ಮಮತೆಯ ಮಡಿಲು ಅಶ್ವಿನಿ ಪೇಯಿಂಗ್ ಗೆಸ್ಟಹೌಸ್

0
17
loading...


ಧಾರವಾಡ,17: ಒಂದೂರಿನಿಂದ ಮತ್ತೊಂದೂರಿಗೆ ಮಕ್ಕಳಿಗೆ ವಿದ್ಯೆ ಕಲಿಸಲು ಶೈಕ್ಷಣಿಕೆ ತರಬೇತಿ ಕೊಡಿಸುವ ಸಲುವಾಗಿ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಅದರಲ್ಲೂ ಯುವತಿಯರನ್ನು ಕಳಿಸುವಾಗ ಹೃದಯವನ್ನು ಕೈಯಲ್ಲಿ ಹಿಡಿದುಕೊಂಡೆ ಕಳಿಸುವಂತ ಕಾಲವಿದು. ಯುವತಿ ವಿದ್ಯಾಭ್ಯಾಸ ಮುಗಿಸಿ ಮನೆಗೆ ಬರುವರೆಗೂ ಚಿಂತೆಯಲ್ಲಿ ಮುಳಗುವುದು ಸಹಜ. ಆದರೂ ಏನೆ ಆಗಲಿ ಧೈರ್ಯ ಮಾಡಿ ತಮ್ಮ ಮಕ್ಕಳು ಕಲಿತು ವಿದ್ಯಾವಂತರಾದರೆ ಸಾಕು ಎಂದು ಪಾಲಕರು ವಿದ್ಯಾಕೇಂದ್ರವೆನಿಸಿಕೊಂಡಿರುವ ಧಾರವಾಡಕ್ಕೆ ಕಳಿಸುತ್ತಾರೆ. ಆದರೆ ಅವರ ವಸತಿ, ಊಟ, ಭದ್ರತೆ, ಹೀಗೆಂದು ನೂರೆಂಟು ಪ್ರಶ್ನೆಗಳು ಪಾಲಕರಲ್ಲಿ ಉದ್ಭವಿಸುತ್ತವೆ. ಇದಕ್ಕೆ ಚಿಂತಿಸಲು ಅವಕಾಶ ನೀಡದ ಅಶ್ವಿನಿ ಪೇಯಿಗ್ ಗೆಸ್ಟ ತಮ್ಮ ಮಕ್ಕಳನ್ನು ಅತ್ಯಂತ ಕಾಳಜಿವಹಿಸುವ ಮಾದರಿ ವಿದ್ಯಾರ್ಥಿನಿ ನಿಲಯವಾಗಿರುವುದು ಸಂತಸದ ವಿಷಯವಾಗಿದೆ.
ಸರಳತೆಯಲ್ಲಿ ಸಾಗಿರುವ ಮಮತಾ ಮಹಾಂತೇಶ ನಾಡಗೌಡ ದಂಪತಿಗಳಿಗೆ ಅದೇನೋ ಇದ್ದಕಿಂದತೆ ಒಂದು ದಿನ ತಮ್ಮ ಜೀವನದ ಬೆಳಕಿನಲ್ಲಿ ಕತ್ತಲು ಆವರಿಸಿದಂತಾಯಿತು. ಮನೆ ತುಂಬ ಆಟವಾಡಿಕೊಂಡ ಮಗಳು ಅಶ್ವಿನಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಕಣ್ಣೆದುರಿಗೆ ಸಾವನ್ನಪ್ಪಿದಾಗ ದಂಪತಿಗಳಿಗೆ ಶಾಕ್ ಆದಂತಾಯಿತು. ಆ ನೋವು ಮರೆಯಲು ಸಾಧ್ಯವಾಗದೆ ಜೀವನದಲ್ಲಿ ಆಸಕ್ತಿಯಲು ಕಳೆದು ಕೊಂಡಿದ್ದರು. ಇದನ್ನರಿತ ಶರಣರೊಬ್ಬರು ದಂಪತಿಗಳಿಗೆ ಒಂದು ಉತ್ತಮ ಸಲಹೆ ನೀಡಿ ಅಶ್ವಿನಿ ಜನ್ಮದಿನದ ನಿಮಿತ್ಯವಾಗಿ ಅವಳ ಹೆಸರಲ್ಲಿ ಒಂದು ಸಂಸ್ಥೆ ಪ್ರಾರಂಭಿಸಿ ಅನ್ಯರ ಮಕ್ಕಳು, ಹೆಣ್ಣು ಮಕ್ಕಳನ್ನು ತಮ್ಮ ಮಡಿಲಲ್ಲಿ ಕಾಣುವಂತೆ ತಿಳಿಸಿದರಂತೆ.
