ಮಾಧವಾನಂದರ ಕೋಡುಗೆ ಅಪಾರ

0
48
loading...

**ಸದಾನಂದ ಎಚ್ ಮಾಡಗ್ಯಾಳ
ಅರಟಾಳ 9: ದೇವರು ಎಂದೆ ಪ್ರಖ್ಯಾತರಾಗಿದ ವಿಜಯಪೂರ ಜಿಲ್ಹೆಯ ಇಂಡಿ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಕ್ರಾಂತಿಯೋಗಿ. ಮಾನವತಾವಾದಿ. ಸ್ವಾತಂತ್ತ್ಯ ಹೋರಾಟಗಾರ. ಬಾಲ ಬ್ರಹ್ಮಚಾರಿ. ನಿಜರಾಜಯೋಗಿ. ಧೀನಬಂದು ಶ್ರೀ ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರ.
ಅಭೂತಪೂರ್ವ ಅಧ್ಯಾತ್ಮಿಕ ಸಮೃದ ಪರಂಪರೆ ನಮ್ಮದು ಈ ನೆಲದಲ್ಲಿ ಎಂಥೆಂಥ ಮಹಿಮಾನ್ವತರು ಜನ್ಮ ತಾಳಿದರು ಜನಮಾನಸದಲ್ಲಿ ಎಂಥ ಪರಿವರ್ತನೆಯನ್ನ ತಂದರು ಜ್ಞಾನ ಭಕ್ತಿಭಾವದ ಅಮೃತಧಾರೆಯನ್ನೆರೆದು ಸತ್ಕರ್ಮ ದಾರಿಯತ್ತ ಬೆಳಕು ಚೆಲ್ಲಿದರು ತಮ್ಮ ಅಸಾದಾರಣ ವ್ಯಕ್ತಿತ್ವದಿಂದ ಸಾಮಾಜಿಕ ಪರಿವರ್ತನೆ ತಂದರು ಕಲ್ಯಾಣಕಾರಿ ಸಂದೇಶಗಳಿಂದ ಸೌಹಾರ್ದಪೂರ್ಣ ವಾತಾವರಣ ನಿರ್ಮಿಸಿದರು ಹೀಗೆ ನಮ್ಮ ಬಾಳಿನಲ್ಲಿ ಇವರೆ¯್ಲ ನಂದದ ದಾರಿದೀಪವಾದರು.
ಭಾರತಕಂಡ ಹಲವಾರು ಸಂತರಲ್ಲಿ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಯವರು ಒಬ್ಬರು. ಇಂದು ಶ್ರೀಗಳ ಜನ್ಮಶತಮಾನೋತ್ಸವ 02/11/1915 ರಲ್ಲಿ ಶಿವಪ್ರಭು ಹಾಗೂ ಮಾತೋಶ್ರೀ ಕಾಳಮ್ಮನವರ ಉದರದಲ್ಲಿ ಹುಬ್ಬಳ್ಳಿಯಲ್ಲಿರು ಜನಸಿದರು. ಜಮಖಂಡಿಯಿಂದ ಗೀರಮಲ್ಲೇಶ್ವರ ಮಾಹಾರಾಜರನ್ನ ಬೇಟ್ಟಿಯಾಗಿ ಉಪದೇಶ ಪಡೆದು ಸದ್ಗುರುಗಳು ಶಿವಪ್ರಭು ಅವರನ್ನ ನೋಡಿ ಸಾಕ್ಷಾತ ದೇವರ ಪ್ರತಿರುಪ ದರೆಗಿಳಿಯಲಿದೆ ಶ್ರೀಕೃಷ್ಣ ಕುರುಕ್ಷೆತ್ರ ಯುದ್ದದಲ್ಲಿ ಅರ್ಜುನನಿಗೆ ಭೋದಿಸಿದಂತೆ “ಯಾವಾಗ ಕಲಿಯುಗದಲ್ಲಿ ಅಧರ್ಮ ಹೆಚ್ಚುತದೆಯೋ ಅವಾಗ ನಾನು ಮತ್ತೆ ಹುಟ್ಟುತ್ತೆನೆ ಎಂದಿದ್ದನ್ನ ನೆನಪಿಸಿದ ಸಧ್ಗುರುಗಳು ಭಾರತಾಂಭೆಯ ಮೇಲೆ ದುಷ್ಟರ ಅಟ್ಟಹಾಸ,ಅನ್ಯಾಯ,ಅಧರ್ಮ,ಅನಾಚಾರ್ಯ,ಧುರ್ಗುಣಗಳು ತಾಂಡವಾಡುತ್ತಿವೆ ಭಾರತಮಾತೆ ಬಂದನದಲ್ಲಿ ಸಿಲುಕಿದಾಳೆ ಇದಕ್ಕೆ ಮುಕ್ತಿ ಕೊಡಲು ದೇವರ ಪ್ರತಿರೊಪ ಧರೆಗಿಳಿಯಲಿದೆ ಎಂದರು.
