ಪರಿಹಾರ ಹಣ ನೀಡಲು ವಿಫಲ: ಕಂದಾಯ ಉಪವಿಭಾಗ ಕಚೇರಿಯ ಪೀಠೋಪಕರಣ ಜಪ್ತಿ

0
62
loading...

ಬೈಲಹೊಂಗಲ 20: ಪುನರ್ವಸತಿ ಕಲ್ಪಿಸಲು ವಶಪಡಿಸಿಕೊಂಡ ರೈತರ ಭೂಮಿಗೆ, ನ್ಯಾಯಾಲಯದ ಆದೇಶದಂತೆ ಪರಿಹಾರ ಕೊಡಲು ವಿಫಲವಾದ ಕಂದಾಯ ಉಪವಿಭಾಗ ಕಚೇರಿಯ (ಎಸಿ)ಪೀಠೋಪಕರಣ, ಅಪಘಾತದ ಪರಿಹಾರ ಹಣ ಸಂದಾಯ ಮಾಡಲು ವಿಫಲವಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಾಹನವನ್ನು ನ್ಯಾಯಾಲಯ ಜಪ್ತಿ ಮಾಡಿದ ಘಟನೆಗಳು ನಡೆದಿವೆ.

ಅರ್ಜಿದಾರ ನ್ಯಾಯವಾದಿ ಎಸ್.ಆರ್.ಅಂಗಡಿ, ನ್ಯಾಯಾಲಯದ ಬೇಲಿಪರಾದ ಎಸ್.ಬಿ.ದೊಡ್ಡಸಾವಳಗಿ, ಬಿ.ಎಸ್.ಪಾಟೀಲ, ಎನ್.ಮುರಳೀಧರ ಪರಿಹಾರ ಕೊಡಲು ವಿಫಲವಾದ ಕಂದಾಯ ಉಪವಿಭಾಗ ಕಚೇರಿಯ ಪೀಠೋಪಕರಣ ಕಚೇರಿ ಜಪ್ತಿ ನಡೆಸಿದರು.
ತಾಲೂಕಿನ ನೇಗಿನಹಾಳ, ಕೇಸರಕೊಪ್ಪ ಗ್ರಾಮಗಳು ಮಲಪ್ರಭಾ ಹಿನ್ನಿರಿನಿಂದ ಮುಳಗಡೆ ಆಗಿದ್ದು ಈ ಗ್ರಾಮಗಳ ಜನರ ಪುನರ್ವಸತಿಗಾಗಿ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ರೈತರಿಗೆ ನ್ಯಾಯಾಲಯ ಹೆಚ್ಚಿನ ಪರಿಹಾರ ಹಣ ನೀಡುವಂತೆ ಆದೇಶ ಹೊರಡಿಸಿತ್ತು. ಈ ಹಣ ನೀಡದ ಕಾರಣ ಜಪ್ತಿ ನಡೆದಿದೆ
ವಾಹನ ಜಪ್ತಿ- ಅಪಘಾತದ ಪರಿಹಾರ ಹಣ ಸಂದಾಯ ಮಾಡಲು ವಿಫಲವಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಾಹನವನ್ನು ಸಹ ನ್ಯಾಯಾಲಯ ಜಪ್ತಿ ಸಿದ್ದಪ್ಪ ಶಿದ್ದಯ್ಯನವರ ಅವರಿಗೆ 1,31,000 ರೂ. ಪರಿಹಾರ ಹಣ ಸಂದಾಯ ಮಾಡದಿದ್ದಕ್ಕೆ ಜಪ್ತಿ ಮಾಡಲಾಗಿದೆ.
ಕೂಡಲೇ ಪರಿಹಾರ ಹಣ ತುಂಬದಿದ್ದಲ್ಲಿ ನ್ಯಾಯಾಲಯ ಆದೇಶ ಮೇರೆಗೆ ವಾಹನವನ್ನು ಹರಾಜು ಮಾಡಿ ಪರಿಹಾರ ವಿತರಿಸುವ ಬಗ್ಗೆ ಅರ್ಜಿದಾರರ ಪರ ನ್ಯಾಯವಾದಿ ಎಸ್.ಜಿ.ಬೂದಯ್ಯನವರಮಠ ತಿಳಿಸಿದ್ದಾರೆ.
2012 ರಲ್ಲಿ ಅಧಿಕಾರಿ ಎಸ್.ಎಂ.ಹಂಜಿ ಇದ್ದ ಸಂದರ್ಭದಲ್ಲಿ ಪಟ್ಟಣದ ಬೆಳಗಾವಿ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಾಯಗೊಂಡ ಸಿದ್ದಪ್ಪ ಶಿದ್ದಯ್ಯನವರ ತೀವ್ರ ಗಾಯಗೊಂಡಿದ್ದ. ಈ ವ್ಯಕ್ತಿಗೆ ಪರಿಹಾರ ಹಣ ಸಂದಾಯ ಮಾಡಲು ವಿಫಲವಾಗಿದ್ದರಿಂದ ವಾಹನ ಜಪ್ತಿ ಮಾಡಲಾಗಿದೆ.

loading...

LEAVE A REPLY

Please enter your comment!
Please enter your name here