ಪದವೀಧರರ ಸಮಸ್ಯೆ ಹಾಗೂ ಸಂವಾದ ಮತ್ತು ಕಾರ್ಯ ಚಟುವಟಿಕೆ ಕಾರ್ಯಕ್ರಮ

0
32
loading...


ಧಾರವಾಡ,: ಮುಂಬರುವ ದಿನಗಳಲ್ಲಿ ತರಗತಿ 1 ರಿಂದ 5, 6 ರಿಂದ 8, ಮತ್ತು 9 ರಿಂದ 12 ರವರೆಗೆ ಕಲಿಸುವ ಈ ಮೂರು ವಿಧ ಪದ್ಧತಿ ಕಲಿಕಾ ಕ್ರಮಗಳು ಆರಂಭವಾದಾಗ, ಪದವಿ ಪಡೆದ ಪದೋನ್ನತ ಹೊಂದಿದ ಶಿಕ್ಷಕರಿಗೆ ಸಂಘದ ಮೂಲಕ ಅನುಕೂಲತೆ ಮಾಡಿಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ರಾಜ್ಯ ಸರಕಾರಿ ನೌಕರರ ಭವನದಲ್ಲಿ ಜಿಲ್ಲಾ ಪದವೀಧರರ ವೇದಿಕೆ ವತಿಯಿಂದ ಏರ್ಪಡಿಸಿದ ಪದವೀಧರರ ಸಮಸ್ಯೆ ಹಾಗೂ ಸಂವಾದ ಮತ್ತು ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರ ಬೇಡಿಕೆಯನ್ನು ಈಡೇರಿಸಲು ಬದ್ದರಾಗಿದ್ದೇವೆ. ಶಿಕ್ಷಕರ ಸೇವಾಭದ್ರತೆಯನ್ನು ಗಟ್ಟಿಗೊಳಿಸುವುದಕ್ಕಾಗಿ ನಮ್ಮ ಶಿಕ್ಷಕ ಸಂಘವು ಶ್ರಮಿಸಲಿದೆ ಎಂದರು.
ಬೆಳಗಾವಿ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಜಯಕುಮಾರ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಒಗ್ಗಟ್ಟು ಮುಖ್ಯ. ಒಗ್ಗಟ್ಟಿದ್ದರೆ ಮಾತ್ರ ನಮ್ಮ ಬೇಕು ಬೇಡಿಕೆಗಳು ಈಡೇರಿಸಲು ಸಾಧ್ಯ. ಅಲ್ಲದೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಧಾನ ಪರಿಷತ್ ಚಟುವಟಿಕೆಗಳಲ್ಲಿ ಮತ ಹಾಕುವ ಮಾತ್ರ ಸ್ಪರ್ಧಿಸುವ ಅವಕಾಶಕ್ಕಾಗಿ ಪ್ರಯತ್ನ ಮಾಡಲಾಗುವುದು ಎಂದರು.
ವಿ.ಪಿ.ಚುಳಕಿ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರರ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಕಾಲ ಬದಲಾದಂತೆ ಇಂದು ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಗುಣಾತ್ಮಕ ಶಿಕ್ಷಣದ ಪ್ರಗತಿ ಆಗಿದೆ. ಪದವೀಧರ ಶಿಕ್ಷಕರ ಸಮಸ್ಯೆಗಳ ಕುರಿತು ಸಂಘ ಪೂರಕವಾಗಿ ಸ್ಪಂದಿಸಲಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ವಾಯ್.ಎಚ್.ಬಣವಿ ಪ್ರಧಾನ ಕಾರ್ಯದರ್ಶಿ ಗುರು ತಿಗಡಿ, ಪಿ.ಎಂ.ತಟ್ಟಿಮನಿ, ಕಾಂಚನಾ ರಾಯಕರ, ಪ್ರೇಮಾ ಆರಟ್ಟಿ, ಘೋಡಕೆ, ಎಸ್.ಬಿ.ಕೇಸರಿ, ಲತಾ ಮುಳ್ಳೂರ, ಆರ್.ಎಂ.ಹೊನ್ನಪ್ಪನವರ, ಎಂ.ಜಿ.ಖುದ್ದುನವರ, ಎಲ್.ಪಿ.ಹೊಸಮನಿ, ಎನ್.ಎಚ್.ಜಂಗಳಿ, ಎಂ.ಎಸ್.ದೇಸಾಯಿ, ಎ.ಆರ್.ಅಕ್ಕಿ, ಎಸ್.ಎನ್.ಅರಳಿಕಟ್ಟಿ, ಜಿ.ಎಲ್.ಸತ್ತಣ್ಣವರ, ಎನ್.ಟಿ.ಮುಲ್ಲಾ, ಬೊಮ್ಮನಹಳ್ಳಿ, ಎಲ್.ಆಯ್.ಲಕ್ಕಮ್ಮನವರ, ಎಸ್.ಎಸ್.ದ್ಯಾವನಕೊಂಡ, ಎಸ್.ಬಿ.ಕಲಭಾವಿ, ರಾಮಚಂದ್ರ ಪತ್ತಾರ, ಅಜಿತ ದೇಸಾಯಿ, ರಾವಣ ಮೂಲಗಿ ಪಾಲ್ಗೊಂಡಿದ್ದರು. ಶಕುಂತಲಾ ನವಲಗುಂದ ಪ್ರಾರ್ಥಿಸಿದರು. ಕೆ.ಎಂ.ಗೆದಗೇರಿ ನಿರೂಪಿಸಿದರು. ಖಾನಬಿ ಬಡೇಖಾನ ಸ್ವಾಗತಿಸಿದರು. ಶಾಂತಾ ಶೀಲವಂತ ವಂದಿಸಿದರು.

loading...

LEAVE A REPLY

Please enter your comment!
Please enter your name here