ನಾಳೆ ಲಿಂಗರಾಜರ 155ನೇ ಜಯಂತಿ

0
49
loading...

ನಿಪ್ಪಾಣಿ 9: ಕೆ.ಎಲ್.ಇ.ಸಂಸ್ಥೆಯ ಸ್ಥಳೀಯ ಅಂಗಸಂಸ್ಥೆಗಳ ಆಶ್ರಯದಲ್ಲಿ ರವಿವಾರ ಜ. 10 ರಂದು ತ್ಯಾಗವೀರ ಶಿರಸಂಗಿ ಲಿಂಗರಾಜರ 155ನೇ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ.
ಮುಂಜಾನೆ 11-30ಕ್ಕೆ ಸಮಾರಂಭ ಜರುಗಲಿದ್ದು ಸಾಹಿತಿ ಗುರುಪಾದ ಮರೆಗುದ್ದಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶಶಿಕಾಂv ಬಾಗೇವಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂಧರ್ಬದಲ್ಲಿ ಕೆ.ಎಲ್.ಇ.ಸಂಸ್ಥೆಯ ಬೆಳಗಾವಿಯ ಜವಾಹರಲಾಲ ವೈದ್ಯಕಿಯ ಮಹಾವಿದ್ಯಾಲಯಕ್ಕೆ ಮರಣದ ನಂತರ ತಮ್ಮ ದೇಹ ದಾನ ಮಾಡುವ ವಾಗ್ದಾನ ಮಾಡಿರುವ ಮಾಧವಿ ರಾಜಶೇಖರ ಶಿಂತ್ರೆ, ನಿವೃತ್ತಿ ರಾವುತ್, ಅನಿಲ ಬಸವಣ್ಣೆಪ್ಪ ನರಕೆ, sಸ್ಮಿತಾ ಅನೀಲ ನರಕೆ, ಅರುಣಾ ಬಾಬುರಾವ ಭೊಪಲೆ, ವಿಜಯಕುಮಾರ ಬಾಬುರಾವ ಭೋಪಳೆ, ಬಾಬುರಾವ ನಿರಂಜನ ಭೋಪಳೆ, ನಂದಕುಮಾರ ವೀರಭದ್ರ ಭೋಪಳೆ, ರಾಜೇಂದ್ರ ಬಾಬುರಾವ ಭೋಪಳೆ,ರಾಜಶೇಖರ ಈಶ್ವರ ಶಿಂತ್ರೆ, ಬಾಬಾಸಾಹೇಬ ಮಹಾಲಿಂಗ ಉಪಾಶೆ, ಶಿವರಾಜ ಈಶ್ವರ ಶಿಂತ್ರೆ, ವರ್ಷಾ ನಂದಕುಮಾರ ಭೋಪಳೆ, ಸಂಜಯ ಈಶ್ವರ ಶಿಂತ್ರೆ, ಅವರುಗಳನ್ನು ಸತ್ಕರಿಸಲಾಗುವದು. ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ಸಮುದಾಯ ಸೇವಾ ಘಟಕ ಸಾರ್ವಜನಿಕ ತಿಳುವಳಿಕೆ ಮಾಡುವ ಮೂಲಕ ಈ ದಾನಿಗಳಲ್ಲಿ ಅರಿವು ಮೂಡಿಸಿರುವದನ್ನು ಇಲ್ಲಿ ಸ್ಮರಿಸಬಹುದು.

loading...

LEAVE A REPLY

Please enter your comment!
Please enter your name here