ಬೆಳ್ಳಟ್ಟಿಯಲ್ಲಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ದೊಡ್ಡಮನಿಯವರಿಂದ ಚಾಲನೆ

0
21
loading...

ಶಿರಹಟ್ಟ : ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬೋರವೆಲ್‍ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗದಂತೆ 2 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೊರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಇಲಾಖೆಯ ಸಂಸದೀಯ ಕಾರ್ಯದರ್ಶಿ ಜಪ್ರೀಯ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಗುರುವಾರ ಜಿಪಂ ಗ್ರಾಮೀಣ ಕುಡಿಯುವ ನೀರು ಯೊಜನೆಯಡಿಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ನದಿ ನೀರು ಶುದ್ಧೀಕರಣ ಘಟಕದಿಂದ ಬೆಳ್ಳಟ್ಟಿ ಗ್ರಾಮಕ್ಕೆ ನೀರು ಪೊರೈಕೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ ಮಾತನಾಡಿ, ಮುಂದುವರೆಯುತ್ತಿರುವ ಬೆಲ್ಳಟ್ಟಿ ಗ್ರಾಮಕ್ಕೆ ಅನೇಕ ಸೌಲಭ್ಯಗಳು ಈಡೇರಲಿದ್ದು, ಅವುಗಳಲ್ಲಿ ಸರ್ಕಾರಿ ಪದವಿ ಕಾಲೇಜ್ ಮಂಜೂರಿಗೆ ಪ್ರಯತ್ನ ನಡೆದಿದೆ ಎಂದರು.

ತಾ.ಪಂ. ಸದಸ್ಯ ತಿಮ್ಮರಡ್ಡಿ ಅಳವಂಡಿ, ಗ್ರಾ.ಪಂ. ಸದಸ್ಯ ತಿಮರಡ್ಡಿ ಮರಡ್ಡಿ, ಮದನಲಾಲ ಭಾಪಣಾ, ಆರ್.ಆರ್.ಗಡ್ಡದೇವರಮಠ, ಶಿವನಗೌಡ ಪಾಟೀಲ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಫಕೀರವ್ವ ಬಾವಳ್ಳಿ, ಉಪಾಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಜಿ.ಪಂ.ಸದಸ್ಯೆ ಕಮಲವ್ವ ಸಜ್ಜನರ, ಶಿರಹಟ್ಟಿ ಪ.ಪಂ.ಅಧ್ಯಕ್ಷ ನಾಗರಾಜ ಲಕ್ಕುಂಡಿ, ಉಪಾಧ್ಯಕ್ಷ ಸಂತೋಷ ಕುರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬುಡನಶಾ ಮಕಾನದಾರ, ವ್ಹಿ.ಆರ್.ಮರಡ್ಡಿ, ಮಲ್ಲೇಶಪ್ಪ ಸಜ್ಜನರ, ತಿಪ್ಪಣ್ಣಾ ಸಂಶಿ, ಗ್ರಾ.ಪಂ.ಸದಸ್ಯರಾದ ಮೋಹನ ಗುತ್ತೆಮ್ಮನವರ, ಮಲ್ಲಮ್ಮ ಬಳಿಗೇರ, ರೇಣುಕಾ ಬಂಡಿವಡ್ಡರ, ನಾಗರತ್ನಾ ಕರಪ್ಪನವರ, ಸುನಂದಾ ಗದ್ದಿ, ಶಿವಾನಂದ ಹರಿಜನ, ಮಂಜಕ್ಕ ಹುಬ್ಬಳ್ಳಿ, ಜಯಶ್ರೀ ತಳವಾರ, ಐ.ಎಂ.ಕರ್ನಾಚಿ, ನ್ಯಾಯವಾದಿ ಎನ್.ಎನ್.ಗೋಕಾವಿ, ರಮೇಶ ಮಲ್ಲಾಡದ, ಶಸಕರ ಆಪ್ತ ಸಹಾಯಕ ಶರಣಪ್ಪ ಕುಬಸದ, ಮಹೇಶ ನಿರ್ವಾಣಶಟ್ಟರ, ಗುತ್ತಿಗೆದಾರ ಎಂ.ಪಿ.ಕಲ್ಮಠ ಮತ್ತಿತರರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here