ರಸ್ತೆ ಕಾಮಗಾರಿಗೆ ಚಾಲನೆ

0
23
loading...

ಗೋಕಾಕ 20: ಗ್ರಾಮದಲ್ಲಿ ನಿರ್ವಹಿಸುವ ಕಾಮಗಾರಿಗಳು ಒಳ್ಳೆಯ ಗುಣಮಟ್ಟ ಕಾಯ್ದುಕೊಂಡಿರಬೇಕು. ಹಾಗೆಯೇ ಸಾರ್ವಜನಿಕರು ಕೂಡ ಹೊಸದಾಗಿ ಕಾಮಗಾರಿ ಕೈಗೊಂಡಾಗ ಬರಿ ತಕರಾರುಗಳನ್ನು ಮಾಡದೇ ಸಹಕಾರ ನೀಡಬೇಕೆಂದು ಗ್ರಾಮದ ಹಿರಿಯರಾದ ಪ್ರಕಾಶ ಮೇಟಿ ಅವರು ಅಭಿಪ್ರಾಯಪಟ್ಟರು.
ಅವರು, ಸಮೀಪದ ಲೋಳಸೂರ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ವಿಶೇಷ ಮುತುವರ್ಜಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಮಂಜೂರಿ ಮಾಡಿದ ಪರಿಶಿಷ್ಟ ಜ್ಯಾತಿಯ ಕಾಲೋಣಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಗ್ರಾಮದ ಅಭಿವೃದ್ದಿಗೆ ಪಕ್ಷ ಭೇಧ ಮರೆತು ಒಗ್ಗೂಡಿದರೆ ಮಾತ್ರ ಜನಪ್ರಿತಿನಿಧಿಗಳಿಂದ ಇನ್ನೂ ಹೆಚ್ಚೇಚ್ಚು ಅನುದಾನವನ್ನು ಗ್ರಾಮಕ್ಕೆ ತರಬಹುದಾಗಿದೆ. ಈ ಕಾರಣದಿಂದಾಗಿ ಗ್ರಾಮದಲ್ಲಿರುವ ಎಲ್ಲಾ ಗುಂಪುಗಳು ಪ್ರತಿಷ್ಟೆ ಮರೆತು ಒಂದಾಗಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಮಯದಲ್ಲಿ ಗ್ರಾಮ ಪಂಚಾಯತದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಚರಂಡಿ ನಿರ್ಮಿಸುವ ಕಾಮಗಾರಿಗಳಿಗೂ ಕೂಡ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಿದ್ದವ್ವ ನಿಡಗುಂದಿ, ಉಪಾಧ್ಯಕ್ಷರಾದ ಯಮನಪ್ಪ ಬಾಗಾಯಿ, ಊರ ಪ್ರಮುಖರಾದ ಮನೋಹರ ಗಡಾದ, ಕಲ್ಲಿನಾಥ ಪೂಜೇರಿ, ಹಾಲಪ್ಪ ಬಾಗಾಯಿ, ಪರಶುರಾಮ ಸುಣಂಜಿ, ಪುಂಡಲೀಕ ಗಡಾದ, ಜೋತೆಪ್ಪ ಗಡಾದ, ದುಂಡಪ್ಪ ಹುಣಶ್ಯಾಳ, ಸಿದ್ದಪ್ಪ ನಿಡಗುಂದಿ, ಎಚ್.ಎನ್.ಪಾಟೀಲ, ಸತ್ತೆಪ್ಪ ಬೆನಚಿನಮರ್ಡಿ, ವಿಠ್ಠಲ ಬಾಗಾಯಿ, ಬಲವಂತ ಗಡಾದ, ರಿಯಾಜ ಮಕಾನದಾರ, ಗುತ್ತಿಗೆದಾರ ಹನಮಂತ ಬಿ.ಕುರೇರ ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here