ಪರಸ್ಪರರು ಪ್ರೀತಿ ವಿಶ್ವಾಸದಿಂದ ಬಾಳಬೇಕು: ಬಂಡಿಗಣಿ ಶ್ರೀ

0
59
loading...

Bandigani Shri
ಜಮಖಂಡಿ: ಭಗವಂತನನ್ನು ಅಖಂಡ ನಾಮಸ್ಮರಣೆಯಿಂದ ಪೂಜಿಸಿದರೆ ಬಂದ ಕಷ್ಟಗಳೆಲ್ಲ ದೂರವಾಗುವವು. ಮಾನವರೆಲ್ಲರೂ ಆಧ್ಯಾತ್ಮದ ಕಡೆಗೆ ವಾಲಿದರೆ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಬಹುದು ಎಂದು ಕ್ಷೇತ್ರ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ಹೇಳಿದರು.
ಅವರು ಸಮೀಪದ ಸುಕ್ಷೇತ್ರ ಕಲಹಳ್ಳಿಯ ಶ್ರೀವೇಂಕಟೇಶ್ವರ ದೇವಸ್ಥಾನದಲ್ಲಿ ನೂತನ ವರ್ಷಾಚರಣೆ ನಿಮಿತ್ಯ ಜರುಗಿದ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆದು ಮೂಡನಂಬಿಕೆ ಹಾಗೂ ಕಂದಾಚಾರಗಳಿಗೆ ಬಲಿಯಾಗದೇ ಗುರುವಿನ ಮಾರ್ಗದರ್ಶನದಲ್ಲಿ ನಿತ್ಯ ಹರಿನಾಮ ಸ್ಮರಣೆ ಮಾಡಿ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು. ಸರ್ವರೂ ದಾನ-ಧರ್ಮವನ್ನು ಬಿಡಬಾರದು ಎಂದರು.
ಪರಸ್ಪರರು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಹೆಣ್ಣು-ಹೊನ್ನು-ಮಣ್ಣಿಗೆ ಆಸೆ ಪಡದೇ ಸದಾಕಾಲ ಭಗವಂತನ ಚಿಂತನೆಯಲ್ಲಿ ಮಗ್ನರಾಗಬೇಕು. ಅಂದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ಮೂಡುತ್ತದೆ ಎಂದರು.
ನಿವೃತ್ತ ಶಿಕ್ಷಕ ಕಾಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಗಮಿಸಿದ ಬಂಡಿಗಣಿ ಮಠದ ಭಕ್ತರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸುಮಂಗಲಾತಾಯಿ ಪಾಟೀಲ, ಪರಪ್ಪ ಪಾಲಬಾಂವಿ, ಶಿವು ಟಕ್ಕಳಕಿ, ಗುರುಲಿಂಗ ಮಹೇಷವಾಡಗಿ, ಚನ್ನಪ್ಪ ವಾಲಿಮರದ, ಶಂಕರ ಪೂಜಾರಿ, ಕಲ್ಯಾಣಕುಮಾರ ಇಟ್ಟಿ, ಕಲ್ಲಪ್ಪ ಇಟ್ಟಿ, ಪರುಶರಾಮ ಮರೆಗುದ್ದಿ, ಮುರುಗೆಪ್ಪ ಮಾಲಗಾರ, ಬಸವರಾಜ ವಜ್ಜರಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here