ಪುಟಫಾತ್ ತಡೆಗೋಡೆ ಕಿತ್ತೋಗಿರುವ ಬ್ಯಾರಿಕೇಡ್ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

0
24
loading...

ಧಾರವಾಡ,17: ವಿಪರೀತ ಟ್ರಾಫಿಕ್ ಇರುವ ಪ್ರದೇಶಗಳನ್ನು ಮಾನವ ರಹಿತ ವಲಯ (ನೋ ಮ್ಯಾನ್ ಝೋನ್) ಎಂದು ಗುರುತಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಾದಚಾರಿಗಳ ಅನುಕೂಲಕ್ಕಾಗಿ ಶಾಶ್ವತ ತಡೆಗೋಡೆಗಳನ್ನು ನಿರ್ಮಿಸಿದೆ. ಆದರೆ, ಕೆಲ ವ್ಯಾಪಾರಸ್ಥರು ಗೋಡೆಗಳಿಗೆ ಕನ್ನ ಕೊರೆದಿರುವುದು ಪಾಲಿಕೆ ಮಾತ್ರ ಕಣ್ಮುಚ್ಚಿಕುಳಿತಿದೆ. ಪಾದಚಾರಿಗಳು ಫುಟ್‍ಪಾತ್ ಮಾರ್ಗದಲ್ಲೇ ಚಲಿಸುವಂತೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಮುಂಜಾಗೃತೆಗಾಗಿ ಶಾಸ್ವತ ತಡೆಗೋಡೆಗಳ ಮೂಲ ಉದ್ದೇಶವಾಗಿದೆ.
ಆದರೆ ಶಾಸ್ವತ ತಡೆಗೋಡೆಗಳಿಂದ ಅವಳಿ ನಗರದ ಹೋಟೆಲ್‍ಗಳು ಪಾನ್ ಶಾಪಗಳು, ಮೊಬೈಲ್ ಸ್ಟೋರ್ಸ್‍ಗಳು, ಬಟ್ಟೆ ಅಂಗಡಿಗಳು ಹಾಗೂ ಬಾರ್ ಮತ್ತು ರೆಸ್ಟೋರೆಂಟ್‍ನ ಮಾಲೀಕರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದರು. ಹೇಗಾದರೂ ಮಾಡಿ ತಡೆಗೋಡೆ ತೆಗೆದು ಹಾಕಬೇಕೆಂದು ನಿರ್ಧರಿಸಿರುವ ವ್ಯಾಪಾರಸ್ಥರು ಸಾರ್ವಜನಿಕರನ್ನು ಸೆಳೆಯುವ ಉದ್ದೇಶದಿಂದ ತಡೆಗೋಡೆಗಳನ್ನು ಎಲ್ಲೆಂದರಲ್ಲಿ ಕತ್ತರಿಸಿ ಹಾಕುತ್ತಿದ್ದಾರೆ.
ಪಾದಚಾರಿ ಮಾರ್ಗಗಳಲ್ಲಿಯೇ ಅನೇಕ ವ್ಯಾಪಾರಸ್ಥರು ತಮ್ಮ ಅಂಗಡಿ ಅಥವಾ ಹೋಟೆಲ್‍ಗಳ ಮುಂದಿರುವ ಶಾಶ್ವತ ತಡೆಗೋಡೆಗಳುನ್ನು ಮುರಿದು ತಮ್ಮ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಸಂಚರಿಸುವುದು ದುಸ್ತರವಾಗುತ್ತಿದ್ದು, ಪುಟ್ಪಾತ್‍ಗಳೇ ಕಣ್ಮರೆಯಾದಂತೆ ಭಾಸವಾಗುತ್ತಿದೆ. ಇನ್ನೊಂದಡೆ ಶಾಸ್ವತ ತಡೆಗೋಡೆಗಳನ್ನು ಮುರಿದಿರುವುದರಿಂದ ಸಾರ್ವಜನಿಕರು ಅನಾಯಾಸವಾಗಿ ನುಗ್ಗಿ ಹೋಗುತ್ತಿರುವ ದೃಷ್ಯ ಸಾಮಾನ್ಯವಾಗಿದೆ.
ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ತಡೆಗೋಡೆಗಳನ್ನು ಕತ್ತರಿಸುವ ಕೆಲಸಕ್ಕೆ ಮುಂದಾಗಿರುವುದು ವಿಪರ್ಯಾಸ. ಪಾಲಿಕೆ ನಿರ್ಮಿಸಿದ ತಡೆಗೋಡೆಗಳಿಂದ ವ್ಯಾಪರದಲ್ಲಿ ನಷ್ಟ ಅನುಭವಿಸುತ್ತಿದ್ದ ವ್ಯಾಪಾರಿಗಳು ಈ ತಂತ್ರವನ್ನು ಅನುಸರಿಸುತ್ತಿದ್ದು, ಅಲ್ಲಲ್ಲಿ ತಡೆಗೋಡೆಗಳನ್ನು ನಾಶಪಡಿಸುತ್ತಿದ್ದಾರೆ. ಪಾದಚಾರಿ ಮಾರ್ಗಗಳಲ್ಲಿನ ತಡೆಗೋಡೆಗಳನ್ನು ವ್ಯಾಪಾರಿಗಳು ಕತ್ತರಿಸಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಏನು ಅರಿಯದಂತೆ ಕೈ ಕಟ್ಟಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ವ್ಯಾಪಾರಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ಮೂಡಿದೆ. ಈ ಬಗ್ಗೆ ತುಟಿ ಬಿಚ್ಚದ ಅಧಿಕಾರಿಗಳು ವ್ಯಾಪಾರಿಗಳು ಏನು ಮಾಡಿದರೂ ತಮಗೇನೂ ಗೊತ್ತೆ ಇಲ್ಲವೇನೋ ಎಂಬಂತೆ ಸುಮ್ಮನೆ ಕುಳಿತಿದ್ದಾರೆ. ಸಾರ್ವಜನಿಕ ಹಣ ಈ ರೀತಿ ಹಗಲು ದರೋಡೆಯಾದರೆ ಎಚ್ಚೆತ್ತುಕೊಳ್ಳುವರು ಯಾರು ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿ ಬರುತ್ತಿದೆ.

loading...

LEAVE A REPLY

Please enter your comment!
Please enter your name here