ಮಾಹಾದೇವರ ಜನ್ಮ : ನವಂಬರ 2 1915 ರಂದು ಜನ್ಮ ತಾಳಿ ಬಿದಿಗೆಯ ಚಂದ್ರನಂತ್ತೆ ಧರೆಗಿಳಿದು 13 ದಿವಸಗಳವರೆಗೆ ಯಾವದೆ ಚಲನವಲನ ದೇವರಲ್ಲಿ ಕಾಣಲಿಲ್ಲ ಶಿವಪ್ರಭು ಬಹುಬೇಗನೆ ಸಧ್ಗುರುಗಳಿಗೆ ತಿಳಿಸಿದರು ತಡಮಾಡದೆ ಬಂದ ಸಧ್ಗುರುಗಳು ದೇವರಿಗೆ ಉಪದೇಶಿಸಿ” ಜಗತ್ತಿನ ಕಲ್ಯಾಣ ನಿನ್ನಿಂದಾಗಬೇಕು ಭಾರತಾಂಭೆ ಬ್ರಿಟಿಷರ ಕಪಿಮುಷ್ಟಿಯಲ್ಲಿ ಸಿಕ್ಕು ನರಳುತಿದ್ದಾಳೆ ಆ ತಾಯಿಯನ್ನ ಮುಕ್ತಿಗೊಳಿಸು, ಕರ್ನಾಟಕ ಏಕೀಕರಣವಾಗಬೇಕು ಸಂಸ್ಥಾನ ವಿಲಿನೀಕರಣ ರೈತ ಸಮಸ್ಯ ಇವು ನಿನ್ನ ಕರ್ತವ್ಯ ಎಂದು ಸದ್ಗುರುಗಳು ಉಪದೇಶ ನೀಡಿದರು. ಮಗುವಾಗಿದ್ದಾಗಲೆ ಮಾತೋಶ್ರೀಗೆ ದೇವರು ಬಾಯಿಯಲ್ಲಿ ಬ್ರಹ್ಮಾಂಡ ತೋರಿಸಿದರು, ಮನೆಗೆ ಕಳ್ಳರು ಹೊಕ್ಕಾಗ ಚೆಟ್ಟನೆ ಚಿರಿ ತಂದೆ ತಾಯಿಯನ್ನ ಎಬ್ಬಿಸಿದ್ದು, ಸ್ನೇಹಿತರ ಜೋತೆ ಸ್ಮಶಾನದಲ್ಲಿ ಧ್ಯಾನ ಹಾವು ಹಿಡಿದು ಆಡಿಸಿದ್ದು ನನ್ನದು ದೇವರ ಪ್ರತಿರುಪ ಎಂದು ನಿರುಪಿಸಿದರು.
ಸ್ವಾತಂತ್ರ್ಯ ಹೊರಾಟದಲ್ಲಿ ಮಾಹಾದೇವರ ಪಾತ್ರ : ಒಂದುಕಡೆ ಬ್ರಿಟಿಷರ ಧರ್ಪ ಹೆಚ್ಚುತಿರುವುದನ್ನು ಗಮನಿಸಿದ ದೇವರು ಇಂಚಗೇರಿ ಮಠದ ಸಮಸ್ಥ ಸದ್ಬಕ್ತರಿಗೆ ಕರೆ ಕೋಟ್ಟು ಬ್ರಟಿಷರ ಧರ್ಪ ಮುರಿಯಲು ಒಗ್ಗಟ್ಟಿನಿಂದ ಹೋರಾಡಬೇಕು ನಮ್ಮ ಈ ಹೋರಾಟ ಬ್ರಿಟಿಷರಿಗೆ ಸಿಂಹಸ್ವಪ್ನವಾಗಬೇಕು ” ಗಾಂಧೀಜಿಯವರ ವಿಚಾರಗಳಲ್ಲಿ ನಂಬಿಕೆ ಇಟ್ಟು ಗಾಂಧೀ ತತ್ವಗಳ ಆದಾರಗಳ ಮೇಲೆ ಹೊರಾಡಬೇಕು” ಬ್ರಿಟಿಷರ ಧರ್ಪ ಮುರಿಯಲು ಶಸ್ತ್ರಾಸ್ತ್ರಗಳನ್ನು ಅಥಣಿ ತಾಲೂಕಿನ ಕೋಟ್ಟಲಗಿಯಲ್ಲಿ ತಯಾರಿಸಿ ಜತ್ತನ ಡಪ್ಳೆ ಸರ್ಕಾರಕ್ಕೆ ಪ್ರತಿರೋದಿ ಒಡ್ಡಿ ಹೋರಾಟದ ಜೊತೆಗೆ ಪವಾಡ ಮಾಡಿದರು, ಹೀಗೆ ಸೈನ್ಯ ಕಟ್ಟಿ ಹೋರಾಟ ಮಾಡುತಲೆ ” ಮಾಡು ಇಲ್ಲವೆ ಮಡಿ ” ಸಂದೇಶ ನಿಡಿ ಹೋರಾಟದ ಕಿಚ್ಚನ್ನ ಮತಷ್ಟು ಹಚ್ಚಿ ಕೊನೆಗೆ ಭಾರತಕ್ಕೆ ಸ್ವಾತಂತ್ರ್ಯ ತಂದು ಕೋಟ್ಟರು ಅಂದು ಕಟ್ಟಿ ಬೆಳಸಿದ ಮಹಾದೇವರ ಸ್ವತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಎಷ್ಟೋ ಹೋರಾಟಗಾರರಿಂದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವೆತನ ಪಡಿಯುತಿದ್ದಾರೆ ಸದ್ಗುರುಗಳು ಬಡವರ ಕಣ್ಣಿರು ಒರಿಸಿದ ನಿಜರಾಜಯೋಗಿಯಾಗಿದ್ದಾರೆ.

