್ರಯುಕ್ತ ಕೊಲ್ಲಾಪೂರ ಕಲಾ ತಂಡದವರಿಂದ ಜಾಗೋ ಹಿಂದುಸ್ತಾನಿ ಹಾಗೂ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.
ತಂದೆಯವರ ಮರಣಾ ನಂತರ ಹಲವಾರು ವರ್ಷಗಳ ಬಳಿಕ ರಾಜಕಾರಣಕ್ಕೆ ಆಗಮನ, ಎಲ್ಲರ ಸಹಕಾರದೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆ, ಪಕ್ಷದಲ್ಲಿ ಹಿರಿಯರು ನಾಯಕರಾದ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ, ಜಗದೀಶ ಶೆಟ್ಟರ, ಸುರೇಶ ಅಂಗಡಿ, ಬಾಲಚಂದ್ರ ಜಾರಕಿಹೊಳಿ ಒಳಗೊಂಡು ಎಲ್ಲ ನಾಯಕರ ಸಹಕಾರ ಮತ್ತು ನಂಬಿಕೆ ಕುಟುಂಬದವರ ಸ್ಪೂರ್ತಿ ಪರಸಗಡ ಕ್ಷೇತ್ರದ ಅಭ್ಯರ್ಥಿಯಾಗಿ ಎರಡನೇ ಬಾರಿ ಸ್ಪರ್ದಿಸಿದೆ.
ಪೂಜ್ಯರ ಆಶೀರ್ವಾದ, ತಾಲೂಕಿನಾದ್ಯಂತ ಮಾಡಿದ ಹಲವಾರು ಕೋಟಿಗಳ ಅಭಿವೃದ್ಧಿ ಕಾರ್ಯಗಳು ಮತದಾರ ಪ್ರಭುಗಳ ನಂಬಿಕೆಗೆ ಪಾತ್ರವಾಗಿ ಅವರು ನೀಡಿದ 16500 ಕ್ಕೂ ಹೆಚ್ಚಿನ ಅಂತರದ ಮತಗಳು ಕ್ಷೇತ್ರದಲ್ಲಿ ಎರಡನೇ ಬಾರಿ ವಿಜಯವನ್ನು ಸಾಧಿಸಿ ಇತಿಹಾಸ ನಿರ್ಮಿಸಲು ಕಾರಣವಾಯಿತು.
ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲ ಬ್ಯಾಂಕಗಳ ಅಧ್ಯಕ್ಷರುಗಳ ನಂಬಿಕೆ ಮತಗಳು ನನ್ನನ್ನು ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕನಾಗಿ ಆಯ್ಕೆಯಾಗಲು ಕಾರಣವಾದವು. ತಾಲೂಕಿನ ವ್ಯಾಪ್ತಿಯ ಎಲ್ಲ ಸಹಕಾರಿ ಕ್ಷೇತ್ರಗಳ ಬ್ಯಾಂಕಗಳಿಗೆ ಶೂನ್ಯ ದರದ ಬಡ್ಡಿ ಸಾಲವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.
ಎರಡನೇ ಬಾರಿ ಶಾಸಕನಾಗಲು ಮತ್ತು ಸಹಕಾರಿ ಬ್ಯಾಂಕ ಚುನಾವಣೆಯಲ್ಲಿ ಜಯಗಳಿಸಲು ಕಾರಣರಾದ ಎಲ್ಲ ಮತದಾರರಿಗೂ ನಾನು ಚಿರಋಣಿಯಾಗಿದ್ದೆನೆ. ನನಗೆ ಸಲ್ಲುವ ಎಲ್ಲ ಸನ್ಮಾನಗಳು ನನ್ನ ಮತದಾರ ಪ್ರಭುಗಳಿಗೆ ಎಂದು ಹೇಳಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನನ್ನಿಂದ ನೇರವೇರಲು ತಾಯಿ ರೇಣುಕಾ ಮಾತೆ ಶಕ್ತಿ ನೀಡಲಿ, ಮತ್ತು ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.
ಈ ವೇಳೆ ಗಂಗಮ್ಮತಾಯಿ ಚಂ. ಮಾಮನಿ, ರತ್ನಾ ಆನಂದ ಮಾಮನಿ, ಉಪಾಧ್ಯಕ್ಷ ಸುಭಾಸÀಸಿಂಗ್ ರಜಪೂತ, ಜಗದೀಶ ಶಿಂತ್ರಿ, ಶಂಕರಗೌಡ ಪಾಟೀಲ, ಸಹದೇವ ಯರಗೊಪ್ಪ, ಬಸವರಾಜ ಕಾರದಗಿ, ರಾಜಶೇಖರ ಕಾರದಗಿ, ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಹೂಗಾರ, ಚನ್ನಪ್ಪ ಹೂಗಾರ, ಪುರಸಭೆ, ತಾಲೂಕ ಪಂಚಾಯತ ಸದಸ್ಯರು, ಮಾಮನಿ ಅಭಿಮಾನಿ ಬಳಗ, ಹಿತೈಷಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here