‘ನೀರು ತನ್ನಿ-ನೀರು ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಾಥಾನ್‍ಗೆ ಚಾಲನೆ

0
38
loading...


ಧಾರವಾಡ,17: ಜೀವಜಲದ ರಕ್ಷಣೆ ಇಂದು ಅತಿ ಪ್ರಾಮುಖ್ಯತೆ ಪಡೆದಿದ್ದು ನೀರು ಪೋಲು ಮಾಡದಂತೆ ಎಲ್ಲರೂ ನಿಗಾವಹಿಸಬೇಕು ಜೊತೆಗೆ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.
‘ನೀರು ತನ್ನಿ-ನೀರು ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಮ್ಯಾರಾಥಾನ್‍ಗೆ ಚಾಲನೆ ನೀಡಿ ಮಾತನಾಡಿ, ಮನುಷ್ಯನಿಗೆ ಅಗತ್ಯವಿರುವ ನೀರು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಬೇಕು. ಸಮರ್ಥ ಸುವರ್ಣ ವತಿಯಿಂದ ಇರ್ಫಾನ್‍ಖಾನ್ ಜಾಗೀರದಾರ ಮತ್ತು ಸಚಿನ ನಿಂಗೂರ ಏರ್ಪಡಿಸಿದ ಈ ಮ್ಯಾರಾಥಾನ್ ಎಲ್ಲರಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿ, ಸಧ್ಯ ಇರುವ ಜಲವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ ನೀರನ್ನು ಉತ್ಪತ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಅವಶ್ಯಕ್ಕಿಂತ ಹೆಚ್ಚು ನೀರು ಬಳಸದಿರಲು ತೀರ್ಮಾನಿಸಬೇಕು ಎಂದರು.
ಪಾಲಿಕೆ ಸದಸ್ಯ ರಾಜು ಅಂಬೋರೆ, ಡಾ.ಕೆ.ಗೋಪಿನಾಥ, ಹರೀಶ ಗಾಯಕವಾಡ, ಶ್ರೀ ಬಸವರಾಜ ದೇವರು, ಶಂಕ್ರಪ್ಪ ಅಂಬಲಿ, ಲಕ್ಷ್ಮಣ ಬಕ್ಕಾಯಿ, ಸಲೀಮ ಸಂಗನಮಲ್ಲ ಉಪಸ್ಥಿತರಿದ್ದರು. ಕೆಸಿಡಿ ಮೈದಾನದಿಂದ ಆರಂಭಗೊಂಡ ಮ್ಯಾರಾಥಾನ್‍ನಲ್ಲಿ ನೂರಾರು ಜನರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here