ಅಪರೂಪದ ಜಾತ್ಯಾತೀತ ಮಾನವ ಧರ್ಮಪೀಠ : ಶ್ರೀಕ್ಷೆತ್ರ ಇಂಚಗೇರಿಮಠ ಮಾದರಿಯ ಜಾತ್ಯಾತೀತ ಮಾನವಿಯ ತಳಹದಿಯ ಮಠಗಳಿಂದು ಬೇಕಾಗಿವೆ ಮಾಧವಾನಂದ ಪ್ರಭುಜಿಯಂಥಹ ಗುರುಗಳಿಂದು ಸಮಾಜಕ್ಕೆ ಬೇಕಾಗಿದ್ದಾರೆ ಅಂದ್ದು ಮಹಾದೇವರು ಹನ್ನೆರಡನೆ ಶತಮಾನದಲ್ಲಿ ಅರ್ಧಕ್ಕೆ ಉಳಿದ ಜಾತಿಪದ್ಧತಿಯನ್ನ ಕಿತ್ತೆಸೆಯಲು ಮುಂದಾಗಿ ಅಸ್ಪ್ರಶ್ಯತೆ ನಿರ್ಮೂಲನೆ ಹಾಗು ಜಾತ್ಯಾತಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿ ” ಅಂತರಜಾತಿಯ, ಅಂತರಧರ್ಮಿಯ 25 ಸಾವಿರಕ್ಕಿಂತ ಹೆಚ್ಚಾಗಿ ಅಧಿಕ ವಿವಾಹ ಮಾಡಿದರು” ಜಾತಿ ಪದ್ಧತಿ ಕೆವಲ ಮನುಷ್ಯ ತನ್ನ ಅನುಕಲಕ್ಕಾಗಿ ಮಾಡಿಕೋಂಡಿದ್ದು ಜಾತಿಯತೆಯನ್ನು ಅನಿಷ್ಟ ವ್ಯವಸ್ಥಯನ್ನ ದೇವರು ಸೃಷ್ಟಿಸಲಿಲ್ಲಾ ಎಂದು ಪ್ರತಿಯೊಬ್ಬರಿಗು ಕರೆ ಕೋಟ್ಟರು ಆರ್ಥಿಕ ಹಾಗು ಸಮಾಜಿಕ ಭದ್ರತೆಯ ಜೋತೆಗೆ ಅಧ್ಯಾತ್ಮದ ಭೋದನೆ ನೀಡಿದರು. ಇಂದು ಶ್ರೀ ಮಠದಲ್ಲಿ ಹಲವಾರು ಜಾತಿಯ ವ್ಯಕ್ತಿಗಳು ಒಟ್ಟಗೆ ಸೇರಿ ಒಂದೆ ಕುಟುಂಬದಂತ್ತೆ ಬದುಕುತಿದ್ದಾರೆ.

