ಮಾಧ್ಯಮದವರಿಗೆ ರಕ್ಷಣೆ ನೀಡಲು ಪತ್ರಕರ್ತರಿಂದ ಮನವಿ

0
18
loading...

ರಾಯಬಾಗ 14: ತಾಲೂಕಿನ ಕುಡಚಿ ಪಟ್ಟಣದಲ್ಲಿ ದಿ.13 ರಂದು ಬುಧವಾರ ನಿಷ್ಪಕ್ಷವಾಗಿ ವರದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿ ವರದಿಗಾರ ಮತ್ತು ಅವರ ಸಹಾಯಕನ ಮೇಲೆ ಮಾಜಿ ಶಾಸಕ ಎಸ್.ಬಿ.ಘಾಟಗೆ ಅವರ ಬೆಂಬಲಿಗರು ಗುಂಡಾವರ್ತನೆ ಮಾಡಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಗುರುವಾರ ರಾಯಬಾಗ ತಾಲೂಕಾ ಪತ್ರಕರ್ತರು ತಹಶೀಲ್ದಾರ ಪಿ.ಎನ್.ನಾಗರಹಳ್ಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಖಾಸಗಿ ವಾಹಿನಿ ವರದಿಗಾರ ಮತ್ತು ಅವರ ಸಹಾಯಕನ ಮೇಲೆ ಹಲ್ಲೆ ನಡೆಸಿದ ಮಾಜಿ ಶಾಸಕರ ಬೆಂಬಲಿಗರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು. ನಮ್ಮ ಮನವಿಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ರಾಜ್ಯಾದ್ಯಾಂತ ಪತ್ರಕರ್ತರು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಇತ್ತೀಚೆಗೆ ಮಾಧ್ಯಮದವರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿದ್ದು, ಸರಕಾರ ಕೂಡಲೇ ಎಚ್ಚೆತ್ತುಕೊಂಡ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಲಖನ ಕಟ್ಟಿಕಾರ, ಪತ್ರಕರ್ತರಾದ ಸಂಭಾಜಿ ಚವ್ಹಾಣ, ಸುಧೀರ ಕಳ್ಳೆ, ಮಂಜುನಾಥ ಕರಾಕಾಯಿ, ಸಂತೋಷ ಗಿರಿ, ಅಬ್ದುಲಕಾದರ ಮಕಾನದಾರ, ಅಯ್ಯುಬ ಮುಲ್ಲಾ, ಅಮರೇಶ ತಾಳಿಕೋಟಿ, ವಸಂತ ಚವ್ಹಾಣ, ರಾಜು ಗಡ್ಕರಿ, ಅನೀಲ ಚವ್ಹಾಣ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here