27 ರಂದು ಶಾಲಾ ವಾರ್ಷಿಕೋತ್ಸವ

0
21
loading...

ಮೂಡಲಗಿ 25: ನಗರದ ಶ್ರೀ ಲಕ್ಷ್ಮಣ ವಾಯ್ ಅಡಿಹುಡಿ ಕನ್ನಡ ಪ್ರಾಥಮಿಕ ಶಾಲೆಯ ನಾಲ್ಕನೇ ವಾರ್ಷಿಕೋತ್ಸವ, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವ, ಶ್ರೀ ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸ್ಕೂಲಿನ 8ನೇ ವಾರ್ಷಿಕೋತ್ಸವ ಸಮಾರಂಭವು ಬುಧವಾರ ದಿ:27-01-2016 ರಂದು ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಯವಾದಿ ಲಕ್ಷ್ಮಣ ವಾಯ್ ಅಡಿಹುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಅರಬಾಂವಿ ಬ್ಲಾಕ್ ಬಿ.ಜೆ.ಪಿ ಅಧ್ಯಕ್ಷ ನಿಂಗಪ್ಪಾ ಪೀರೋಜಿ, ಎಸ್.ಎಸ್.ಆರ್ ಪಿ.ಯು ಕಾಲೇಜಿನ ನಿವೃತ್ತ ಎಪ್.ಡಿ.ಸಿ. ಶಿವರಾಯ ಕಂಕಣವಾಡಿ, ಅಧ್ಯಕ್ಷತೆಯನ್ನು ಮಾಜಿ ಎಲ್.ಎಸ್.ಎಮ್.ಪಿ ಸೋಸಾಯಟಿಯ ಅಧ್ಯಕ್ಷರಾದ ಬಿ.ಬಿ.ಹಂದಿಗುಂದ, ಅದ್ಯಕ್ಷತೆ ವಹಿಸುವವರು
ಮೂಡಲಗಿ ಪ್ರೇಸ್ ಕ್ಲಬ್ ಅದ್ಯಕ್ಷರಾದ ವಿ.ಎಚ್.ಬಾಲರೆಡ್ಡಿ, ನಾಗಲಿಂಗೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಶಿಬಬಸು ಹಂದಿಗುಂದ, ಬಿ.ಆರ್.ಸಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಲ್.ಆಯ್.ಕೊಳವಿ, ಎಮ್.ಕೆ.ಕಿತ್ತೂರ, ಎಸ್.ಎಚ್.ಯಡ್ರಾಂವಿ, ಪತ್ರಕರ್ತರಾದ ಶಿವಾನಂದ ಮುಧೋಳ, ಜಾನಪದ ಕಲಾವಿದರಾದ ಶಬ್ಬಿರ ಡಾಂಗೆ, ಗಣ್ಯರಾದ ಯಲ್ಲಪ್ಪಾ ಬೆಳಗಲಿ, ಈಶ್ವರ ಕಂಕಣವಾಡಿ, ಹನಮಂತ ಕಂಕಣವಾಡಿ, ಅಜ್ಜಪ್ಪಾ ಕಂಕಣವಾಡಿ, ರಮೇಶ ಒಂಟಗೂಡಿ, ಸುಭಾಸ ಕುರಣಿ, ಮಹಾದೇವ ಮಲಗೌಡರ, ಈರಣ್ಣಾ ಕಾಳಪ್ಪಗೋಳ, ಶಿವಬಸು ಮಾಲೋಜಿ, ಶಿವಪ್ಪಾ ಜೋಡಟ್ಟಿ, ಭೀಮಪ್ಪಾ ಗಡಾದ. ಎ.ಜಿ.ಗೀರೆನ್ನವರ, ಕರಿಬಸವರಾಜ.ಟಿ ಆಗಮಿಸುವರು.
ನಂತರ ಸಂಜೆ 5 ರಿಂದ ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳಾದ ನಾಟಕ, ಜಾನಪದ ಗೀತೆ, ನೃತ್ಯ, ಹಾಸ್ಯ, ಭರತನಾಟ್ಯ, ಮಕ್ಕಳ ಕಾರ್ಯಕ್ರಮವನ್ನು ನೋಡಲು ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೊರಿದ್ದಾರೆ.

loading...

LEAVE A REPLY

Please enter your comment!
Please enter your name here