ಕರ್ನಾಟಕ ಏಕೀಕರಣದಲ್ಲಿ ಮಹಾದೇವರ ಪಾತ್ರ : ಹಲವಾರು ಪ್ರಾಂತಗಳಲ್ಲಿ ಹರಿದು ಹಂಚ್ಚಿಹೊಗಿದ್ದ ಕನ್ನಡ ನಾಡಿನ ನೆಲ ತುಂಡುಗಳನ್ನ ಒಂದೆ ರಾಜ್ಯವಾಗಿ ಮಾರ್ಪಡಿಸುವ ಹೋರಾಟದ ಬೆಂಬಲಾರ್ಥ 21 ದಿವಸಗಳ ಅಮರಣ ಉಪವಾಸ ಕೈಗೋಂಡು ಬಂದಿಸಲ್ಪಟವು ಗದಗ ದಾವಣಗೆರಿ ಹಾಗೂ ಹುಬ್ಬಳ್ಳಿಯ ಸದ್ದಾರೊಡಮಠದಲ್ಲಿ ಪರಷತ್ತಗಳನ್ನ ಸಂಘಟಿಸಿ ಸೆವೆಗೈದ ಕಿರ್ತಿ ಮಹಾದೇವರಿಗೆ ಸಲ್ಲಬೇಕು.

ಸಂಸ್ಥಾನಗಳ ವಿಲೀನಿಕರಣ : ಸ್ವಾತಂತ್ರ್ಯ ನಂತರ ಶ್ರೀ ಮಹಾದೇವರು ಜಮಖಂಡಿ ಜತ್ತ ರಾಮದುರ್ಗ ಮೈಸೂರ ಸಂಸ್ಥಾನಗಳು ಭಾರತ ಒಕ್ಕೂಟದಲ್ಲಿ ವಿಲಿನಗೊಳಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ಒಹಿಸಿದರಲ್ಲದೆ ರಜಾಕರ ಹಾವಳಿ ಎದುರಿಸಲು ಅನುಯಾಯಿಗಳನ್ನು ತೊಡಗಿಸಿದರು ರಾಷ್ಟ್ರಪ್ರೇಮಿ ಮಹಾದೇವರು.

ಉಳುವವನೆ ಭೂ ಒಡೆಯ : ದೇವರು ಸಹ ತನ್ನ ಬೆಸಾಯದ ಜಮಿನುಗಳನ್ನ ಬಿಟ್ಟು ಕೊಡದಿರಲು ಭಕ್ತಾದಿಗಳಿಗೆ ಉಪದೇಶಿಸಿ ಅವರ ಹೊರಾಟಕ್ಕೆ ಬೆಂಗಾವಲಾಗಿ ನಿಂತುಕೊಂಡರು ಎಲ್ಲೆಲ್ಲಿ ಸಮಸ್ಯ ಭಯ ಧು:ಖ ಅಸಾಹಾಯಕತೆ ದುರ್ಬಲತೆಯಿದೆ ಅಲ್ಲಿ ಮಹಾದೇವರ ಪ್ರವೇಶ ನಿಶ್ಚಿತ ಕೂಲಿಕಾರರಿಗಾಹಿ ನಿರಾಶ್ರಿತರಿಗಾಗಿ ಅಶ್ರಯಧಾತರಿಗಾಗಿ ಸತ್ಯಾಗ್ರಹ ಮಾಡಲು ಪ್ರತ್ಯಕ್ಷರಾದ ದೇವರೆ ಶ್ರೀ ಸದ್ಗುರುಗಳು.ದೇಶಕ್ಕೆ ಸಾಮೂಹಿಕ ಕೃಷಿ ಪದ್ದತಿಯನ್ನು ಮಟ್ಟ ಮೊದಲು ಪರಿಶಯಸಿದ ಮಾಧವಾನಂದರು ಕೃಷಿಯೋಗಿ ಎಂದೆ ಖ್ಯಾತಿ ಪಡೆದರು.ತಮ್ಮ ಶಿಷ್ಯವೃಂದದೊದಿಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಸಾಮೂಹಿಕ ಕೃಷಿ ಪದ್ದತಿ ಜಾರಿಗೆ ತಂದಿದು ಇದುವರೆಗೆ ಯಶಸ್ವಿಯುತವಾಗಿ ಮುಂದುವರೆದಿದೆ.