ನೂರಾರು ಮೈಲಿನಿಂದ ಹತ್ತಾರು ಆಸೆ ಹೊತ್ತುಕೊಂಡು ಬರುವ ವಿದ್ಯಾರ್ಥಿನಿಯರಿಗೆ ಒಂದೆ ಸೂರಿನಡಿ 150 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಾಸ್ಥವ್ಯ ಮಾಡಲು ಸುಸಜ್ಜಿತವಾದ ಕೊಠಡಿ, ಶೌಚಾಲಯ, ಗ್ರಂಥಾಲಯ, ಅಡುಗೆ ಕೋಣೆ, ಸಭಾಭವನ ಏರ್ಪಡಿಸಿದರು. ಜಾತಿ ಮತ, ಮೇಲು ಕೀಳು, ಭೇದಭಾವವಿಲ್ಲದೆ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಹಗಳನ್ನು ವಿದ್ಯಾರ್ಥಿನಿಯರಿಂದಲೇ ಮಾಡಿಸುತ್ತಾ ವಿದ್ಯಾಭ್ಯಾಸಕ್ಕೆ ಬರುವವರಿಗೆ ಊಟ, ವಸತಿ, ಭದ್ರತೆ ಒದಗಿಸಿದ್ದಾರೆ. ಮಮತಾ ದಂಪತಿಗಳ ಮಾತಿನ ದಾಟಿ, ಸದುವಿನಯ, ಉತ್ತಮ ಮಾರ್ಗದರ್ಶನ, ಸಂಸ್ಕಾರದಿಂದವಿದ್ಯಾರ್ಥಿನಿಯರಿಗೆ ತಂದೆ ತಾಯಿಯರ ಪ್ರೀತಿ ಇಲ್ಲಿ ಲಭಿಸಿದಂತಾಗಿದೆ. ವೈದ್ಯಕೀಯ ಸೌಲಭ್ಯ, ಕಂಪ್ಯೂಟರ್ ತರಬೇತಿ, ಸ್ಪೀಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ ಹಾಗೂ ಕೇರಂ, ಕೋಕೋ, ವ್ಹಾಲಿಬಾಲ್, ಶಟಲ್ ಕಾಕ್ ತರಬೇತಿ ನೀಡುತ್ತಿದೆ. ಹುಟ್ಟು ಸಾವಿನ ನಡುವಿನ ದಿನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಯುವತಿಯರಿಗೆ ದಾರಿದೀಪವಾಗಿರುವ ಮಮತಾ ಅವರ ನಿಲಯವಿಂದು 6 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.
ಮಮತಾರವರ ಮನದಾಳದ ಮಾತು :- ಇಲ್ಲಿ ವಾಸಿಸಿ ಕಲಿತು ಹೋದ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಅವರ ಪಾಲಕರ ಹೆಸರನ್ನು ತಂದರೆ ಸಾಕು ಅದು ನಮಗೆ ದೇವರು ಕೊಟ್ಟ ವರ ಎನ್ನುವೆ. ಒಂದು ವಿದ್ಯಾರ್ಥಿ ನಿಲಯ ಅದು ದೇವಸ್ಥಾನವೆನ್ನುವೆ ನಾವು ಸಲ್ಲಿಸುವ ಸೇವೆ ಮತ್ತು ಸೇವಾ ಮನೋಭಾವನೆ ಭಗವಂತನಿಗೆ ತಲುಪಲಿ ಎನ್ನುತ್ತಾ ಅಶ್ವಿನಿಯನ್ನು ನೆನೆದರು.

loading...

LEAVE A REPLY

Please enter your comment!
Please enter your name here