ನಾಳೆ ಅಂಬಿಗರ ಚೌಡಯ್ಯ ಜಯಂತೋತ್ಸವ

0
20
loading...

ಗೋಕಾಕ 20: ನಿಜ ಶರಣ ಅಂಬಿಗರ ಚೌಡಯ್ಯನವರ 856ನೇ ಜಯಂತೋತ್ಸವ ಕಾರ್ಯಕ್ರಮ ದಿ.21 ರಂದು ನಗರದ ಅಂಬಿಗರಗಲ್ಲಿಯ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಲಿದೆ.
ಮುಂಜಾನೆ 9ಗಂಟೆಗೆ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆಯೊಂದಿಗೆ 10 ಗಂಟೆಗೆ ಹೊಸ ಪೇಠಗಲ್ಲಿಯ ವಿಠ್ಠಲ ಮಂದಿರದಿಂದ ಅಂಬಿಗರ ಗಲ್ಲಿಯ ಗಂಗಾ ಪರಮೇಶ್ವರಿ ದೇವಸ್ಥಾನದ ವರೆಗೆ ಮೇರವಣಿಗೆ, ಘಟಪ್ರಭಾ ನದಿಯಲ್ಲಿ ತೇಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಸದ್ಗುರು ಚಂದ್ರಶೇಖರ ಮಹಾರಾಜರು ವಹಿಸಲಿದ್ದು, ಅಧ್ಯಕ್ಷತೆಯನ್ನು ಗಂಗಾಮತ ಸಮಾಜ ತಾಲೂಕಾ ಅಧ್ಯಕ್ಷ ಎಮ್ ಎಲ್ ತಳವಾರ, ಉದ್ಘಾಟನೆಯನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೆರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಮುಖಂಡ ಅಶೋಕ ಪೂಜಾರಿ, ಖ್ಯಾತ ಉದ್ಯಮಿ ಲಖನ ಜಾರಕಿಹೊಳಿ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ ಎಂದು ಗಂಗಾಮತ ಸಮಾಜದ ಮುಖಂಡರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here