ಪುಟ್‍ಪಾತಿಗೆ ಬಂದ ಹೆಲ್ಮೆಟ್ ವ್ಯಾಪಾರ

0
26
loading...


ದಾಂಡೇಲಿ : ನಗರದಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯವಾಗತೊಡಗಿದೆ. ದ್ವಿಚಕ್ರ ವಾಹನ ಶೋರೂಂ ಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಹೆಲ್ಮಟ್ ಇಲ್ಲದಿರುವುದರಿಂದ ಇದೀಗ ಪುಟ್‍ಪಾತಿನಲ್ಲಿ ಹೆಲ್ಮೆಟ್ ವ್ಯಾಪಾರ ಬಿರುಸುಗೊಂಡಿದೆ.
ನಗರದ ಪ್ರಮುಖ ರಸ್ತೆಗಳಾದ ಜೆ.ಎನ್.ರಸ್ತೆ, ಸೋಮಾನಿ ವೃತ್ತ, ಲಿಂಕ್ ರಸ್ತೆಗಳಲ್ಲಿ ಪುಟ್‍ಪಾತಿನಲ್ಲಿ ಹೆಲ್ಮೆಟ್ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹೆಲ್ಮೆಟ್ ಖರೀದಿಗಾಗಿ ಗ್ರಾಹಕರು ಮುಗಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಬೀದಿ ಬದಿಗೆ ಬಂದ ಹೆಲ್ಮೆಟ್ ವ್ಯಾಪಾರ ವ್ಯಾಪಾರಿಗಳ ಜೇಬು ತುಂಬಿಸಿಕೊಡುವಲ್ಲಿ ಸಹಕರಿಸುತ್ತಿದೆ.

loading...

LEAVE A REPLY

Please enter your comment!
Please enter your name here