ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

0
16
loading...

ಬಾಗಲಕೋಟ : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜನವರಿ 6 ರಂದು ಬೆಂಗಳೂರಿನಿಂದ ಹೆಲಿಕ್ಯಾಕ್ಟರ ಮೂಲಕ ಬೆಳಿಗ್ಗೆ 11.30ಕ್ಕೆ ಮುಧೋಳಕ್ಕೆ ಆಗಮಿಸಲಿದ್ದಾರೆ. ಮುಧೋಳದ ಪೊಲೀಸ್ ಪರೇಡ್ ಮೈದಾನದಲ್ಲಿ ಹಲಗಲಿ ಬಂಡಾಯದ ವೀರ ಜಡಗಣ್ಣ ಬಾಲಣ್ಣ ಅವರ 158ನೇ ಹುತಾತ್ಮ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ಮದ್ಯಾಹ್ನ 2.15ಕ್ಕೆ ಹೆಲಿಕ್ಯಾಪ್ಟರ ಮೂಲಕ ಗುಳೇದಗುಡ್ಡಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಪುರಸಭೆಯ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ವತಿಯಿಂದ ಗುಳೇದಗುಡ್ಡ ನಗರಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಸಂಜೆ 4.30ಕ್ಕೆ ಗುಳೇದಗುಡ್ಡದಿಂದ ಹೆಲಿಕ್ಯಾಪ್ಟರ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ

loading...

LEAVE A REPLY

Please enter your comment!
Please enter your name here