ಬಾರಕೇರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

0
28
loading...


ಮುಂಡರಗಿ: ರಾಜ್ಯದಲ್ಲಿ ಬಾರಕೇರ, ಅಂಬೀಗೇರ, ಗಂಗಾಮತಸ್ಥ, ಕೋಳಿ, ಸುಣಗಾರ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಬಾರಕೇರ ಸಮುದಾಯದ ವತಿಯಿಂದ ಮಂಗಳವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲೂಕು ಬಾರಕೇರ ಸಮುದಾಯದ ಮುಖಂಡ ಶಿವಾನಂದ ಬಾರಕೇರ ಮಾತನಾಡಿ, ರಾಜ್ಯದಲ್ಲಿ ಬಾರಕೇರ, ಅಂಬೀಗೇರ, ಗಂಗಾಮತಸ್ಥ, ಕೋಳಿ, ಸುಣಗಾರ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ಜನಾಂಗವು ಅತೀ ಹಿಂದುಳಿದ ಸಮಾಜವಾಗಿದೆ. 12 ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆ ಹರಿಕಾರ ಬಸವಣ್ಣನವರ ವಿಚಾರದಾರೆಗೆ ಒಗೊಟ್ಟು ಆಧ್ಯಾತ್ಮಿಕ ರಂಗಕ್ಕೆ ಹಾಗೂ ವಚನ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕೀರ್ತಿ ಅಂಬಿಗೇರ ಸಾಮಾಜಕ್ಕೆ ಸಲ್ಲುತ್ತದೆ. ಅಂಬಿಗೇರ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ನಿತ್ಯ ಶೋಷಣೆಗೊಳುತ್ತಿರುವುದು ವಿಪರ್ಯಾಸ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆ ವಿವಿಧ ನಾಮಧೇಯಗಳಿಂದ ಕರೆಯಲ್ಪಡುವ ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ, ಎಂ.ಎಸ್.ಬಾರಕೇರ, ಎಮ್.ಎನ್.ಬಾರಕೇರ, ಪರಸಪ್ಪ ಬಾರಕೇರ, ಪ್ರಶಾಂತ ಪುರದ, ಅಜ್ಜಪ್ಪ ಸುಣಗಾರ, ಬಸಪ್ಪ ವಾಲಿಕಾರ, ಬಿ.ಎಚ್.ತಿಪ್ಪಾಪೂರ, ಹನುಮಂತಪ್ಪ ಬಾರಕೇರ, ಎನ್.ಆರ್.ಕೊರ್ಲಹಳ್ಳಿ, ಅರುಣ ಬಾರಕೇರ ಸೇರಿದಂತೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here