ಮಕ್ಕಳು ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಳ್ಳಬೇಕು

0
13
loading...

ಗೋಕಾಕ 02: ಇಂದಿನ ಮಕ್ಕಳು ತಮ್ಮಲ್ಲಿ ಬೌದ್ಧಿಕ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವದರ ಜೊತೆಗೆ, ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಂಡು ಆಧ್ಯಾತ್ಮಿಕ ಚಿಂತನೆಗಳನ್ನೂ ರೂಢಿಸಿಕೊಳ್ಳಬೇಕು ಎಂದು ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಯದ ಪ್ರಾಂಶುಪಾಲರಾದ ಶ್ರೀಮತಿ ಸ್ಮಿತಾ ಸುರೇಬಾನಕರ ಅವರು ಹೇಳಿದರು.
ಅವರು, ಇಲ್ಲಿಯ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೆಎಲ್‍ಇ ಶಾಲೆ ತನ್ನ ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಸಮಾಜಮುಖಿಯನ್ನಾಗಿಸುವಲ್ಲಿ ಸಾಕಷ್ಟು ಪರಿಶ್ರಮ ಪಡುತ್ತಿರುವದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್‍ಇ ನಿರ್ದೇಶಕ ಜಯಾನಂದ ಎಂ. ಮುನವಳ್ಳಿ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅನುಪಾ ಕೌಶಿಕ ಅವರು ಶಾಲೆಯ ಪ್ರಗತಿಗೆ ಕಾರಣರಾದ ವಿದ್ಯಾರ್ಥಿಗಳ ಜೊತೆಗೆ ಸಹಕರಿಸುತ್ತಿರುವ ಎಲ್ಲ ಪಾಲಕರುಗಳಿಗೆ ಧನ್ಯವಾದಗಳನ್ನು ಹೇಳಿ ಶಾಲಾ ವಾರ್ಷಿಕ ವರದಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪಡೆದ ಸ್ಕೌಟ ಹಾಗೂ ಗೈಡ್ಸ ವಿದ್ಯಾರ್ಥಿಗಳಾದ ಸುದೀಪವರ್ಧನ ಟಿ. ಅಂಗಡಿ, ಸುಜೀತ ಕೊಟಬಾಗಿ, ಅಭಯ ಮಾಧವ, ಲಕ್ಷ್ಮಣ ಯಡ್ರಾವಿ, ತುಷಾರ ಬೆಲ್ಲದ, ಅಭಿಶೇಕ ಬಿ. ಮರೆಪ್ಪಗೋಳ, ಶರಣ ಪಿ. ಮುಂಗರವಾಡಿ, ಶ್ರೀನಿಧಿ ಎಸ್. ಅಥಣಿ, ಸಂಪದಾ ಎಸ್. ಜಾಧವ, ಸನ್ನಿಧಿ ಪಾಟೀಲ, ಐಶ್ವರ್ಯ ಗುಡ್ಡದಮನಿ, ಅನ್ನಪೂರ್ಣಾ ಕಲಾಲ, ರೋಹಿಣಿ ಕಟ್ಟೀಮನಿ ಹಾಗೂ ಶಾಲೆಯ ಸ್ಕೌಟ ಮಾಸ್ಟರ್ ಪಿ.ವಾಯ್.ಪಾಟೀಲ, ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಹ್ಯಾಂಡಬಾಲ್ ತಂಡ, ಶಾಲೆಯ ಆದರ್ಶ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಶಾಲೆಯ ಪರವಾಗಿ ಸತ್ಕರಿಸಲಾಯಿತು.
ಸಂದರ್ಭದಲ್ಲಿ ಸಿ.ಎಸ್. ಅಂಗಡಿ ಪ್ರೌಢಶಾಲೆಯ ಚೇರಮನ್ ಎಂ.ಡಿ. ಚುನಮರಿ ಇದ್ದರು.

loading...

LEAVE A REPLY

Please enter your comment!
Please enter your name here