ರಾಷ್ಟ್ರೀಯ ಯುವ ದಿನ ನಿಮಿತ್ತ ವ್ಹಾಲಿಬಾಲ್ ಹಾಗೂ ಕಬ್ಬಡ್ಡಿ ಪಂದ್ಯಾವಳಿ

0
38
loading...


ಧಾರವಾಡ,: ವಿದ್ಯಾರ್ಥಿಗಳು ಸೋಲು ಗೇಲುವೇನ್ನದೇ ಸ್ಪರ್ಧಾತ್ಮಕ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ಕ್ರೀಡೆಗಳನ್ನು ಪ್ರೋತ್ಸಾಹಿಸಿ ಎಂದು ಎಸ್.ಜೆ.ಎಂ.ವಿ.ಮಹಾಂತ ಪ್ರಾಚಾರ್ಯ ಡಾ.ಎನ್.ಬಿ.ಸಂಗಾಪೂರ ಹೇಳಿದರು.
ಎಸ್.ಜೆ.ಎಂ.ವಿ.ಮಹಾಂತ ವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಏರ್ಪಡಿಸಿದ ವ್ಹಾಲಿಬಾಲ್ ಹಾಗೂ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕ್ರೀಡೆ ಅವಶ್ಯವಾಗಿದೆ. ಅಭ್ಯಾಸದಲ್ಲಿ ಆಸಕ್ತಿ ತೋರಿದಷ್ಟೆ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ತೋರಿಸಬೇಕು. ಕ್ರೀಡೆಯಿಂದ ಮನಸ್ಸಿಗೆ ಆನಂದ ಸಿಗುತ್ತದೆ ಜೊತೆಗೆ ದೇಹ ಬಲಿಷ್ಟಗೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕ್ರೀಡಾ ವಿಭಾಗದ ಚೆರಮನ್ ಪ್ರೊ.ಎಸ್.ಕೆ.ಕುಂದರಗಿ, ಡಿ.ನಾಗರಾಜಪ್ಪ, ಶ್ರೀಮತಿ ಜೆ.ಪಿ.ಯಂಡಿಗೇರಿ, ಡಾ.ಕೆ.ಎಸ್.ಶಾಂತಯ್ಯ, ಶ್ರೀಮತಿ ಎಂ.ಬಿ.ಅಳಗವಾಡಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here