ಮತದಾನ ಜಾಗೃತಿ ಮೂಡಿಸುವುದು ಅವಶ್ಯ : ಆಫ್ರೀನ್ ಭಾನು

0
25
loading...

ಹುಕ್ಕೇರಿ 25: ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವುದರ ಜೊತೆಗೆ 18 ವರ್ಷ ವಯಸ್ಸು ಪೂರೈಸಿದ ಯುವ ಜನಾಂಗಕ್ಕೆ ಮತದಾರ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನ ಜಾಗೃತಿ ಕೈಗೊಳ್ಳಬೇಕೆಂದು ತಹಶೀಲ್ದಾರ ಸೈಯಿದಾ ಆಫ್ರೀನ್ ಭಾನು ಬಳ್ಳಾರಿ ನುಡಿದರು.
ಅವರು ಸೋಮವಾರ ಸ್ಥಳೀಯ ತಾ.ಪಂ ಸಭಾಭವನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಎರಡು ಕಡೆ ಮತದಾರರ ಹೆಸರು ನೋಂದಣಿ ಇರುವುದು ಅಪರಾಧವಾಗುತ್ತದೆ. ಆದ್ದರಿಂದ ಅದನ್ನು ಪರಾಮರ್ಶಿ ಅಥವಾ ಜನರಿಗೆ ತಿಳುವಳಿಕೆ ನೀಡಿ, ಕಡಿಮೆ ಮಾಡಿಸಬೇಕು. ಅದೇ ತೆರನಾಗಿ ಮೈತ ಆದವರ ಹೆಸರು ಕಡಿಮೆ ಮಾಡುವುದು. ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು, ನಿಮ್ಮ ಮತ ನಿಮ್ಮ ಹಕ್ಕು ಆಗಿರುವುದರಿಂದ ಯಾವ ಆಸೆ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸುವಂತೆ ಮತದಾರರಲ್ಲಿ ಅರಿವು ಮೂಡಿಸುವುದು ಮೊದಲಾದ ವಿಷಯಗಳ ಕುರಿತು ತಿಳಿಯಲು ಪ್ರತಿವರ್ಷ ಮತದಾರರ ದಿನಾಚರಣೆ ಆಚರಿಸಲಾಗುತ್ತದೆ. ಸನ್ 1950 ಜನವರಿ 25 ರಂದು ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಮತದಾರರ ದಿನಾಚರಣೆಯಾಗಿ ದೇಶಾದ್ಯಂತ ಎಲ್ಲರೂ ಆಚರಿಸುತ್ತಾರೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಳೆದ ಬಾರಿ ಮತದಾರರ ನೋಂದಣಿ ಅಭಿಯಾನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕಿನ 40 ಜನ ಮತಗಟ್ಟೆ ಅಧಿಕಾರಗಳಿಗೆ ಪ್ರಮಾಣ ಪತ್ರ ಹಾಗೂ ಪ್ರತಿಜ್ಞಾ ವಿಧಿ ಮತ್ತು ಹೊಸದಾಗಿ ಮತದಾನ ಹಕ್ಕು ಪಡೆದ ಕೆಲವರಿಗೆ ಗುರುತಿನ ಕಾರ್ಡ್ ವಿತರಿಸಿದರು.
ತಾಲೂಕಿನ ಮತಗಟ್ಟೆ ಹಾಗೂ ಕಂದಾಯ ಅಧಿಕಾರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಬಿರಾದಾರಪಾಟೀಲ,ಜಿ.ಪಂ ಇಂಜನೀಯರಿಂಗ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ಅಜಿತ ಪಾಟೀಲ ಇದ್ದರು.ಜಿ.ಎ.ಕರಗುಪ್ಪಿ ಸ್ವಾಗತಿಸಿ,ನಿರೂಪಿಸಿ,ಎಸ್.ಎಂ.ಮಣಗುತ್ತಿ ವಂದಿಸಿದರು.

loading...

LEAVE A REPLY

Please enter your comment!
Please enter your name here