ಸರ್ವೊದಯ : ಸಂತ ವಿನೊಭಾ ಭಾವೆಯವರ ಸರ್ವೊದಯ ಕಾರ್ಯಕರ್ತರ ವಿನಂತಿಪೂರ್ವಕ ಕರೆಯ ಮೆರೆಗರ ಶ್ರೀ ಮಹಾದೇವರು ಸರ್ವೊದಯ ಆಂದೋಲನಕ್ಕೆ ಸಮರ್ಪಿಸಿಕೋಂಡು ಬಂದಿದ್ದು ಇಂದಿಗೂ ಮಠದಲ್ಲಿ ಗ್ರಾಮದಾನ, ಗ್ರಾಮಸ್ವರಾಜ್ಯ, ಪಾನ ಪ್ರತಿಬಂಧ, ಸ್ತ್ರಿಶಕ್ತಿ ಜಾಗ್ರತಿ ಗೋಹತ್ಯಾ ಪ್ರತಿಬಂದ ಜಗತ್ತಿನ ಕಲ್ಯಾಣ ಹಾಗೂ ಮಾನವ ಧರ್ಮದ ಉಧ್ದಾರಕ್ಕೆ ಫಾದಯಾತ್ರೆ ನಡೆಯುತಲೆಯಿದೆ.ಆರ್ಥಿಕ ಧಾರ್ಮಿಕ ಬದಲಾವಣೆ ತಂದು.ಮೂಡನಂಬಿಕೆ ಕಂದಾಚಾರ ನಿವಾರಿಸಿ.ವಿಭೂತಿ ರುದ್ರಾಕ್ಷಿ ಜನಿವಾರ ನಾಮಗಳ ಸಂಕೇತಗಳನ್ನಲದೆ ಪಲ್ಲಕಿ ಉತ್ಸವಾದಿಗಳನ್ನು ಹೋಗಳಾಡಿಸಿ ಶುದ್ದ ಖಾದಿದಾರಿಗಳಾಗಿ ದೇಶ ಭಕ್ತಿ.ಧರ್ಮಸಂಸ್ಥಾಪನೆ ಮಾಡಿದ ಮಹಾಮಾನವತಾವಾದಿ ಅವತಾರಿ ಪುರುಷ ಮಾಧವಾನಂದರು ಕಲಿಯುಗದ ದೇವರಾದರು.

ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ ಜನ್ಮಶತಮಾನೋತ್ಸವವನ್ನು ವiಹಾನಗರಿ ಬೆಂಗಳೂರಿನಲ್ಲಿ ಇಂದು ಆಚರಿಸುತ್ತಿದು ಇಂಚಗೇರಿಯ ಮಠದ ಸದ್ಗುರುಗಳಾದ ರೇವಣಸಿದ್ದೇಶ್ವರ ಮಹಾರಾಜರ ಪಾವನ ಸಾನಿದ್ಯೆದಲ್ಲಿ ಸಂಪ್ರದಾಯದ ಎಲ್ಲ ಕಾರ್ಯಕ್ರಮಗಳು ಜರುಗುವವು ತನ್ನನಿಮಿತ್ಯ ಈ ಲೇಖನ.

** ಮಾಧವಾನಂದ ಪ್ರಭುಜಿಯವರ ಜನ್ಮಶತಮಾನೋತ್ಸವವನ್ನು ರಾಜ್ಯಮಟ್ಟದಲ್ಲಿಂದು ಘನ ಸರಕಾರ ಹಾಗೂ ಸಂಪ್ರದಾಯದ ಅನುಯಾಯಿಗಳು ಆಚರಿಸುತ್ತಿರುವುದು ಸಂತೋಷದ ಸಂಗತಿ.-ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಇಂಚಗೇರಿ ಮಠ.

loading...

LEAVE A REPLY

Please enter your comment!
Please enter your name here