ರಾಜಕಾರಿಣಿಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ

0
18
loading...

ರಾಮದುರ್ಗ 9: ಉತ್ತರ ಕರ್ನಾಟಕದ ನರಗುಂದ ಬೈಲಹೊಂಗಲ್ ನವಲಗುಂದ ರಾಮದುರ್ಗಗಳಲ್ಲಿ ರೈತರು 6 ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿಗಳ ಜೋಡನೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ನೋಡಿದರೆ ರಾಜಕಾರಿಣಿಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲಾ ಎಂದು ಕಾಣುತ್ತದೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸ್ಥಳೀಯ ಮಹದಾಯಿ ಮತ್ತು ಕಳಸಾ ಬಂಡೂರಿ ನಾಲೆಗಳನ್ನು ಮಲಪ್ರಭೆ ನದಿಗೆ ಜೋಡನೆ ಮಾಡಬೇಕೆಂದು ಪಟ್ಟಣದ ಹುತಾತ್ಮ ಚೌಕದ ಎದರು ನಿರಂತರ ಧರಣಿಯ ರೈತ ಸೇನೆ ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾಡನಾಡಿ 15 ವರ್ಷಗಳಿಂದ ಅನೇಕ ರೈತರು ಈ ಯೋಜನೆಗೆ ತಮ್ಮ ಜೀವವನ್ನೆ ತ್ಯಾಗಮಾಡಿದ್ದಾರೆ, ಕೇಲವರು ಈ ಯೋಜನೆಯ ನೀರನ್ನು ಕುಡಿದು ಜೀವವನ್ನು ಬಿಡುತ್ತನೆ ಎನ್ನುವ ಹಲವಾರು ರೈತಪರ ಹೋರಾಟಗಾರರು ಇದ್ದಾರೆ ಇಂತಹ ರಾಜಕೀಯ ಪರಿಸ್ಥಿತಿ ಇರುವದರಿಂದ ಅವರ ಆಸೆ ನೆರವೇರುವ ಲಕ್ಷಣ ಕಾಣುತ್ತಿಲ್ಲ.ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ದೃಢ ನಿರ್ಧಾರ ತಗೆದುಕೊಳ್ಳುಂತಾ ನಾಯಕತ್ವ ಎದ್ದು ಕಾಣುತ್ತಿದೆ.
50 ಸಾವಿರ ಕೋಟಿ ಕರ್ಚು ಮಾಡಿದರೆ ಸಾಕು ಈಡಿ ನಮ್ಮ ಉತ್ತರ ಕರ್ನಾಟಕದ ನೀರಾವರಿಗಳು ಮುಗಿದು ಹೋಗುತ್ತವೆ ಎಂದು ತಿಳಿಸಿದು.
ರೈತ ಮುಖಂಡ ನಾವು ಎಲ್ಲ ರೈತು ಯಾವಾಗ ಉಗ್ರವಾದ ಪ್ರತಿಭಟನೆಗಳನ್ನು ಮಾಡುವದಿಲ್ಲವೊ ಅಲ್ಲಿಯವರೆಗೆ ಸರಕಾರಗಳು ರೈತರನ್ನು ತುಳಿಯುತ್ತವೆ ಉದ್ಯಮಿಗಳಿಗೆ ಮನೆ ಹಾಕುವ ಬದಲು ರೈತರ ಕಡೆ ಸ್ವಲ್ಪ ಗಮನಹರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು
ಕೇಂದ್ರ ಮತ್ತು ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕಾಗಿದೆ ಹಾಗೂ ರಾಜ್ಯಸರಕಾರಕ್ಕೆ ಹೇಳಿವದಿಷ್ಟೆ, ನಮ್ಮ ಹೊಟ್ಟೆ ನೋಯಿದರೆ ನಾವೆ ಅಜವಾನ ತಿನ್ನಬೇಕು ವಿನಹಾ ಬೇರೆಯಾರು ಅಲ್ಲ ಆದ್ದರಿಂದ ರಾಜ್ಯ ಸರಕಾರ ಕೇಂದ್ರದ ಮನವೊಲಿಸಿ ಮೂರು ರಾಜ್ಯಗಳ ಮಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರನ್ನು ಕೂಡಿಸಿ ಸಂದಾನದ ಮೂಲಕ ಸೂಕ್ಷವಾಗಿ ಈ ಯೋಜನೆಗೆ ಜಾರಿಗೆ ತಂದು ರೈತರಿ ಅನೂಕೂಲ ಮಾಡಿ ಕೊಡಬೇಕು ಎಂದರು
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯಾವುದಾದ ನೌಕರರ ವರ್ಗ ಧರಣಿ ಮಾಡಿದರೆ ಸಾಕು ಒಂದೆ ದಿನದಲ್ಲಿ ಅವರು ಬೇಡುವ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ರೈತರ ವಿಷಯಕ್ಕೆ ಬಂದಾಗ ಅವರ ನೀರು ಕೊಡಿ ಎಂದು ಹಲವಾರು ದಿನಗಳಿಂದ ಧರಣಿ ಮಾಡುತ್ತಿದ್ದರು, ಸರಕಾರಗಳು ಯಾಕೆ ಸ್ಪಂಧಿಸುತ್ತಿಲ್ಲ ಈವರಿಗೆ ಅನ್ನದಾತರ ಬಗ್ಗೆ ಕರುಣೆ ಕಣಿಕರ ಇಲ್ಲವೆ ಎಂದು ಕಾಣುತ್ತದೆ ಎಂದು ಹೇಳಿದರು
ರಾಮದುರ್ಗ ಸುಧಾರಣಾ ಸಮಿತಿಯ ಸದಸ್ಯ ವೆಂಟೇಶ ಹಿರೇರಡ್ಡಿ
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮುಸ್ತಾಫ ದಾವಲಭಾಯಿ, ನಿಂಗಪ್ಪ ಹುಚ್ಚನ್ನವರ, ಸ್ಥಳೀಯ ರೈತ ಸೇನೆಯ ಪದಾಧಿಕಾರಿಗಳಾದ ರಾಮನಗೌಡ ಪಾಟೀಲ, ಶಂಕರಗೌಡ ಪಾಟೀಲ ಎಸ್. ಎಚ್ ಪಾಟೀಲ, ಬೆನ್ನೂರ ಗ್ರಾಮದ ಹಿರಿಯರಾದ ಭೀಮಪ್ಪ ಕಂಬಳಿ,ಕರಿಯಪ್ಪ ತಿಮ್ಮಾಪೂರ, ಹನಮಂತ ಖಾನಾಪೂರ,ಅರ್ಜುನ ಮಾಳವಾಡ ಸೇರಿದಂತೆ ಅನೇಕ ರೈತ ಮುಖಂಡರು ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here