ಪುರುಷರ ಕಬಡ್ಡಿ ಪಂದ್ಯಾವಳಿ

0
22
loading...

ಕಮತಗಿ 04: ಸ್ಥಳೀಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿವಿಯ ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟ ಜಿಲ್ಲಾ ಏಕವಲಯ ಪುರುಷರ ಕಬಡ್ಡಿ ಪಂದ್ಯಾವಳಿ ಜ.5 ಮತ್ತು 6ರಂದು ಜರುಗಲಿವೆ.
ಜ.6ರಂದು ಬೆಳಗ್ಗೆ 10.30ಕ್ಕೆ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಚಾಲನೆ ನೀಡಲಿದ್ದು, ಸಚಿವೆ ಉಮಾಶ್ರೀ ಕ್ರೀಡಾ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮಿಜಿ, ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮಿಜಿ ದಿವ್ಯಸಾನಿದ್ಯ ವಹಿಸಲಿದ್ದು, ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ವಿಜಯಾನಂದ ಕಾಶಪ್ಪನವರ, ಅಂತಾರಾಷ್ಟ್ರೀಯ ಕ್ರೀಡಾಪಟು ಗಂಗೂ ಬಿರಾದಾರ, ವಿವಿಯ ಕ್ರೀಡಾ ನಿರ್ದೇಶಕ ಎಸ್.ಕೆ.ಖಜ್ಜಣ್ಣವರ, ಸಂಘದ ಕಾರ್ಯಾಧ್ಯಕ್ಷ ಡಾ.ಆರ್.ಟಿ.ದೇಶಪಾಂಡೆ, ಮುರಗೇಶ ಕಡ್ಲಿಮಟ್ಟಿ ಮತ್ತಿತರರು ಆಗಮಿಸಲಿದ್ದಾರೆ.
ಜ.6ರಂದು ಬೆಳಗ್ಗೆ 10.30ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಹುಚ್ಚೇಶ್ವರ ಸ್ವಾಮಿಜಿ ಸಾನಿದ್ಯ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಸತಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಉದಪುಡಿ ಬಹುಮಾನ ವಿತರಿಸಲಿದ್ದು, ಸಂಘದ ಆಡಳಿತಾಧಿಕಾರಿ ಆರ್.ಎಸ್.ಲೆಕ್ಕದ, ಹೊಳೆಬಸು ಶೆಟ್ಟರ, ತಾಪಂ ಸದಸ್ಯರಾದ ಯಲ್ಲಪ್ಪ ಆಡಿನ, ಕುಸುಮಾ ಕುಂಬಳಾವತಿ, ಪಪಂ ಅಧ್ಯಕ್ಷೆ ಉಮಾ ವಡ್ಡರ, ಉಪಾಧ್ಯಕ್ಷೆ ಶಿವಗಂಗವ್ವ ಮಡಿಕೇರ, ಮಂಜುನಾಥ ಮಳ್ಳಿ ಮತ್ತಿತರರು ಆಗಮಿಸಲಿದ್ದಾರೆ ಎಂದು ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ, ಕಾಲೇಜಿನ ಪ್ರಾಚಾರ್ಯ ಪಿ.ಎಂ.ಗುರುವಿನಮಠ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here